ಬೆಂಕಿ ಅವಘಡ : ಮಂಗಳೂರು ಆಸ್ಪತ್ರೆಯಲ್ಲಿ ಅರ್ಜುನ್ ಜನ್ಯಗೆ ಚಿಕಿತ್ಸೆ
ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಸಂಗೀತ ಕಾರ್ಯಕ್ರಮವೊಂದರಲ್ಲಿ ಆದ ಬೆಂಕಿ ಅವಘಡದಿಂದ ಪಾರಾಗಿದ್ದಾರೆ. ಮಂಗಳೂರಿನ ಮಾಲ್ ಒಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ವೇದಿಕೆಗೆ ಅರ್ಜುನ್ ಜನ್ಯಾ ಬೈಕ್ ಮೇಲೆ ಬರುವ ಪ್ಲಾನ್ ಇತ್ತು. ಅದೇ ರೀತಿ ಬೈಕ್ ಗೆ ಕ್ರೆಕರ್ಸ್ ಅಳವಡಿಸಲಾಗಿತ್ತು. ಆದರೆ ಆಕಸ್ಮಿಕವಾಗಿ ಅದರ ಬೆಂಕಿ ಅರ್ಜುನ್ ಜನ್ಯ ಅವರಿಗೆ ತಾಕಿದೆ. ಈ ಬೆಂಕಿ ಅವಘಡದಿಂದ ಅವರಿಗೆ ಸಣ್ಣ ಪುಟ್ಟ ಗಾಯಗಳಿದ್ದು ಸ್ವಲ್ಪದರಲ್ಲಿ ಅರ್ಜುನ್ ಜನ್ಯ ಪಾರಾಗಿದ್ದಾರೆ. ಅರ್ಜುನ್ ಬೈಕಿನಿಂದ ಇಳಿಯುವ ವೇಳೆ ಕ್ರೆಕರ್ಸ್ ಬೆಂಕಿ ಭುಜಕ್ಕೆ ಮತ್ತು ಕೈಗೆ ತಾಗುಲಿದ ಪರಿಣಾಮ ಸುಟ್ಟ ಗಾಯಗಳಾಗಿವೆ.

ಮಂಗಳೂರಿನ ಹೃದಯ ಭಾಗದಲ್ಲಿರುವ ಫೊರಂ ಫಿಜಾ ಮಾಲ್ ನಲ್ಲಿ ನಿನ್ನೆ ಸಂಜೆ ಮೆಕ್ ಡಾವಲ್ ಕಂಪನಿ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮ ನಡೆಯುವ ವೇಳೆ ಈ ಅವಗಡ ಸಂಭವಿಸಿದೆ.
ಇನ್ನು ಇಷ್ಟಾದರೂ ಬೈಕ್ ನಿಂದ ಇಳಿದ ಅರ್ಜುನ್ ಜನ್ಯ ನೇರವಾಗಿ ವೇದಿಕೆಗೆ ಹತ್ತಿ ಹಾಡು ಹಾಡಿ ಸಂಗೀತ ಪ್ರಿಯರನ್ನು ರಂಜಿಸಿದರು. ಜೊತೆಗೆ ತಮ್ಮ ವೃತ್ತಿಪರತೆಯನ್ನು ಮೆರೆದರು. ಕಾರ್ಯಕ್ರಮದ ಬಳಿಕ ಸುಟ್ಟಗಾಯಗಳಿಗೆ ಅರ್ಜುನ್ ಜನ್ಯಾ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.


Click it and Unblock the Notifications











