ವಿಶಿಷ್ಟವಾಗಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಅಮೂಲ್ಯ ದಂಪತಿ, ಇತರರಿಗೆ ಮಾದರಿ

ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಅವರುಗಳು ಕೊರೊನಾ ಪ್ರಾರಂಭವಾದಾಗಿನಿಂದಲೂ ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Recommended Video

ಬೆಳಿಗ್ಗೆ 4:30ಕ್ಕೆ ಶುರುವಾಯ್ತು ಅಪ್ಪು ಪವರ್ ಫುಲ್ ವರ್ಕೌಟ್..! | Puneeth Rajkumar

ಉಚಿತ ಮಾಸ್ಕ್ ವಿತರಣೆ, ಉಚಿವ ದಿನಸಿ ವಿತರಣೆ, ತರಕಾರಿ ವಿತರಣೆ ಹೀಗೆ ಹಲವು ಸಾಮಾಜಿಕ ಕಾರ್ಯಗಳನ್ನು ಜಗದೀಶ್ ಮತ್ತು ಅಮೂಲ್ಯ ದಂಪತಿ ಮಾಡುತ್ತಾ ಬಂದಿದ್ದಾರೆ.

ನಿನ್ನೆ (ಮೇ 12) ಅಮೂಲ್ಯ ಹಾಗೂ ಜಗದೀಶ್ ಅವರ ಮದುವೆ ವಾರ್ಷಿಕೋತ್ಸವವಿದ್ದು, ಅದನ್ನೂ ಈ ಜೋಡಿ ವಿಶಿಷ್ಟವಾಗಿ ಆಚರಿಸಿಕೊಂಡಿದೆ. ಇವರ ಆಚರಣೆ ಇತರರಿಗೆ ಮಾದರಿಯಾಗಿದೆ.

ಗರ್ಭಿಣಿಯರಿಗೆ ಸೀಮಂತ

ಗರ್ಭಿಣಿಯರಿಗೆ ಸೀಮಂತ

ಅಮೂಲ್ಯ ಮತ್ತು ಜದಗೀಶ್ ತಮ್ಮ ವಿವಾಹ ವಾರ್ಷಿಕೋತ್ಸವ ಸಂದರ್ಭ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಸುಮಾರು 50 ಗರ್ಬಿಣಿ ಮಹಿಳೆಯರಿಗೆ ಸೀಮಂತ ಮಾಡಿದ್ದಾರೆ. ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನರ್ಸ್ ಭಾರತಿ ಅವರಿಗೆ ಸನ್ಮಾನ

ನರ್ಸ್ ಭಾರತಿ ಅವರಿಗೆ ಸನ್ಮಾನ

ಇದು ಮಾತ್ರವಲ್ಲದೆ ನಿನ್ನೆ ದಾದಿಯರ ದಿನವಾದ ಕಾರಣ, ಗರ್ಭಿಣಿ ಆಗಿದ್ದರೂ ಕರ್ತವ್ಯಕ್ಕೆ ಹಾಜರಾಗಿ ಸೇವೆಯಲ್ಲಿ ನಿರತವಾಗಿರುವ ನರ್ಸ್ ಭಾರತಿ ಅವರನ್ನು ಅಮೂಲ್ಯ ಮತ್ತು ಜಗದೀಶ್ ಸನ್ಮಾನಿಸಿದ್ದಾರೆ.

ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ

ಗರ್ಭಿಣಿಯರಿಗೆ ಪೋಷಕಾಂಶಯುಕ್ತ ಆಹಾರ

ಈ ತಮ್ಮ ಏರಿಯಾದ ಸುತ್ತ-ಮುತ್ತಲೂ ಇರುವ ಗರ್ಭಿಣಿಯರ ಮಾಹಿತಿ ಪಡೆದು ಅವರಿಗೆ ಪೋಷಕಾಂಶಯುಕ್ತ ಆಹಾರವನ್ನು ಜಗದೀಶ್ ಮತ್ತು ಅಮೂಲ್ಯ ದಂಪತಿ ತಲುಪಿಸುವ ಕಾರ್ಯ ಮಾಡಿದ್ದರು. ಇದು ಶ್ಲಾಘನೆಗೆ ಕಾರಣವಾಗಿತ್ತು.

ಉಚಿತ ಮಾಸ್ಕ್ ವಿತರಣೆ

ಉಚಿತ ಮಾಸ್ಕ್ ವಿತರಣೆ

ಅಮೂಲ್ಯ ದಂಪತಿ ಮಹಿಳೆಯರಿಂದ ಮಾಸ್ಕ್‌ಗಳನ್ನು ಹೊಲೆಸಿ ಅದನ್ನು ಉಚಿತವಾಗಿ ಹಂಚುವ ಕಾರ್ಯ ಮಾಡುತ್ತಿದ್ದಾರೆ. ಇದರ ಜೊತೆಗೆ ತಮ್ಮ ಏರಿಯಾದ ಸುತ್ತ-ಮುತ್ತ ಉಚಿತ ದಿನಸಿ, ಉಚಿತ ಆಹಾರ, ಉಚಿತ ತರಕಾರಿ, ಹಣ್ಣುಗಳ ವಿತರಣೆಯನ್ನೂ ಸಹ ಮಾಡುತ್ತಿದ್ದಾರೆ.

More from Filmibeat

English summary
Actress Amulya and Jagadeesh celebrated their marriage anniversary in govt hospitals by doing baby shower to pregnant women.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X