twitter
    For Quick Alerts
    ALLOW NOTIFICATIONS  
    For Daily Alerts

    ಚಿರು ಸರ್ಜಾಗೆ ಬೆಲ್ಟ್‌ನಲ್ಲಿ ಹೊಡೆದಿದ್ದ ಘಟನೆ ನೆನಪಿಸಿಕೊಂಡ ಅರ್ಜುನ್ ಸರ್ಜಾ

    |

    ಚಿರು ಸರ್ಜಾ ನಮ್ಮನ್ನಗಲಿ ಎರಡು ವರ್ಷಗಳಾಗಿವೆ. ಜೂನ್ 7 ರಂದು ಚಿರಂಜೀವಿ ಸರ್ಜಾರ ಎರಡನೇ ವರ್ಷದ ಪುಣ್ಯಸ್ಮರಣೆ. ಈ ಸಂದರ್ಭ, ಮೇಘನಾ ರಾಜ್, ಧ್ರುವ ಸರ್ಜಾ, ಅರ್ಜುನ್ ಸರ್ಜಾ ಸೇರಿದಂತೆ ಹಲವು ಕುಟುಂಬಸ್ಥರು ಕನಕಪುರ ರಸ್ತೆಯಲ್ಲಿನ ಚಿರು ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಈ ಸಂದರ್ಭದಲ್ಲಿ ಮಾತನಾಡಿದ ಚಿರು ಸರ್ಜಾ ಮಾವ ಅರ್ಜುನ್ ಸರ್ಜಾ, ''ಚಿರಂಜೀವಿ ಸರ್ಜಾ ಜೊತೆಗೆ ಹಲವು ನೆನಪುಗಳಿವೆ. ಒಮ್ಮೆ ಬೆಲ್ಟ್‌ನಲ್ಲಿ ಸಹ ಹೊಡೆದಿದ್ದೆ. ಚಿಕ್ಕ ಹುಡುಗ ಆಗಿದ್ದಾಗ ಸಿಗರೇಟು ಸೇದಿಬಿಟ್ಟಿದ್ದ ಆಗ ಬೆಲ್ಟ್ ತಗೊಂಡು ಹೊಡೆದಿದ್ದು ಇದೆ'' ಎಂದು ನೆನಪು ಮಾಡಿಕೊಂಡರು.

    ''ಅವನನ್ನು ಎತ್ತಿ ಆಡಿಸಿದ್ದೇನೆ. ನಾನೇ ಅವನನ್ನು ಶಾಲೆಗೆ ಬಿಟ್ಟು ಬರುತ್ತಿದ್ದೆ, ವಾಪಸ್ ಕರೆದುಕೊಂಡು ಬರುತ್ತಿದ್ದೆ. ಹಂತ ಹಂತವಾಗಿ ಅವನನ್ನು ನೋಡಿಕೊಂಡು ಬಂದಿದ್ದೇನೆ. ಆದರೆ ಎರಡು ವರ್ಷದ ಹಿಂದೆ ನಡೆದ ಈ ಕೆಟ್ಟ ಘಟನೆಯನ್ನು ನಾನು ಕನಸು ಮನಸಿನಲ್ಲೂ ಯೋಚಿಸಿರಲಿಲ್ಲ. ಯಾರೂ ಊಹೆ ಸಹ ಮಾಡಿರಲಿಲ್ಲ. ಆದರೆ ಘಟನೆ ನಡೆದು ಹೋಯಿತು'' ಎಂದಿದ್ದಾರೆ.

    Arjun Sarja Remembers He Once Beaten Chiranjeevi Sarja

    ''ಚಿರಂಜೀವಿ ಸರ್ಜಾ ಅನ್ನು 'ವಾಯುಪುತ್ರ' ಸಿನಿಮಾ ಮೂಲಕ ನಾನೇ ಲಾಂಚ್ ಮಾಡಿದ್ದೆ, ನಮ್ಮ ಅಣ್ಣ ಅವನ ಮೊದಲ ಸಿನಿಮಾ ನಿರ್ದೇಶನ ಮಾಡಿದ್ದರು, ನಾನು ನಿರ್ಮಾಣ ಮಾಡಿದ್ದೆ. ಮುಂದೆ ಅವರ ಮಗನನ್ನು ನಾನೇ ಇಂಡಸ್ಟ್ರಿಗೆ ಲಾಂಚ್ ಮಾಡುತ್ತೇನೆ'' ಎಂದರು ಅರ್ಜುನ್ ಸರ್ಜಾ.

    ಚಿರಂಜೀವಿ ಸರ್ಜಾರ ಎರಡನೇ ವರ್ಷದ ಪುಣ್ಯ ಸ್ಮರಣೆಯ ಕಾರಣ ಕನಕಪುರ ರಸ್ತೆಯಲ್ಲಿರುವ ಧ್ರುವ ಸರ್ಜಾರ ಫಾರಂ ಹೌಸ್‌ನಲ್ಲಿ ಚಿರು ಸರ್ಜಾ ಸಮಾಧಿ ನಿರ್ಮಿಸಲಾಗಿದ್ದು, ಮೇಘನಾ ರಾಜ್, ರಾಯನ್ ಸರ್ಜಾ, ಪ್ರಮಿಳಾ ಜೋಷಾಯ್, ಸುಂದರ್ ರಾಜ್, ಧ್ರು ಸರ್ಜಾ, ಪ್ರೇರಣಾ ಸರ್ಜಾ ಇನ್ನೂ ಹಲವು ಕುಟುಂಬಸ್ಥರು ಭಾಗವಹಿಸಿ ಪೂಜೆ ಸಲ್ಲಿಸಿದರು.

    ಚಿರು ಸರ್ಜಾ ನೆನಪಲ್ಲಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಮೇಘನಾ ರಾಜ್, ''ನೀವು ಮತ್ತು ನಾನು, ಈ ಬಂಧ ಶಾಶ್ವತ. ನಿಮ್ಮಂತೆ ಯಾರೂ ಇಲ್ಲ. ನಿಮ್ಮಂತೆ ಇನ್ನೊಬ್ಬರು ಇರಲು ಸಾಧ್ಯವೂ ಇಲ್ಲ. ಚಿರು ನೀವು ಒನ್ ಆಂಡ್ ಓನ್ಲಿ'' ಎಂದಿದ್ದಾರೆ.

    ಜೂನ್ 07, 2020 ರಂದು ಭಾನುವಾರ ಚಿರಂಜೀವಿ ಸರ್ಜಾ ಎದೆನೋವಿನಿಂದ ತಮ್ಮ ಮನೆಯಲ್ಲಿ ಕುಸಿದು ಬಿದ್ದರು. ಕೂಡಲೇ ಅವರನ್ನು ಜಯನಗರದ ಆಸ್ಪತ್ರೆಗೆ ದಾಖಲಿಸಲಾಯ್ತು. ಆದರೆ ಅವರು ನಿಧನ ಹೊಂದಿದರು. ತೀವ್ರ ಹೃದಯಾಘಾತದಿಂದ ಚಿರು ಸರ್ಜಾ ನಿಧನ ಹೊಂದಿರುವುದಾಗಿ ವೈದ್ಯರು ಘೋಷಿಸಿದರು.

    English summary
    Arjun Sarja remembers he once beaten Chiranjeevi Sarja with belt. He also said I launched Chiranjeevi Sarja and I will launch His son also.
    Wednesday, June 8, 2022, 9:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X