»   » 10 ಎಣಿಸುವಷ್ಟರಲ್ಲೇ ಟೀಸರ್ ನೋಡಿ ಅನೂಪ್ ಗೆ ವಿಶ್ ಮಾಡಿ

10 ಎಣಿಸುವಷ್ಟರಲ್ಲೇ ಟೀಸರ್ ನೋಡಿ ಅನೂಪ್ ಗೆ ವಿಶ್ ಮಾಡಿ

Posted By: ಸೋನು ಗೌಡ
Subscribe to Filmibeat Kannada

ಕಾಲಿವುಡ್ ನಲ್ಲಿ ಚೀಯಾನ್ ಅಂತಾನೇ ಖ್ಯಾತಿ ಗಳಿಸಿರುವ 'ಐ' ಚಿತ್ರದ ಲಿಂಗೇಸನ್ ಇದೀಗ '10 ಎಂಡ್ರದುಕುಲ್ಲೆ' ಎನ್ನುವ ಚಿತ್ರದ ಮೂಲಕ ಮತ್ತೆ ಅಭಿಮಾನಿಗಳದೆರು ಪ್ರತ್ಯಕ್ಷವಾಗಿದ್ದಾರೆ.

ಅಂದ ಹಾಗೆ ಇದು ತಮಿಳು ಚಿತ್ರವಾದರೂ ಇಲ್ಲಿ ಕನ್ನಡಿಗರಿಗೆ ಸ್ವಲ್ಪ ಹೆಚ್ಚಿನ ಪಾಲು ಇದೆ. ಯಾಕಂತೀರಾ, ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರು ವಿಕ್ರಂ ಹಾಗೂ ಸಮಂತಾ ರುತು ಪ್ರಭು ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ '10 ಎಂಡ್ರದುಕುಲ್ಲೆ' ಚಿತ್ರಕ್ಕೆ ಹಿನ್ನಲೆ ಸಂಗೀತ ನೀಡಿದ್ದಾರೆ.

ರೋಡ್ ಥ್ರಿಲ್ಲರ್ ಆಧಾರಿತ ಚಿತ್ರ ಕಥೆಯನ್ನು ಹೊಂದಿರುವ '10 ಎಂಡ್ರದುಕುಲ್ಲೆ' ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ನಿರ್ದೇಶಕ ವಿಜಯ್ ಮಿಲ್ಟನ್ ಆಕ್ಷನ್-ಕಟ್ ಹೇಳಿರುವ '10 ಎಂಡ್ರದುಕುಲ್ಲೆ' ಚಿತ್ರದ ಟೀಸರ್ ಇಲ್ಲಿದೆ ನೋಡಿ..

Anoop Seelin BGM rocks in Vikram's Tamil movie '10 Enradhukulla

ಚೀಯಾನ್ ವಿಕ್ರಂ ಅವರ 'ಐ' ಚಿತ್ರ ಯಶಸ್ಸು ಗಳಿಸಿದ ನಂತರ ಮತ್ತೊಮ್ಮೆ ಸಿಂಪಲ್ ಲುಕ್ ನಲ್ಲಿ ರೋಡ್ ಚೇಸಿಂಗ್ ಇರುವ ಥ್ರಿಲ್ಲರ್ ಚಿತ್ರದ ಮೂಲಕ ಪ್ರೇಕ್ಷಕರೆದುರು ಹಾಜರಾಗಿದ್ದಾರೆ.

ಇದಕ್ಕಿಂತ ಮೊದಲು ವಿಜಯ್ ಮಿಲ್ಟನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ತಮಿಳಿನ 'ಗೋಲಿ ಸೋಡ' ಚಿತ್ರಕ್ಕೆ ಅನೂಪ್ ಸೀಳಿನ್ ಅವರು ಹಿನ್ನಲೆ ಸಂಗೀತ ನೀಡಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

Anoop Seelin BGM rocks in Vikram's Tamil movie '10 Enradhukulla

ಕನ್ನಡದ ಮ್ಯೂಸಿಕಲ್ ಹಿಟ್ ಚಿತ್ರಗಳಾದ ಸತೀಶ್ ನಿನಾಸಂ 'ಲವ್ ಇನ್ ಮಂಡ್ಯ' ಹಾಗು ಅಜೇಯ್ ರಾವ್ 'ರೋಜ್' ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ ಅನೂಪ್ ಸೀಳಿನ್ ತಮಿಳು ಚಿತ್ರಕ್ಕೂ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಲೂಸ್ ಮಾದ ಯೋಗಿ ಅಭಿನಯದ 'ಸಿದ್ಲಿಂಗು' ಚಿತ್ರದ ಹಾಡುಗಳ ಸಂಗೀತ ನಿರ್ದೇಶನಕ್ಕೆ ಉತ್ತಮ ಸಂಗೀತ ನಿರ್ದೇಶಕ ಎನ್ನುವ ಕಿರೀಟ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಅದೇನೆ ಇರಲಿ ಇತ್ತೀಚೆಗೆ ಕನ್ನಡಿಗರು ಪರಭಾಷೆಯಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವುದು ಕನ್ನಡಿಗರಾದ ನಮಗೆ ಸಂತೋಷದ ವಿಚಾರನೇ ಅಲ್ವಾ.

English summary
Tamil movie '10 Enradhukulla' Official Teaser released. Music director Anoop Seelin who did the background score for 'Goli Soda' does. Now the re-recording for this film as well. '10 Enradhukulla' feature Tamil actor Vikram, Actress Samantha in the lead role. The movie is directed by Vijay Milton.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada