»   » ಅನೀಶ್ ತೇಜಸ್ವರ್ 'ಅಕಿರಾ' ಕುರುಸೋವಾನಾ?

ಅನೀಶ್ ತೇಜಸ್ವರ್ 'ಅಕಿರಾ' ಕುರುಸೋವಾನಾ?

Posted By: ಜೀವನರಸಿಕ
Subscribe to Filmibeat Kannada

ಅಂದುಕೊಂಡಂತೆ ಆಗಿದ್ರೆ ಅನೀಶ್ ತೆಜಸ್ವರ್ ಅವರು 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಟೀಂ ನಿರ್ಮಾಣದ 'ಬಜ್ವಾರ್' ಚಿತ್ರದಲ್ಲಿ ನಟಿಸಬೇಕಿತ್ತು. 'ಬಹುಪರಾಕ್' ಕೈ ಹಿಡಿಯದಿರೋದ್ರಿಂದ ಸುನಿ ಹೊಸ ಚಿತ್ರ ನಿರ್ಮಾಣಕ್ಕೆ ಕೈಹಾಕಿಲ್ಲ.

ಆದ್ರೆ ಅನೀಶ್ ತೇಜಸ್ವರ್ 'ಎಂದೆಂದೂ ನಿನಗಾಗಿ' ಮತ್ತು 'ನನ್ ಲೈಫಲ್ಲಿ' ಚಿತ್ರಗಳ ನಂತರ ಸ್ವಲ್ಪ ಗೆಟಪ್ ಚೇಂಜ್ ಮಾಡ್ಕೊಂಡು ಹೊಸ ಚಿತ್ರದಲ್ಲಿ ಅಭಿನಯಿಸ್ತಿದ್ದಾರೆ. ಆ ಚಿತ್ರದ ಹೆಸರು 'ಅಕಿರ'. [ನನ್ ಲೈಫ್ ಅಲ್ಲಿ ಚಿತ್ರ ವಿಮರ್ಶೆ]

Anish Tejashwar workout for six pack look

ಕನ್ನಡದ ಡಿಕ್ಷನರಿಯಲ್ಲಿ 'ಅಕಿರ' ಅನ್ನೋ ಪದ ಸಿಕ್ಕೋದಿಲ್ಲ. ಲೂಸಿಯಾ ಥರಹದ್ದೇ ಇದೂ ಮತ್ತೊಂದು ಕ್ಯೂರಿಯಾಸಿಟಿ ಹುಟ್ಟಿಸೋ ಟೈಟಲ್ ಇರಬಹುದು. ಇನ್ನು ಜಗತ್ತು ಕಂಡ ಅದ್ಭುತ ನಿರ್ದೇಶಕ 'ರೋಶೋಮನ್'ದಂತಹಾ ಚಿತ್ರ ಕೊಟ್ಟ ಜಪಾನ್ ನಿರ್ದೇಶಕ ಅಕಿರ ಕುರುಸೋವಾನ ಹೆಸರಿಗೂ ಈ ಸಿನಿಮಾಗೂ ಲಿಂಕ್ ಇದೆಯಾ ಗೊತ್ತಿಲ್ಲ.

Anish Tejashwar workout for six pack look2

ಆದ್ರೆ ಅನೀಶ್ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಬಾಡಿಯನ್ನೂ ಬಿಲ್ಡ್ ಮಾಡೋ ಪ್ರಯತ್ನ ಮಾಡ್ತಿದ್ದಾರಂತೆ. ಈ ಹಿಂದೆ ಪೊಲೀಸ್ ಕ್ವಾರ್ಟಸ್, ಕಾಫಿ ವಿತ್ ಮೈ ವೈಫ್ ಹಾಗೂ ನಮ್ ಏರಿಯಾಲ್ ಒಂದಿನಾ ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದ ಅನೀಶ್ ತೇಜಸ್ವರ್ ಮತ್ತೊಂದು ಚಿತ್ರ ಇದು. ಈ ಬಾರಿ ಭಿನ್ನ ಗೆಟಪ್ ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗುತ್ತಿದ್ದಾರೆ.

English summary
Budding Kannada actor Anish Tejaswar to sporting six pack for his forthcoming movie Akira. Lohit Nanjappa is giving training to him.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada