»   » ಅದ್ಧೂರಿ 'ಕುರುಕ್ಷೇತ್ರ'ಕ್ಕೆ ಕಾಡಲಿದ್ಯಾ ಮತ್ತೊಂದು ದೊಡ್ಡ ನಿರಾಸೆ.?

ಅದ್ಧೂರಿ 'ಕುರುಕ್ಷೇತ್ರ'ಕ್ಕೆ ಕಾಡಲಿದ್ಯಾ ಮತ್ತೊಂದು ದೊಡ್ಡ ನಿರಾಸೆ.?

Posted By:
Subscribe to Filmibeat Kannada

ಮುನಿರತ್ನ ನಿರ್ಮಾಣ ಮಾಡುತ್ತಿರುವ ಬಹುಕೋಟಿ ವೆಚ್ಚದ 'ಕುರುಕ್ಷೇತ್ರ' ಶುಭಾರಂಭ ಮಾಡಿದೆ. ಎಲ್ಲ ಅಂದುಕೊಂಡಂತೆ ದರ್ಶನ್ ಅವರ 50ನೇ ಚಿತ್ರಕ್ಕೆ ಅದ್ಧೂರಿ ಓಪನಿಂಗ್ ಸಿಕ್ಕಿದೆ. ಹೀಗಿದ್ದರೂ, 'ಕುರುಕ್ಷೇತ್ರ' ಚಿತ್ರತಂಡಕ್ಕೆ ಒಂದು ದೊಡ್ಡ ನಿರಾಸೆಯ ಭಯ ಕಾಡುತ್ತಿದೆ.

ಹೌದು, 'ಕುರುಕ್ಷೇತ್ರ'ದಲ್ಲಿ ಬಹುತೇಕ ಎಲ್ಲ ಪಾತ್ರಗಳು ಅಂತಿಮವಾಗಿದೆ. ಆದ್ರೆ, ಅರ್ಜುನ ಪಾತ್ರ ಫಿಕ್ಸ್ ಆಗಿಲ್ಲ. 'ಅರ್ಜುನ' ಕುರುಕ್ಷೇತ್ರ ಚಿತ್ರದ ಬಹುಮುಖ್ಯ. ಹೀಗಾಗಿ, ಈ ಪಾತ್ರಕ್ಕೆ ದೊಡ್ಡ ನಟನ ಅಗತ್ಯವಿದೆ. ಅದಕ್ಕಾಗಿ ಚಿತ್ರತಂಡವೂ ಕಾಯುತ್ತಿದೆ.

ಮತ್ತೊಂದೆಡೆ ಕನ್ನಡದ ಸ್ಟಾರ್ ನಟರು ಬಿಜಿ ಎಂದು ಹೇಳು ಬಿಟ್ಟಿದ್ದಾರೆ. ಹಾಗಿದ್ರೆ, ಶಿವಣ್ಣ, ಸುದೀಪ್, ಯಶ್, ಪುನೀತ್ ಬಿಟ್ಟು ಈ ಪಾತ್ರವನ್ನ ಯಾರು ಮಾಡಬಹುದು? ಮುಂದೆ ಓದಿ.....

'ಕುರುಕ್ಷೇತ್ರ'ಕ್ಕೆ ಅರ್ಜುನ ಬೇಕಾಗಿದ್ದಾರೆ

ದರ್ಶನ್ 'ಕುರುಕ್ಷೇತ್ರ'ದಲ್ಲಿ ಅರ್ಜುನನ ಪಾತ್ರ ಇನ್ನು ಅಂತಿಮವಾಗಿಲ್ಲ. ದುರ್ಯೋಧನ, ಹೊರತು ಪಡಿಸಿದರೇ ಅರ್ಜುನ ಬಹುಮುಖ್ಯ ಪಾತ್ರವಾಗಲಿದೆ. ಹೀಗಾಗಿ, ದರ್ಶನ್ ಅವರಂತೆ ದೊಡ್ಡ ನಟನ ಅವಶ್ಯಕತೆ ಇದೆ. ಹೀಗಾಗಿ, ಯಾರಿದ್ದಾರೆ ಎಂಬುದು ಈಗ ಕುತೂಹಲ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ಕನ್ನಡದ ನಟರಿಗೆ ಆದ್ಯತೆ

ಪುನೀತ್, ಯಶ್, ಸುದೀಪ್, ಶಿವಣ್ಣ, ಉಪೇಂದ್ರ 'ಕುರುಕ್ಷೇತ್ರ'ದಲ್ಲಿ ಅಭಿನಯಿಸುತ್ತಿಲ್ಲ. ಹೀಗಾಗಿ, ಇವರನ್ನ ಬಿಟ್ಟು ಕನ್ನಡದಲ್ಲಿ ಅರ್ಜುನ ಪಾತ್ರವನ್ನ ಯಾರು ಸಮರ್ಥವಾಗಿ ನಿರ್ವಹಿಸಬಲ್ಲರು ಎಂಬುದು ಕಾಡುತ್ತಿರುವ ಪ್ರಶ್ನೆ.

