For Quick Alerts
  ALLOW NOTIFICATIONS  
  For Daily Alerts

  ಚಲನಚಿತ್ರ ನಟನೆ, ಗಾಯನ, ಸಂಗೀತ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ

  |

  ಬೆಂಗಳೂರು, ಡಿಸೆಂಬರ್ 10, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು 2019 ನೇ ಸಾಲಿನ ಮೇ ತಿಂಗಳಲ್ಲಿ ಚಲನಚಿತ್ರ ನಟನೆ, ಹಿನ್ನಲೆ ಗಾಯನ, ವಾದ್ಯ ಸಂಗೀತ ಪರೀಕ್ಷೆಗಳನ್ನು ಸಂಘಟಿಸುವ ಬಗ್ಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಆದ್ದರಿಂದ ನಿಮ್ಮ ಸಂಸ್ಥೆಯ ಅಭ್ಯರ್ಥಿಗಳ ದಾಖಲಾತಿ ಪಟ್ಟಿಯನ್ನು ಕರ್ನಾಟಕ ವಾರ್ತಾ ಮತ್ತು ಪ್ರಚಾರ ಇಲಾಖೆ, ಬೆಂಗಳೂರು ಅವರಿಂದ ಅನುಮೋದನೆ ಪಡೆದು ಮಂಡಳಿಗೆ ಸಲ್ಲಿಸುವುದು.

  ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಚಲನಚಿತ್ರ ನಟನೆ ಮತ್ತು ಹಿನ್ನಲೆ ಗಾಯನ/ವಾದ್ಯ ಸಂಗೀತ ಪರೀಕ್ಷೆಗೆ ರೂ 1300/- ಪ್ರತಿ ವಿದ್ಯಾರ್ಥಿಗೆ. ಸಂಸ್ಥೆಯ ನೋಂದಣಿ ಶುಲ್ಕ ರೂ 1000/-. ಮಾನ್ಯತೆ ಪಡೆಯದ ಸಂಸ್ಥೆಯಿಂದ ಬಂದಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಹಾಗೂ ಸರ್ಕಾರದಿಂದ ಅನುಮತಿ ನೀಡಲಾದ ವಿಷಯಗಳಿಗೆ ಮಾತ್ರ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸುವುದು. ಹೀಗೆ ಅರ್ಜಿ ಸಲ್ಲಿಸುವಾಗ ಸರ್ಕಾರಿ ಆದೇಶದ ಜೆರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ಸಲ್ಲಿಸುವುದು. ಇಲಾಖಾ ನಿಯಮಾನುಸಾರ ವಿದ್ಯಾರ್ಥಿಗಳ ಹಾಜರಾತಿ/ದಾಖಲಾತಿ ಕಡ್ಡಾಯವಾಗಿರುತ್ತದೆ.

  ಅನುಮೋದನಾ ಪ್ರಾಧಿಕಾರ ನಿಗಧಿ ಪಡಿಸುವ ದಾಖಲಾತಿ ಮಿತಿಗೆ ಬದ್ದರಾಗಿರುವುದು ಕಡ್ಡಾಯವಾಗಿರುತ್ತದೆ. ಪರೀಕ್ಷಾ ಮಂಡಳಿಯ ಎಲ್ಲಾ ಶುಲ್ಕವನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ನೆಫ್ಟ್ ಚಲನ್ ಮೂಲಕ ಪಾವತಿಸುವಂತೆ ಜಾರಿಗೆ ತರಲಾಗಿದೆ. ಅದರಂತೆ ಸಂಸ್ಥೆಯ ಪ್ರಾಚಾರ್ಯರು ವಿದ್ಯಾರ್ಥಿಗಳಿಂದ ಪಡೆದ ಪರೀಕ್ಷಾ ಶುಲ್ಕದ ಮೊಬಲಿಗಿಗೆ ನೆಫ್ಟ್ ಚಲನ್ ಮೂಲಕ ಶುಲ್ಕ ಪಾವತಿಸಿ ಮೂಲ ಚಲನ್ ನ್ನು ನಾಮಿನಲ್ ರೋಲ್‍ನೊಂದಿಗೆ ಮೇಲೆ ತಿಳಿಸಿರುವ ದಿನಾಂಕದೊಳಗೆ ನೇರವಾಗಿ ಶ್ರೀಮತಿ ಶೋಭ ಜೆ.ಆರ್. ಸಹಾಯಕ ನಿರ್ದೇಶಕರು, ಕರ್ನಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು -03 ಈ ವಿಳಾಸಕ್ಕೆ ಕಳುಹಿಸಬಹುದಾಗಿದೆ.

