For Quick Alerts
  ALLOW NOTIFICATIONS  
  For Daily Alerts

  ಅನುರಾಗ್ ಕಶ್ಯಪ್ ಜೊತೆ ಭಿನ್ನ ಕತೆಯೊಂದಿಗೆ ಬರಲಿದ್ದಾರೆ ನಟಿ ತಾಪ್ಸಿ ಪನ್ನು

  |

  ತೆಲುಗು ಸಿನಿರಂಗದ ಸಾಧಾರಣ ಕಮರ್ಷಿಯಲ್ ಸಿನಿಮಾಗಳ ಮೂಲಕ ತಮ್ಮ ಸಿನಿ ಜರ್ನಿ ಪ್ರಾರಂಭಿಸಿದ ತಾಪ್ಸಿ ಪ್ನನ್ನು ಈಗ ಭಿನ್ನ ಮಾದರಿಯ, ಹೋರಾಟದ ದನಿಯುಳ್ಳ ಸಿನಿಮಾಗಳ ಮೂಲಕವೇ ಸುಪ್ರಸಿದ್ಧರು.

  ಪಿಂಕ್, ತಪ್ಪಡ್, ಮುಲ್ಕ್, ಮನ್‌ ಮರ್ಜಿಯಾ, ಬದ್ಲಾ ರೀತಿಯ ಸಿನಿಮಾಗಳ ಮೂಲಕ ಪ್ರಬುದ್ಧ ನಟಿ ಎಂದು ಸಾಬೀತುಪಡಿಸಿರುವ ತಾಪ್ಸಿ ಪನ್ನು, ಕತೆಗಳ ಆಯ್ಕೆಯಲ್ಲಿಯೂ ಸಹ ಇತರ ನಾಯಕಿಯರಿಗಿಂತಲೂ ಬಹು ಭಿನ್ನ ಎಂದು ಗುರುತಿಸಿಕೊಂಡಿದ್ದಾರೆ.

  ಸಾಮಾಜಿಕ ಕಥಾ ಹಂದರವುಳ್ಳ ಸಿನಿಮಾಗಳನ್ನು ಸತತವಾಗಿ ಮಾಡಿದ್ದ ತಾಪ್ಸಿ ಪನ್ನು ಏಕತಾನತೆಯನ್ನು ಮುರಿದು ಹೊಸ ಮಾದರಿಯ, ಹೊಸ ರೀತಿಯ ಥ್ರಿಲ್ಲರ್ ತಕಾ ಹಂದರವುಳ್ಳ ಸಿನಿಮಾ ಮಾಡಲು ಕೈ ಹಾಕಿದ್ದಾರೆ.

  ಬಹಳಾ ಭಿನ್ನ ಕತೆಯುಳ್ಳ ಸಿನಿಮಾ

  ಬಹಳಾ ಭಿನ್ನ ಕತೆಯುಳ್ಳ ಸಿನಿಮಾ

  ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಒಟ್ಟಿಗೆ ಸೇರಿ ಸಿನಿಮಾ ಮಾಡುತ್ತಿದ್ದು, 'ಟೈಂ ಟ್ರಾವೆಲರ್' (ಕಾಲದ ಗಡಿಗಳೇ ಇಲ್ಲದೆ ಚಲಿಸುವ ವ್ಯಕ್ತಿ)ಯ ಕತೆಯುಳ್ಳ ಸಿನಿಮಾ ಇದಾಗಿರಲಿದೆ. ಸಾಕಷ್ಟು ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿರಲಿದೆಯಂತೆ.

  ಕ್ರೈಂ ಕತೆಗಳಿಗೆ ಖ್ಯಾತರು ಅನುರಾಗ್ ಕಶ್ಯಪ್

  ಕ್ರೈಂ ಕತೆಗಳಿಗೆ ಖ್ಯಾತರು ಅನುರಾಗ್ ಕಶ್ಯಪ್

  ಅನುರಾಗ್ ಕಶ್ಯಪ್, ನೈಜ ಮಾದರಿಯ ಸಿನಿಮಾಗಳಿಗೆ ಹಾಗೂ ಕ್ರೈಂ ಕತೆಗಳಿಗೆ ಬಹಳ ಖ್ಯಾತರು. ಗ್ಯಾಂಗ್ಸ್ ಆಫ್ ವಾಸೆಪುರ್, ರಮಣ ರಾಘವ್, ಘೋಸ್ಟ್ ಸ್ಟೋರಿಸ್ ರೀತಿಯ ಸಿನಿಮಾಗಳನ್ನು ಮಾಡಿ ಖ್ಯಾತರಾಗಿದ್ದವರು. ಇದೀಗ ಅವರು ನೈಜವಲ್ಲದ ಕತೆಯಳ್ಳ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  ಮನ್‌ಮರ್ಜಿಯಾದಲ್ಲಿ ಒಂದಾಗಿದ್ದ ಅನುರಾಗ್, ತಾಪ್ಸಿ

  ಮನ್‌ಮರ್ಜಿಯಾದಲ್ಲಿ ಒಂದಾಗಿದ್ದ ಅನುರಾಗ್, ತಾಪ್ಸಿ

  ತಾಪ್ಸಿ ಪನ್ನು ಮತ್ತು ಅನುರಾಗ್ ಕಶ್ಯಪ್ ಈ ಮೊದಲು 'ಮನ್‌ಮರ್ಜಿಯಾ' ಸಿನಿಮಾಕ್ಕಾಗಿ ಒಟ್ಟಿಗೆ ಕೆಲಸ ಮಾಡಿದ್ದರು. ಆ ಸಿನಿಮಾದಲ್ಲಿ ತಾಪ್ಸಿ ಮುಖ್ಯ ನಟಿಯಾಗಿದ್ದರೆ, ನಿರ್ದೇಶನ ಅನುರಾಗ್ ಕಶ್ಯಪ್‌ ದು. ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಸಹ ಇದ್ದರು.

  ಎರಡು ಸಿನಿಮಾ ಬಳಿಕ ಹೊಸ ಸಿನಿಮಾ

  ಎರಡು ಸಿನಿಮಾ ಬಳಿಕ ಹೊಸ ಸಿನಿಮಾ

  ಪ್ರಸ್ತುತ ಬಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ತಾಪ್ಸಿ, ಹಸೀನ್ ದಿಲ್‌ರುಬಾ ಮತ್ತು ರಶ್ಮಿ ರಾಕೆಟ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಗಳ ಚಿತ್ರೀಕರಣದ ನಂತರ ಈ ಅನುರಾಗ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ.

  English summary
  Manmarzia combination Anurag kashyap and Taapsee Pannu teamed up for different kind of movie. Shooting will start soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X