»   » ಟೂ ಪೀಸ್ ನಲ್ಲಿ ಅಮಿ ಜಾಕ್ಸನ್ ಸೌಂದರ್ಯ ಅನಾವರಣ

ಟೂ ಪೀಸ್ ನಲ್ಲಿ ಅಮಿ ಜಾಕ್ಸನ್ ಸೌಂದರ್ಯ ಅನಾವರಣ

By: ರವಿಕಿಶೋರ್
Subscribe to Filmibeat Kannada

ಶಂಕರ್ ನಿರ್ದೇಶನದ, ಚಿಯಾನ್ ವಿಕ್ರಮ್ ಅಭಿನಯದ 'ಐ' ಚಿತ್ರದ ಮೂಲಕ ದಕ್ಷಿಣ ಚಿತ್ರರಂಗದಲ್ಲಿ ಎಲ್ಲರ ಗಮನಸೆಳೆದ ಬೆಡಗಿ ಅಮಿ ಜಾಕ್ಸನ್. ಈ ಅಪೂರ್ವ ಚೆಲುವೆ ಮೈತುಂಬ ಬಟ್ಟೆ ಉಟ್ಟರೇನೇ ನೋಡಲು ಎರಡು ಕಣ್ಣು ಸಾಲದು. ಇನ್ನು ಟೂ ಪೀಸ್ ಎಂದರೆ ಹೇಗಿರಬೇಡ.

ಸದ್ಯಕ್ಕೆ ಅಮಿ ಜಾಕ್ಸನ್ ಅವರಿಗೆ ಕೈತುಂಬ ಆಫರ್ ಗಳು ಬರುತ್ತಿವೆಯಂತೆ. ಅವರ ಕಾಲ್ ಶೀಟ್ ಗಾಗಿ ನಿರ್ಮಾಪಕರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇದೇ ಸಂತಸದಲ್ಲಿ ಅವರು ಬಿಕಿನಿ ತೊಟ್ಟು ಪಡ್ಡೆಗಳು ಇನ್ನಷ್ಟು ಕಂಗೆಡುವಂತೆ ಮಾಡಿದ್ದಾರೆ. [ಶಂಕರ್ 'ಐ' ಚಿತ್ರ ವಿಮರ್ಶೆ]

"ಚಿತ್ರೋದ್ಯಮಕ್ಕೆ ಅಡಿಯಿಟ್ಟಾಗ ನನ್ನ ಮೇಲೆ ಯಾವುದೇ ಗಾಸಿಪ್, ಗಾಳಿಸುದ್ದಿ ಕೇಳಿಬಂದಾಗ ಗಡಗಡ ನಡುಗಿ ಹೋಗುತ್ತಿದ್ದೆ. ಗಾಸಿಪ್ ಗಳೆಲ್ಲಾ ಗಾಳಿಸುದ್ದಿಗಳಿದ್ದಂತೆ ಎಂದು ಗೊತ್ತಿದ್ದರೂ ಸಹಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೀಗ ಅವುಗಳಿಗೆ ಕಿವಿಗೊಡುತ್ತಿಲ್ಲ" ಎನ್ನುತ್ತಾರೆ ಈ ಸ್ನಿಗ್ಧ ಚೆಲುವೆ.

ಆರಂಭದಲ್ಲಿ ತನಗೆ ಯಾರೂ ಪರಿಚಯವಿರಲಿಲ್ಲ

ತಾನು 19ರ ಪ್ರಾಯದಲ್ಲಿರಬೇಕಾದರೆ 'ಏಕ್ ದಿವಾನಾ ಥಾ' ಚಿತ್ರದ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಟ್ಟೆ. ಆಗ ನನಗೆ ಚಿತ್ರೋದ್ಯಮದಲ್ಲಿ ಯಾರೂ ಪರಿಚಯ ಇರಲಿಲ್ಲ. ನನ್ನ ಬಗ್ಗೆ ಮಾಧ್ಯಮಗಳಲ್ಲಿ ಒಂದು ಸಣ್ಣ ಗಾಳಿಸುದ್ದಿ ಬಂದರೂ ನಡುಗಿ ಹೋಗುತ್ತಿದ್ದೆ ಎಂದಿದ್ದಾರೆ.