  ನೆಫ್ಟ್ ಚಲನ್ ಲಗತ್ತಿಸದೇ ಇದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಶುಲ್ಕ ಪಾವತಿಸಲು ಅನುಕೂಲವಗುಂತೆ ನೆಫ್ಟ್ ಚಲನ್ ಪ್ರತಿಯನ್ನು ಇದೊಂದಿಗೆ ರವಾನಿಸಿದೆ. ಅಗತ್ಯವಿದ್ದಲ್ಲಿ ನೆಫ್ಟ್ ಚಲನ್ ನ್ನು ಜೆರಾಕ್ಸ್ ಮಾಡಿಕೊಸಿಕೊಳ್ಳಬೇಕು. ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಸ್ವೀಕರಿಸಲು ಕೊನೆಯ ದಿನಾಂಕ: 17-12-2018, ಸಂಸ್ಥೆಯವರು ಪರೀಕ್ಷಾ ಶುಲ್ಕ ಪಾವತಿಸಿ ನೆಫ್ಟ್ ಚಲನ್ ಪಡೆಯಲು ಕೊನೆ ದಿನಾಂಕ: 19-12-2018, ನೆಫ್ಟ್ ಚಲನ್ ಹಾಗೂ ಪರೀಕ್ಷಾ ಅರ್ಜಿಗಳನ್ನು ಮಂಡಳಿಗೆ ತಲುಪುವಂತೆ ಸಲ್ಲಿಸಲು ಕೊನೆಯ ದಿನಾಂಕ: 27-12-2018.ದಿನಾಂಕ: 17-12-2018 ರಿಂದ 07-01-2019 ರವರೆಗೆ ಪ್ರತಿ ವಿದ್ಯಾರ್ಥಿಗೆ ರೂ 150 ರಂತೆ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಅಂತಿಮ ದಿನಾಂಕ. 7-01-2019 ದಂಡ ಶುಲ್ಕದೊಂದಿಗೆ ಪಾವತಿಸಿದ ಶುಲ್ಕವನ್ನು ಸೆಫ್ಟ್ ಚಲನ್ ಮೂಲಕ ಜಮಾ ಮಾಡುವ ದಿನಾಂಕ: 09-01-2019 ಹಾಗೂ ದಂಡ ಶುಲ್ಕ ಪಾವತಿಸಿದ ಅಭ್ಯರ್ಥಿಗಳ ಅರ್ಜಿಗಳೂ/ಪೂರಕ ದಾಖಲೆ ಹಾಗೂ ನೆಫ್ಟ್ ಚಲನ್‍ನ್ನು ಮಂಡಳಿಗೆ ಸಲ್ಲಿಸುವ ದಿನಾಂಕ 11-01-2019. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ ಹಾಗೂ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ. ಆದ್ರೆ ದಂಡದಿಂದ ವಿನಾಯಿತಿ ಇರುವುದಿಲ್ಲ.

  ಮಾನ್ಯತೆ ಪಡೆದ ಚಲನಚಿತ್ರ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಮಂಡಳಿಯಿಂದ ನೀಡಿರುವ ಅರ್ಜಿ ನಮೂನೆಗಳನ್ನು ಹಾಗೂ ಮೂರು ಪಾಸ್‍ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರಗಳನ್ನು ಪಡದು ಪ್ರಾಆಂಶುಪಾಲರವರಿಂದಲೇ ದೃಢೀಕರಿಸಿ ಒಂದನ್ನು ಅರ್ಜಿ ಅಂಟಿಸಿ ಉಳಿದೆರಡನ್ನು ಬೇರೆಯಾಗಿ ಒಂದು ಆಲ್ಬಂ ತಯಾರಿಸಿ ಕಳುಹಿಸಬೇಕು. ಪುನರಾವರ್ತಿತ ಅಭ್ಯಥಿಗಳು ಸಹ ಮಂಡಳಿಯಿಂದ ನೀಡಿರುವ ಅರ್ಜಿಗಳನ್ನೇ ಉಪಯೋಗಿಸಬೇಕು. ಅರ್ಜಿಗಳನ್ನು ಮತ್ತು ಭಾವಚಿತ್ರಗಳನ್ನು ಪ್ರಾಂಶುಪಾಲರ ದ್ಢಢೀಕರಣದೊಂದಿಗೆ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

  English summary
  Application opens for acting, singing and music exam held by Karnataka Secondary Education Examination Board.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X