For Quick Alerts
ALLOW NOTIFICATIONS  
For Daily Alerts

ಮಸಣದ ಹೂವುಗಳ ಅರಳಿಸಲು ಹೊರಟ ಅಕ್ಕಿ

By Mahesh
|

'ಸಿನಿಮಾ ಮೈ ಡಾರ್ಲಿಂಗ್' ಎಂಬ ಚಿತ್ರ ನಿರ್ದೇಶಿಸುತ್ತಿರುವ ಟಿವಿ ನಿರೂಪಕ ಕಮ್ ನಟ ಗೌರೀಶ್ ಅಕ್ಕಿ ಅವರು ಈಗ ನಾಯಕ ನಟರಾಗಿ ಬಡ್ತಿ ಪಡೆದಿದ್ದಾರೆ. ಚಿತ್ರದ ಕಥಾವಸ್ತು ಹಾಗೂ ನಿರ್ದೇಶಕರ ಒತ್ತಾಯದ ಮೇರೆಗೆ ನಾಯಕ ನಟನಾದೆ ಎಂದು ಅಕ್ಕಿ ಅವರು ಹೇಳಿದ್ದಾರೆ. ಅಕ್ಕಿ ಅವರ ಕೈಗೆ 'ಕೆಂಗುಲಾಬಿ' ಸಿಕ್ಕಿದೆ.

ಬಸವನಗುಡಿ ದೊಡ್ಡ ಗಣಪತಿ ದೇಗುಲದಲ್ಲಿ ಮಂಗಳವಾರ ಸೆಟ್ಟೇರಿದ 'ಕೆಂಗುಲಾಬಿ' ಚಿತ್ರದ ಚಿತ್ರೀಕರಣ ಆರಂಭಗೊಂಡಿದೆ. ಸುಚೇಂದ್ರ ಪ್ರಸಾದ್ ಅಭಿನಯದ 'ಇಂಗಳೆ ಮಾರ್ಗ' ಎಂಬ ಸದಭಿರುಚಿ ಚಿತ್ರವನ್ನು ನೀಡಿ ಗಮನ ಸೆಳೆದಿದ್ದ ಘನಶ್ಯಾಮ ಭಾಂಡಗೆ ಅವರು ಕೆಂಗುಲಾಬಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಶ್ರೀಧರ ಜಾವೂರು ಅವರು ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಕಥೆಯೇ ಮುಖ್ಯ ಪಾತ್ರ ವಹಿಸಲಿದೆಯಂತೆ.

ಮಸಣದ ಹೂವುಗಳ ಬಗ್ಗೆ ಈ ಹಿಂದೆ ಅನೇಕ ಸಿನಿಮಾಗಳು ಬಂದಿರಬಹುದು. ಅದರೆ, ಈ ಚಿತ್ರ ಸಂಪೂರ್ಣವಾಗಿ ಉತ್ತರ ಕರ್ನಾಟಕ ಭಾಗದ ವೇಶ್ಯೆಯರ ಬದುಕಿನ ಚಿತ್ರಣ ನಿಮಗೆ ಕಟ್ಟಿಕೊಡುತ್ತದೆ. ಪತ್ರಕರ್ತ ಕಮ್ ಕಾದಂಬರಿಕಾರ ಹನುಮಂತ ಹಾಲಿಗೇರಿ ಅವರ 'ಕೆಂಗುಲಾಬಿ' ಕಾದಂಬರಿ ಅದೇ ಹೆಸರಿನಲ್ಲಿ ಚಿತ್ರವಾಗುತ್ತಿದೆ. ಚಿತ್ರಗಳ ಕೃಪೆ: ಗೌರೀಶ್ ಅಕ್ಕಿ ಅವರ ಫೇಸ್ ಬುಕ್ ಪುಟ.ಚಿತ್ರದ ಪಾತ್ರವರ್ಗ ಇನ್ನಿತರ ಮಾಹಿತಿ ಮುಂದೆ ನೋಡಿ...