ಇಲ್ಲಿನ ಸಂಸ್ಕೃತಿ, ಭಾಷೆ ಗೊತ್ತಿರಲಿಲ್ಲವಂತೆ

ಈ ಬ್ರಿಟೀಷ್ ಬೆಡಗಿ ಭಾರತಕ್ಕೆ ಅಡಿಯಿಟ್ಟಾಗ ಇಲ್ಲಿನ ಸಂಸ್ಕೃತಿ, ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಒದ್ದಾಡಿದ್ದಾರೆ. ಬಳಿಕ ನಿಧಾನಕ್ಕೆ ಇಲ್ಲಿನ ಸಂಸ್ಕೃತಿ, ಭಾಷೆಯನ್ನೂ ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ ಅವರ ಜೀವನದಲ್ಲಿ ನಡೆದ ಒಂದು ಘಟನೆ ಮಾತ್ರ ಅವರನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ.

ಬಿಳಿ ತೊಗಲಿನ ಹುಡುಗಿ ಎಂದರೂ ತಲೆಕೆಡಿಸಿಕೊಳ್ಳಲಿಲ್ಲ

ಈ ಬಿಳಿ ತೊಗಲಿನ ಹುಡುಗಿಗೆ ನಮ್ಮ ದೇಶದಲ್ಲೇನು ಕೆಲಸ...ಇಲ್ಲಿನವರೇ ಯಾರೂ ಸಿಗಲಿಲ್ಲವೇ ಎಂಬ ಮಾತುಗಳನ್ನು ಕೇಳಬೇಕಾಯಿತು. ಈ ದೇಶವನ್ನು ತನ್ನ ಎರಡನೇ ತವರುಮನೆ ಎಂದೇ ಭಾವಿಸಿರುವ ಅಮಿ ಜಾಕ್ಸನ್ ಮನಸ್ಸಿನಲ್ಲಿ ಈ ಮಾತುಗಳು ಅಚ್ಚಳಿಯದೇ ಉಳಿದುಬಿಟ್ಟಿವೆ.

ಭಾರತ ನನ್ನ ಎರಡನೇ ತವರುಮನೆ

ಈ ಮಾತುಗಳಿಂದ ಬಹಳ ನೊಂದ ಅಮಿ ಜಾಕ್ಸನ್ ಬಳಿಕ ಈ ರೀತಿ ಮಾತನಾಡುತ್ತಿರುವುದು ಯಾರೋ ಕೆಲವರೆಂದೂ...ಇಲ್ಲಿನ ಶ್ರೀಸಾಮಾನ್ಯರು ಅಲ್ಲವೇ ಅಲ್ಲ, ಅವರೆಲ್ಲಾ ದೇಶ, ಮತ, ಜಾತಿಗೆ ಅತೀತವಾಗಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡರು. ಭಾರತ ದೇಶದ ದೊಡ್ಡತನ ಅದೇ. ಅದಕ್ಕಾಗಿಯೇ ನಾನು ಈ ದೇಶವನ್ನು ಅಮಿತವಾಗಿ ಪ್ರೀತಿಸುತ್ತೇನೆ ಎನ್ನುತ್ತಾರೆ ಅಮಿ ಜಾಕ್ಸನ್.

ಸದ್ಯಕ್ಕೆ ತಮಿಳು ಚಿತ್ರಗಳಲ್ಲಿ ಸಖತ್ ಬಿಜಿ

ತನ್ನ ಹದಿನಾರರ ಪ್ರಾಯದಲ್ಲೇ ಅಮಿ ಜಾಕ್ಸನ್ ಅವರು ಮಿಸ್ ಟೀನ್ ವರ್ಲ್ಡ್ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ಸದ್ಯಕ್ಕೆ ಈ ಚೆಲುವೆ ತಮಿಳು ಚಿತ್ರರಂಗದಲ್ಲಿ ಬಿಜಿಯಾಗಿದ್ದು ಮುಂದೊಂದು ದಿನ ತಮಿಳುನಾಡಿಗೆ ಸೆಟ್ಲ್ ಆದರೂ ಅಚ್ಚರಿಯಿಲ್ಲ.

English summary
British model and actress Amy Louise Jackson Sporting a two-piece blue-coloured swimsuit. The actress is now based in London travelling to Chennai and other places around the world for work.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada