Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: 15 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಿಸ್ಸಿಂಗ್ ಬಾಯ್' ಹುಡುಕಲು ಸ್ಯಾಂಡಲ್ ವುಡ್ ಗೆ ಬಂದ ಮಲ್ಲುಕುಟ್ಟಿ
ಇತ್ತೀಚೆಗೆ ಕನ್ನಡ ಚಿತ್ರರಂಗದ ಕಡೆಗೆ ಬೇರೆ ಭಾಷೆಯ ನಟಿಮಣಿಯರು ಆಮದಾಗುತ್ತಿರುವುದು ಸರ್ವೇ ಸಾಮಾನ್ಯ ಆದಂತಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಸಂತೆಯಲ್ಲಿ ನಿಂತ ಕಬೀರ' ಮತ್ತು 'ಶ್ರೀಕಂಠ' ಚಿತ್ರಕ್ಕೆ ಮಲಯಾಳಿ ನಟಿಯರನ್ನು ಆಮದು ಮಾಡಿಕೊಳ್ಳಲಾಯಿತು.
ಇದೀಗ ನಿರ್ದೇಶಕ ರಘುರಾಮ್ ಅವರರ ಸರದಿ. ಸ್ಯಾಂಡಲ್ ವುಡ್ 'ಸ್ವೀಟಿ' ನಟಿ ರಾಧಿಕಾ ಅವರು 'ನಮಗಾಗಿ' ಚಿತ್ರಕ್ಕೆ ಕೈ ಕೊಟ್ಟು ಹೋದ ನಂತರ ನಿರ್ದೇಶಕ ರಘುರಾಮ್ ಅವರು ಬೇರೆ ಪ್ರಾಜೆಕ್ಟ್ ನತ್ತ ಮುಖ ಮಾಡಿದರು.
ತಮ್ಮ ಹುಟ್ಟುಹಬ್ಬದ ದಿನದಂದು ಕೊಟ್ಟ ಮಾತಿನಂತೆ 'ಮಿಸ್ಸಿಂಗ್ ಬಾಯ್' ಅಂತ, ಕಳೆದು ಹೋದ ಹುಡುಗನ ಬಗ್ಗೆ, ನಿಜ ಘಟನೆಯನ್ನು ಆಧರಿಸಿದ ಕಥೆಯುಳ್ಳ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.
ಚಿತ್ರಕ್ಕೆ ನಟ ಗುರುನಂದನ್ ಅವರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡಿದ್ದು, ಈಗಾಗಲೇ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿದೆ.['ಕಳೆದು ಹೋದ ಹುಡುಗ'ನನ್ನು ಹುಡುಕಲು ಹೊರಟ ರಘುರಾಮ್]
ನಟಿಯ ಹುಡುಕಾಟದಲ್ಲಿ ಬಿಜಿಯಾಗಿದ್ದ ರಘುರಾಮ್ ಇದೀಗ ನಾಯಕಿಯ ಆಯ್ಕೆ ಮುಗಿಸಿದ್ದು, ಮಲ್ಲುಕುಟ್ಟಿಯನ್ನು ಕನ್ನಡಕ್ಕೆ ಕರೆ ತಂದಿದ್ದಾರೆ. ಹೆಚ್ಚಿನ ಓದಿಗಾಗಿ ಮುಂದಿನ ಸ್ಲೈಡ್ಸ್ ಕ್ಲಿಕ್ಕಿಸಿ....

ರೂಪದರ್ಶಿ ಕಮ್ ನಟಿ
ರೂಪದರ್ಶಿ ಕಮ್ ನಟಿ ಅರ್ಚನಾ ಜಯಕೃಷ್ಣನ್ ಅವರನ್ನು ನಿರ್ದೇಶಕ ರಘರಾಮ್ ಅವರು ತಮ್ಮ 'ಮಿಸ್ಸಿಂಗ್ ಬಾಯ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡುತ್ತಿದ್ದಾರೆ.

ಪಾಲಕ್ಕಾಡ್ ಮೂಲದ ನಟಿ
ಮೂಲತಃ ಪಾಲಕ್ಕಾಡ್ ನವರಾದ ಅರ್ಚನಾ ಜಯಕೃಷ್ಣನ್ ಅವರು ಬೆಳೆದಿದ್ದು ಮಾತ್ರ ಕೆನಡಾದಲ್ಲಿ. ಇತ್ತೀಚೆಗೆ ಸುಮಾರು ಆರು ವರ್ಷದ ಹಿಂದೆ ಬೆಂಗಳೂರಿನಲ್ಲಿ ಬಂದು ನೆಲೆಸಿದ್ದಾರೆ.

ಮಿಸ್ ಕೇರಳ
ಅಂದಹಾಗೆ ಅರ್ಚನಾ ಅವರು 2014ರ ಮಣಪ್ಪುರಂ ಮಿಸ್ ಕೇರಳ ಆಗಿ ಹೊರಹೊಮ್ಮಿದ್ದಾರೆ. ಜೊತೆಗೆ ಕಲ್ಯಾಣ್ ಸಿಲ್ಕ್ಸ್, ಜ್ಯುವೆಲ್ಲರಿ ಹಾಗೂ ಹಲವಾರು ಸೀರೆ ಉತ್ಪನ್ನಗಳಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.

2 ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದಾರೆ
ಈಗಾಗಲೇ 2 ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಅರ್ಚನಾ ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಹೊಸಬರು.

ನಿಜ ಕಥೆ
'ತಾಯಿ ಮತ್ತು ತಾಯ್ನಾಡಿಗೆ' ಎಂಬ ಅಡಿಬರಹ ಹೊಂದಿರುವ 'ಮಿಸ್ಸಿಂಗ್ ಬಾಯ್' ಚಿತ್ರದಲ್ಲಿ ಕಳೆದು ಹೋಗಿರುವ ಹುಡುಗನೊಬ್ಬನ ಕರುಣಾಜನಕ ಕಥೆಯನ್ನು ಬಿಡಿಸಿ ಹೇಳಲಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಗೌಡ ಹಾಗೂ ಕಿರಣ್ ರಾಥೋಡ್ ಪ್ರಮುಖ ಪಾತ್ರ ವಹಿಸಲಿದ್ದಾರೆ.