ಅರ್ಜುನ್ ಸರ್ಜಾ ಹೊಸ ಚಿತ್ರ ಸಂಗೊಳ್ಳಿ ರಾಯಣ್ಣ

ಕನ್ನಡದಲ್ಲಿ ಅವರು ನಟಿಸಲಿರುವ ಚಿತ್ರಕ್ಕೆ 'ಸಂಗೊಳ್ಳಿ ರಾಯಣ್ಣ' ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಜಯಪ್ರದ ನಟಿಸಲಿದ್ದಾರಂತೆ. ಸಂಗೊಳ್ಳಿ ರಾಯಣ್ಣ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ. ಪ್ರಸ್ತುತ ಅರ್ಜುನ್ ಸರ್ಜಾ ಕನ್ನಡದಲ್ಲಿ 'ವಾಯುಪುತ್ರ'ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಪ್ರಧಾನ ಪಾತ್ರಗಳಲ್ಲಿ ಅಂದ್ರಿತಾ ರೇ, ಅರ್ಜುನ್ ಸರ್ಜಾ ಸೋದರಳಿಯ ಚಿರಂಜೀವಿ ಮತ್ತು ಅಂಬರೀಶ್ ಕಾಣಿಸಲಿದ್ದಾರೆ.
1984ರಲ್ಲಿ ತೆರೆಕಂಡ 'ಮಳೆ ಬಂತು ಮಳೆ' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಅರ್ಜುನ್ ಬದಲಾಗಿದ್ದರು. ಈ ಚಿತ್ರವನ್ನು ರಾಜೇಂದ್ರ ಸಿಂಗ್ ಬಾಬುನಿರ್ದೇಶಿಸಿದ್ದರು. ಅರ್ಜುನ್ ಹೆಂಡತಿ ಆಶಾ ರಾಣಿ ಅವರು ಶಿವರಾಜ್ ಕುಮಾರ್ ಜತೆಯಲ್ಲಿ ರಥಸಪ್ತಮಿ ಚಿತ್ರದಲ್ಲಿ ನಟಿಸಿದ್ದರು. ಸಾಲು ಸಾಲು ರೀಮೇಕ್ ಚಿತ್ರಗ ಚಿತ್ರಗಳ ನಡುವೆ ಸ್ವಾತಂತ್ರ ಹೋರಾಟಗಾರ, ಕಿತ್ತೂರಿನ ಹುಲಿ ಸಂಗೊಳ್ಳಿರಾಯಣ್ಣನ ಮತ್ತೊಮ್ಮೆ ಕನ್ನಡ ಬೆಳ್ಳಿ ಪರದೆಗೆ ತರುತ್ತಿರುವುದು ಮೆಚ್ಚತಕ್ಕಂತಹ ವಿಷಯ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











