»   » ಆನಂದ್ ಆಡಿಯೋ ಅಣ್ಣಾವ್ರ ವಿಶೇಷ ಹುಟ್ಟುಹಬ್ಬ

ಆನಂದ್ ಆಡಿಯೋ ಅಣ್ಣಾವ್ರ ವಿಶೇಷ ಹುಟ್ಟುಹಬ್ಬ

Posted By:
Subscribe to Filmibeat Kannada

ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಹುಟ್ಟುಹಬ್ಬವನ್ನು ವರ್ಣರಂಜಿತವಾಗಿ ಆಚರಿಸಲು ನಾಡಿನಾದ್ಯಂತ ಅಭಿಮಾನಿ ದೇವರುಗಳು ತುದಿಗಾಲಲ್ಲಿ ನಿಂತಿದ್ದಾರೆ. ಏಪ್ರಿಲ್ 24ರಂದು ರಕ್ತದಾನ, ನೇತ್ರದಾನದಂತಹ ಮಹತ್ವದ ಕೆಲಸಕಾರ್ಯಗಳನ್ನು ಮಾಡಿ ಅಭಿಮಾನಿಗಳು ಪುಳಕಿತರಾಗಲಿದ್ದಾರೆ.

ಇದೇ ಸಂದರ್ಭದಲ್ಲಿ ಕರ್ನಾಟಕದ ಪ್ರಮುಖ ಆಡಿಯೋ ಕಂಪನಿ ಆನಂದ್ ಆಡಿಯೋ ವಿಶೇಷ ಸಿಡಿಗಳನ್ನು ಹೊರತರುತ್ತಿದೆ. ಈ ವಿಶೇಷ ಸಿಡಿಗಳನ್ನು ಗೆಲ್ಲುವ ಅವಕಾಶವನ್ನು ಪ್ರತಿಯೊಬ್ಬರಿಗೂ ನೀಡುತ್ತಿದೆ. ಅಭಿಮಾನಿಗಳು ಮಾಡಬೇಕಾದದ್ದಿಷ್ಟೇ. [ಅಣ್ಣಾವ್ರ ಜೊತೆ ಒಂದು ಬೆಳಗ್ಗೆ: ಹೃದಯಶಿವ]

Dr Rajkumar birthday

ಗೂಗಲ್ ಪ್ಲಸ್ ಖಾತೆಗೆ ಲಾಗಿನ್ ಆಗಿ. ಆನಂದ್ ಆಡಿಯೋದ ಪುಟಕ್ಕೆ ಹೋದರೆ ಅಲ್ಲಿ ಏಪ್ರಿಲ್ 24ರಂದು ಅವರು ನೀಡುವ 'ಟಾಸ್ಕ್ ಆಫ್ ದಿ ಡೇ'ಯಲ್ಲಿ ಭಾಗವಹಿಸಬೇಕು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಹಸ್ತಾಕ್ಷರವುಳ್ಳ ಸಿಡಿಗಳನ್ನು ಗೆಲ್ಲುವ ಸುವರ್ಣಾವಕಾಶ ನಿಮ್ಮದಾಗಲಿದೆ.

ಈ ವಿಶೇಷ ಸಿಡಿಗಳನ್ನು ಆನಂದ್ ಆಡಿಯೋ ಗೆದ್ದವರಿಗೆ ವಿತರಿಸಲಿದೆ. ಅಣ್ಣಾವ್ರ ಬಗ್ಗೆ ಟಾಸ್ಕ್ ಎಂದರೆ ಬಹಳ ಸರಳ ಸುಲಭ ಅಲ್ಲವೇ. ಇನ್ನೇಕೆ ತಡ. ಇದರ ಜೊತೆಗೆ ಅಣ್ಣಾವ್ರ ಹಿಟ್ ಸಾಂಗ್ಸ್ ಕಾಲರ್ ಟ್ಯೂನ್ ಆಗಿಯೂ ಪಡೆಯಬಹುದು. ಇದಕ್ಕೆ ನೀವು ಮಾಡಬೇಕಾಗಿರುವುದು ಆನಂದ್ ಆಡಿಯೋ ಟ್ವಿಟ್ಟರ್ ಖಾತೆಗೆ ಭೇಟಿ ನೀಡಿದರೆ ನಿಮಗೆ ಸಂಪೂರ್ಣ ಮಾಹಿತಿ ಲಭ್ಯ. (ಒನ್ಇಂಡಿಯಾ ಕನ್ನಡ)

English summary
Anand Audio celebrating the Birth Anniversary of Dr.Rajkumar on 24th. Participate in the "Task of the day" on 24th April on the occasion of the Birth Anniversary of Maestro Dr. Raj Kumar and get a chance to win Autographed CD's from Puneeth Rajkumar & Shivarajkumar. 
Please Wait while comments are loading...