ಹಲವು ಹೊಸತುಗಳ ಸಮಾಗಮ

ಹಲವು ಹೊಸತುಗಳ ಸಮಾಗಮ

ಟಿವಿ ನಿರೂಪಕಿ ರಜನಿ ಹಾಗೂ ನಿರೂಪಕ ಗೌರೀಶ್ ಅಕ್ಕಿ ಅವರು ಮೊದಲ ಬಾರಿಗೆ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಯೋಗಿತಾ ಅವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಶ್ರೀಧರ್ ಜಾವೂರು ಅವರಿಗೂ ನಿರ್ದೇಶಕರಾಗಿ ಇದು ಮೊದಲ ಅನುಭವ. ಉತ್ತರ ಕರ್ನಾಟಕದ ಜನಜೀವನದ ಬಗ್ಗೆ ಚಿತ್ರಗಳಿಲ್ಲ ಎಂಬ ಕೊರಗನ್ನು ಈ ಚಿತ್ರ ನೀಗಿಸಲಿದೆ. ಜೊತೆಗೆ ವೇಶ್ಯಾವೃತ್ತಿಯ ಬಗ್ಗೆ ಒಂದಷ್ಟು ಅರಿವು ಮೂಡಿಸಲಿದೆ.

ಗೌರೀಶ್ ಅಕ್ಕಿ ಅವರಿಗೆ ಏನು ಪಾತ್ರ

ಗೌರೀಶ್ ಅಕ್ಕಿ ಅವರಿಗೆ ಏನು ಪಾತ್ರ

ಸರ್ಕಾರೇತರ ಸಂಸ್ಥೆಯೊಂದರ ಸದಸ್ಯನಾಗಿ ಬಾಗಲಕೋಟೆ ಭಾಗಕ್ಕೆ ಕಾಲಿಡುವ ನಾಯಕ ಅಲ್ಲಿನ ವೇಶ್ಯೆಯೊಬ್ಬಳನ್ನು ಕತ್ತಲ ಕೂಪದಿಂದ ಹೊರಕ್ಕೆ ತಂದು ಸಮಾಜದ ಮುಖ್ಯವಾಹಿನಿಗೆ ಸೇರಿಸುತ್ತಾನೆ. ಸಮಾಜಕ್ಕೆ ಒಂದು ಸಂದೇಶದ ಜೊತೆಗೆ ಪ್ರೇಮಕಥೆಯೂ ಹಾಸುಹೊಕ್ಕಿದೆ. ಪ್ರಥಮ ಬಾರಿಗೆ ಪೂರ್ಣಪ್ರಮಾಣದ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಸಂತಸವಾಗಿದೆ ಎಂದು ಗೌರೀಶ್ ಅಕ್ಕಿ ಹೇಳಿದ್ದಾರೆ.

ಹನುಮಂತ ಹಾಲಗೇರಿ ಅವರ ಕಾದಂಬರಿ ಕೆಂಗುಲಾಬಿ

ಹನುಮಂತ ಹಾಲಗೇರಿ ಅವರ ಕಾದಂಬರಿ ಕೆಂಗುಲಾಬಿ

ಮ್ಯಾಗಜೀನ್ ನಲ್ಲಿ ಓದಿ

ಕೆಂಗುಲಾಬಿಗೆ ಶುಭಹಾರೈಕೆಗಳು

ಕೆಂಗುಲಾಬಿಗೆ ಶುಭಹಾರೈಕೆಗಳು

ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಚ್‌.ಎಸ್‌. ದೊರೆಸ್ವಾಮಿ, ವಿಜಯವಾಣಿ ಸಂಪಾದಕ ಹರಿಪ್ರಕಾಶ್ ಕೋಣೆಮನೆ,ಶ್ವಾಸಗುರು ವಚನಾನಂದ ಸೇರಿದಂತೆ ಹಲವಾರು ಮಂದಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹೊಸಬರ ಸಮಾಗಮದಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಫಿಲ್ಮಿಬೀಟ್ ತಂಡದಿಂದಲೂ ಶುಭ ಹಾರೈಕೆಗಳು

English summary
Anchor turned director Gawrish Akki is now Hero for movie named Kengulabi. This movie is based on a novel of the same name by Hanumantha Haligere and is directed by Sridhar.The film is being produced by Ghanshyam Bhandage who had earlier produced 'Ingale Marga'.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more