'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್

ಪರಭಾಷೆ ನಟನ ಪಾಲಾಗಬಹುದು

ಒಂದು ಪಕ್ಷ ಕನ್ನಡದ ನಟ ಅರ್ಜುನ ಪಾತ್ರಕ್ಕೆ ಸಿಗದಿದ್ದರೇ, ಬಹುಶಃ ಮುನಿರತ್ನ ಅವರ ಕಣ್ಣು ಪರಭಾಷೆ ನಟನ ಮೇಲೆ ಬೀಳುವುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ, ಈಗಾಗಲೇ ಭೀಮನ ಪಾತ್ರಕ್ಕೆ ಯಾರು ಸೂಕ್ತವಾಗದ ಹಿನ್ನೆಲೆ ಬಾಲಿವುಡ್ ನ ಡ್ಯಾನಿಶ್ ಅಖ್ತರ್ ಅವರನ್ನ ಕರೆತಂದಿದ್ದಾರೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

ಅರ್ಜುನ ಸರ್ಜಾ 'ಅರ್ಜುನ' ಆಗಬೇಕಿತ್ತು?

ಎಲ್ಲ ಅಂದುಕೊಂಡಂತೆ ಆಗಿದ್ದರೇ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 'ಕುರುಕ್ಷೇತ್ರ'ದಲ್ಲಿ ಕರ್ಣನ ಪಾತ್ರ ಮಾಡಬೇಕಿತ್ತು. ಆದ್ರೆ, ಡೇಟ್ ಸಮಸ್ಯೆಯಿಂದ ಶಿವಣ್ಣ ಈ ಚಿತ್ರದಿಂದ ಹೊರಗುಳಿದರು. ಅದಕ್ಕು ಮುಂಚೆ ಅರ್ಜುನ ಸರ್ಜಾ ಅವರು ಅರ್ಜುನ ಪಾತ್ರಕ್ಕೆ ಆಯ್ಕೆ ಮಾಡಲಾಗಿತ್ತು. ಕರ್ಣನ ಪಾತ್ರಕ್ಕೆ ಆಯ್ಕೆ ಆಗದ ಹಿನ್ನೆಲೆ ಅರ್ಜುನ್ ಸರ್ಜಾ ಅವರು ಕರ್ಣ ಆಗಿದ್ದಾರೆ ಎನ್ನಲಾಗಿದೆ.

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

ಒಂದು ವಾರದಲ್ಲಿ ಅರ್ಜುನ ಆಯ್ಕೆ ಆಗಲಿದೆ

ನಿರ್ಮಾಪಕ ಮುನಿರತ್ನ ಅವರು ಹೇಳಿರುವ ಪ್ರಕಾರ ಅರ್ಜುನ ಪಾತ್ರ ಬಿಟ್ಟು ಬೇರೆ ಎಲ್ಲ ಪಾತ್ರಗಳು ಆಯ್ಕೆ ಆಗಿವೆ. ಹೈದರಾಬಾದ್'ನಲ್ಲಿ ಚಿತ್ರೀಕರಣ ಆರಂಭವಾಗಿದ್ದು, ಒಂದು ವಾರದಲ್ಲಿ ಅರ್ಜುನ ಪಾತ್ರಧಾರಿಯನ್ನ ಕುರುಕ್ಷೇತ್ರಕ್ಕೆ ಆಯ್ಕೆ ಮಾಡುತ್ತಾರಂತೆ.

'ಮುನಿರತ್ನ ಕುರುಕ್ಷೇತ್ರ'ಕ್ಕೆ ಚಾಲೆಂಜಿಂಗ್ ದರ್ಶನ್ ಕಾಲಿಟ್ಟಿದ್ದು ಹೇಗೆ?

ಯಾವ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ

ದರ್ಶನ್ 'ದುರ್ಯೋಧನ', ಅಂಬರೀಷ್ 'ಭೀಷ್ಮ', ರವಿಚಂದ್ರನ್ 'ಕೃಷ್ಣ', ಅರ್ಜುನ್ ಸರ್ಜಾ 'ಕರ್ಣ', ಬಹುಭಾಷಾ ನಟಿ ಸ್ನೇಹಾ 'ದ್ರೌಪದಿ', ಡ್ಯಾನಿಶ್ ಅಖ್ತರ್ ಸೈಫಿ 'ಭೀಮ', ರವಿಶಂಕರ್ 'ಶಕುನಿ', ಶ್ರೀನಾಥ್ 'ಧೃತರಾಷ್ಟ್ರ', ಶ್ರೀನಿವಾಸ ಮೂರ್ತಿ 'ದ್ರೋಣಚಾರ್ಯ', ಶಶಿಕುಮಾರ್ 'ಧರ್ಮರಾಯ', ನಿಖಿಲ್ ಕುಮಾರ್ 'ಅಭಿಮನ್ಯು', ಸೇರಿದಂತೆ ಹಲವರು ವಿವಿಧ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

English summary
Arjun Character is not yet selected for Kurukshetra. Darshan's 50th Movie Kurukshetra launched Yesterday (August 07th). Directed by Naganna and Produced by Munirathna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada