»   » 'ಯಜಮಾನ' ದರ್ಶನ್ ಮುಂದೆ ತೊಡೆ ತಟ್ಟಿ ನಿಲ್ಲುವ ಖತರ್ನಾಕ್ ಕೇಡಿ ಇವರೇ.!

'ಯಜಮಾನ' ದರ್ಶನ್ ಮುಂದೆ ತೊಡೆ ತಟ್ಟಿ ನಿಲ್ಲುವ ಖತರ್ನಾಕ್ ಕೇಡಿ ಇವರೇ.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 51ನೇ ಸಿನಿಮಾ 'ಯಜಮಾನ'. ವಿನಯ ಪರ್ವತ 'ಯಜಮಾನ' ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. 'ಯಜಮಾನ'ನಾಗಿ ದರ್ಶನ್ ಬಿಳಿ ಶರ್ಟ್ ಹಾಗೂ ಬಿಳಿ ಪಂಚೆ ತೊಟ್ಟು ಕಂಗೊಳಿಸಿರುವ ಫೋಟೋ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

'ಯಜಮಾನ' ಚಿತ್ರಕ್ಕಾಗಿ ಮೈಸೂರಿನಲ್ಲಿ ಬೃಹತ್ ಸೆಟ್ ನಿರ್ಮಿಸಲಾಗಿದೆ. ದರ್ಶನ್ ಜೊತೆಗೆ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್ ಅಭಿನಯಿಸುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ.

ಇದೀಗ ಬಂದಿರುವ ಸುದ್ದಿ ಏನಪ್ಪಾ ಅಂದ್ರೆ, 'ಯಜಮಾನ' ದರ್ಶನ್ ಮುಂದೆ ತೊಡೆ ತಟ್ಟಿ ನಿಲ್ಲಲು ಮುಂಬೈನಿಂದ ಖತರ್ನಾಕ್ ಕೇಡಿ ಒಬ್ಬರು ಬರ್ತಿದ್ದಾರೆ. ಅದ್ಯಾರು ಅಂತೀರಾ.? ಸಂಪೂರ್ಣ ವಿವರ ಇಲ್ಲಿದೆ ನೋಡಿ...

'ಇವರೇ' ನೋಡಿ 'ಯಜಮಾನ' ವಿಲನ್

'ಯಜಮಾನ' ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿರುವವರು ಇವರೇ... ಹೆಸರು ಅನೂಪ್ ಸಿಂಗ್ ಠಾಕೂರ್.

ದರ್ಶನ್ ಗೆ ಸವಾಲು ಹಾಕಲು ಬಂದ 'ಸಿಂಗಂ 3' ವಿಲನ್

'ರೋಗ್' ಸಿನಿಮಾ ನೋಡಿದ್ದೀರಾ.?

ಕಳೆದ ವರ್ಷ ಬಿಡುಗಡೆ ಆದ 'ರೋಗ್' ಚಿತ್ರವನ್ನ ನೀವು ನೋಡಿದ್ರೆ, ನಿಮಗೆ ಅನೂಪ್ ಸಿಂಗ್ ಠಾಕೂರ್ ಪರಿಚಯ ಇದ್ದೇ ಇರುತ್ತೆ. 'ರೋಗ್' ಸಿನಿಮಾದಲ್ಲಿ ಸೈಕೋ ಆಗಿ ನಟಿಸಿದ್ದ ಅನೂಪ್ ಸಿಂಗ್ ಠಾಕೂರ್ ಇದೀಗ 'ಯಜಮಾನ' ಚಿತ್ರದಲ್ಲೂ ದರ್ಶನ್ ಮುಂದೆ ಅಬ್ಬರಿಸಲಿದ್ದಾರೆ.

ಶುರುವಾಯ್ತು ಯಜಮಾನನ ದರ್ಬಾರ್

ಅನೂಪ್ ಜೊತೆಗೆ ಮತ್ತಿಬ್ಬರು ವಿಲನ್.!

'ಯಜಮಾನ' ಸಿನಿಮಾದಲ್ಲಿ ಅನೂಪ್ ಸಿಂಗ್ ಠಾಕೂರ್ ಮಾತ್ರ ವಿಲನ್ ಅಲ್ಲ. ಅನೂಪ್ ಸಿಂಗ್ ಠಾಕೂರ್ ಜೊತೆಗೆ ರವಿಶಂಕರ್ ಹಾಗೂ ಧನಂಜಯ್ ಕೂಡ ದರ್ಶನ್ ಗೆ ಸವಾಲು ಹಾಕಲಿದ್ದಾರೆ.

ಅಂದು-ಇಂದು ಕನ್ನಡಕ್ಕೆ ಒಬ್ಬರೇ ಯಜಮಾನ !

ಮತ್ತೊಂದು ಕನ್ನಡ ಸಿನಿಮಾದಲ್ಲಿ ಅನೂಪ್ ಬಿಜಿ

ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ 'ಉದ್ಘರ್ಷ' ಚಿತ್ರದಲ್ಲಿ ಅನೂಪ್ ಸಿಂಗ್ ಠಾಕೂರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಟಾಲಿವುಡ್ ನಲ್ಲೂ ಅನೂಪ್ ಗೆ ಡಿಮ್ಯಾಂಡ್

ಟಾಲಿವುಡ್ ನಲ್ಲಿ ಅಲ್ಲು ಅರ್ಜುನ್ ಅಭಿನಯದ 'ನಾ ಪೇರು ಸೂರ್ಯ, ನಾನು ಇಲ್ಲು ಇಂಡಿಯಾ' ಚಿತ್ರದಲ್ಲಿ ಖಡಕ್ ವಿಲನ್ ಆಗಿ ಅನೂಪ್ ಸಿಂಗ್ ಠಾಕೂರ್ ನಟಿಸುತ್ತಿದ್ದಾರೆ.

ಮಿಸ್ಟರ್ ವರ್ಲ್ಡ್ ಅನೂಪ್

ಚಿತ್ರರಂಗಕ್ಕೆ ಪರಿಚಯ ಆಗುವ ಮುನ್ನ ಜಿಮ್ನ್ಯಾಸ್ಟ್ ಆಗಿದ್ದ ಅನೂಪ್ ಸಿಂಗ್ ಠಾಕೂರ್ ಪುರುಷರ ಫಿಟ್ನೆಸ್ ಫಿಸಿಕ್ ವಿಭಾಗದಲ್ಲಿ ಮಿಸ್ಟರ್ ಇಂಡಿಯಾ (ಬೆಳ್ಳಿ), ಮಿಸ್ಟರ್ ಏಷಿಯಾ (ಕಂಚು) ಮತ್ತು ಮಿಸ್ಟರ್ ವರ್ಲ್ಡ್ (ಚಿನ್ನ) ಪಟ್ಟ ಗೆದ್ದಿದ್ದಾರೆ.

English summary
Anoop Singh Thakur to play villain role in Darshan starrer 'Yajamana'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada