For Quick Alerts
  ALLOW NOTIFICATIONS  
  For Daily Alerts

  'ಕನ್ನಡ ರಾಜ್ಯೋತ್ಸವ'ಕ್ಕೆ ಕನ್ನಡಾಭಿಮಾನ ಮೆರೆದ ಅನುಷ್ಕಾ ಶೆಟ್ಟಿ

  |
  Anushka Shetty is a proud Kannadiga and never forgets her roots | FILMIBEAT KANNADA

  ಕರ್ನಾಟಕದಲ್ಲಿ ಹುಟ್ಟಿ ಬೆಳೆದು, ಹೊರ ದೇಶ ಹಾಗೂ ಹೊರ ರಾಜ್ಯಗಳಿಗೆ ಹೋಗಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಂಡ ಅನೇಕರು ಕಣ್ಣಮುಂದೆ ಇದ್ದಾರೆ. ರಾಜ್ಯ ಬಿಟ್ಟು ಹೋದ್ಮಲೆಯೂ ಅನೇಕರಲ್ಲಿ ಕನ್ನಡ ಮತ್ತು ಕನ್ನಡಿಗರ ಮೇಲಿನ ಪ್ರೀತಿ-ಅಭಿಮಾನ ಹಾಗೆ ಉಳಿದುಕೊಂಡಿರುತ್ತೆ. ಇನ್ನು ಕೆಲವರು ಯಶಸ್ಸಿನ ಅಮಲಿನಲ್ಲಿ ಮಾತೃಭೂಮಿಯನ್ನ ಮರೆತು ಬಿಡುತ್ತಾರೆ.

  ಇಂತಹ ಉದಾಹರಣೆಗಳು ಚಿತ್ರರಂಗದಲ್ಲಿ ಹೆಚ್ಚು ನೋಡಬಹುದು. ಕರ್ನಾಟಕದಿಂದ ಹೋಗಿ ಬೇರೆ ಇಂಡಸ್ಟ್ರಿಗಳಲ್ಲಿ ಸ್ಟಾರ್, ಸೂಪರ್ ಸ್ಟಾರ್ ಗಳಾದವರು ತುಂಬ ಜನ ಇದ್ದಾರೆ. ಆದರೆ ನಮ್ಮ ನಾಡಿನ ಮೇಲೆ ಅವರ ಅಭಿಮಾನ ಅಷ್ಟಕಷ್ಟೆ.

  ಕನ್ನಡ ರಾಜ್ಯೋತ್ಸವ: ಯಾವ ಸ್ಟಾರ್ ಏನೆಂದು ಶುಭಕೋರಿದ್ರು?ಕನ್ನಡ ರಾಜ್ಯೋತ್ಸವ: ಯಾವ ಸ್ಟಾರ್ ಏನೆಂದು ಶುಭಕೋರಿದ್ರು?

  ಈ ವಿಚಾರದಲ್ಲಿ ಮಂಗಳೂರು ಹುಡುಗಿ ಅನುಷ್ಕಾ ಶೆಟ್ಟಿ ಅವರನ್ನ ವಿಶೇಷವಾಗಿ ಪರಿಗಣಿಸಲೇ ಬೇಕು. ಹುಟ್ಟಿದ್ದು, ಬೆಳೆದಿದ್ದು ಕರ್ನಾಟಕದಲ್ಲೇ ಆದರೂ, ವೃತ್ತಿ ಜೀವನ ಕಂಡುಕೊಂಡಿದ್ದು ಮಾತ್ರ ಬೇರೆ ಇಂಡಸ್ಟ್ರಿಯಲ್ಲಿ. ಆದರೂ, ಆನುಷ್ಕಾ ಶೆಟ್ಟಿ ಆ ಕನ್ನಡ ಅಭಿಮಾನ, ಪ್ರೀತಿ ಮಾತ್ರ ಒಂಚೂರು ಕಮ್ಮಿಯಾಗಿಲ್ಲ. ಮುಂದೆ ಓದಿ....

  ಕನ್ನಡದಲ್ಲಿ ಶುಭಕೋರಿದ ಕನ್ನಡತಿ

  ಕನ್ನಡದಲ್ಲಿ ಶುಭಕೋರಿದ ಕನ್ನಡತಿ

  ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಕನ್ನಡದಲ್ಲಿಯೇ ಕನ್ನಡಿಗರಿಗೆ ಶುಭಾಶಯ ಕೋರಿದ್ದಾರೆ. ಅನುಷ್ಕಾ ಅವರು ಈ ಶುಭಾಶಯ ಕಂಡು, ಕರುನಾಡಿನ ಜನರು ಬಹಳ ಖುಷಿಯಾಗಿದ್ದು, ಅನುಷ್ಕಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  ವರ್ಷವಿಡೀ ಸಂಭ್ರಮಿಸೋಣ

  ವರ್ಷವಿಡೀ ಸಂಭ್ರಮಿಸೋಣ

  ''ಈ ದಿನ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವಲ್ಲಿ ಹೆಮ್ಮೆ ಪಡೋಣ ಮತ್ತು ವರ್ಷವಿಡೀ ಪ್ರತಿಯೊಂದು ಕ್ಷಣವನ್ನೂ ಹೀಗೆ ಮುಂದುವರಿಸೋಣ. ಪ್ರಪಂಚದಾದ್ಯಂತ ಇರುವ ಎಲ್ಲಾ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು'' ಎಂದು ಅನುಷ್ಕಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

  ಕನ್ನಡದಲ್ಲಿ ತಾಯಿಗೆ ವಿಶ್ ಮಾಡಿದ್ದ ಅನುಷ್ಕಾ

  ಕನ್ನಡದಲ್ಲಿ ತಾಯಿಗೆ ವಿಶ್ ಮಾಡಿದ್ದ ಅನುಷ್ಕಾ

  ಈ ಹಿಂದೆ ಜುಲೈ ತಿಂಗಳಲ್ಲಿ ಅನುಷ್ಕಾ ಶೆಟ್ಟಿ ಅವರ ತಾಯಿಯ ಹುಟ್ಟುಹಬ್ಬವಿತ್ತು. ಆ ಸಂದರ್ಭದಲ್ಲಿ ಕನ್ನಡ ಭಾಷೆಯಲ್ಲಿ ವಿಶ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಮ್ಮನಿಗೆ ಶುಭಕೋರಿದ್ದ ಅನುಷ್ಕಾ ''ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮ'' ಎಂದು ಬರೆದುಕೊಂಡಿದ್ದರು. ಅನುಷ್ಕಾ ಅವರ ಈ ಪೋಸ್ಟ್ ಕೂಡ ಭಾರಿ ಸದ್ದು ಮಾಡಿತ್ತು.

  ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.!ತಾಯಿ ಮತ್ತು ತಾಯ್ನಾಡಿನ ಮೇಲಿನ ಅನುಷ್ಕಾ ಪ್ರೀತಿ ನಿಜಕ್ಕೂ ಮೆಚ್ಚುವಂತದ್ದು.!

  ಅಣ್ಣಾವ್ರ ಹುಟ್ಟುಹಬ್ಬಕ್ಕೂ ವಿಶ್

  ಅಣ್ಣಾವ್ರ ಹುಟ್ಟುಹಬ್ಬಕ್ಕೂ ವಿಶ್

  ಈ ಹಿಂದೆ ಏಪ್ರಿಲ್ 24 ರಂದು ಡಾ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ಅನುಷ್ಕಾ ಶೆಟ್ಟಿ ಫೇಸ್ ಬುಕ್ ಮೂಲಕ ಶುಭ ಕೋರಿದ್ದರು. ಅಣ್ಣಾವ್ರ ಫೋಟೋ ಹಂಚಿಕೊಂಡು ಶುಭಾಶಯ ತಿಳಿಸಿದ್ದರು.

  ಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ ಕಂಡು ರಶ್ಮಿಕಾ ವಿರುದ್ಧ ಕೆಂಡಕಾರುತ್ತಿರುವ ನೆಟ್ಟಿಗರುಅನುಷ್ಕಾ ಶೆಟ್ಟಿ ಕನ್ನಡ ಪ್ರೇಮ ಕಂಡು ರಶ್ಮಿಕಾ ವಿರುದ್ಧ ಕೆಂಡಕಾರುತ್ತಿರುವ ನೆಟ್ಟಿಗರು

  ಕನ್ನಡದಲ್ಲೆ ಮಾತನಾಡುವ ಅನುಷ್ಕಾ

  ಕನ್ನಡದಲ್ಲೆ ಮಾತನಾಡುವ ಅನುಷ್ಕಾ

  ಬೇರೆ ಭಾಷೆಯಲ್ಲಿ ಅನುಷ್ಕಾ ಶೆಟ್ಟಿ ಎಷ್ಟೆ ದೊಡ್ಡ ಸ್ಟಾರ್ ಆಗಿದ್ದರೂ, ಕೆಲವು ಟಿವಿ ಸಂದರ್ಶನದಲ್ಲಿ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಖುಷಿಯಿಂದ ಮಾತನಾಡಿರುವ ಉದಾಹರಣೆಯೂ ಇದೆ. ತೆಲುಗು ಸಂದರ್ಶನದಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡಿಗರ ಮೆಚ್ಚುಗೆ ಗಳಿಸಿದ್ದರು. ಕರ್ನಾಟಕಕ್ಕೆ ಬಂದಾಗಲೆಲ್ಲಾ ಕನ್ನಡದಲ್ಲೇ ಮಾತನಾಡುತ್ತಾರೆ.

  English summary
  Karnataka based south indian actress anushka shetty has wishes Kannada Rajyotsava for kannadigas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X