'ಅವನೇ ಶ್ರೀಮನ್ನಾರಾಯಣ' ಸಿನಿಮಾ ಪ್ರದರ್ಶನದ ವೇಳೆ ಗಲಾಟೆ
ಇಂದು (ಡಿಸೆಂಬರ್ 27) ಬಿಡುಗಡೆ ಆಗಬೇಕಿದ್ದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ನಿನ್ನೆ ರಾತ್ರಿಯೇ ರಿಲೀಸ್ ಆಗಿದೆ. ಚಿತ್ರದ ಪ್ರದರ್ಶನದ ವೇಳೆ ಗಲಾಟೆಯಾದ ಘಟನೆ ನಡೆದಿದೆ.
ಒರಾಯನ್ ಮಾಲ್ ನಲ್ಲಿ ಚಿತ್ರದ ಪ್ರದರ್ಶನದ ವೇಳೆ ಗಲಾಟೆ ಆಗಿದೆ. ಚಿತ್ರಮಂದಿರದಲ್ಲಿ ಎಸಿ ಹಾಕಿಲ್ಲ ಎನ್ನುವ ಕಾರಣಕ್ಕೆ ಪ್ರೇಕ್ಷಕರು ಹಾಗೂ ಮ್ಯಾನೆಜರ್ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ 9.50ಕ್ಕೆ ಶುರು ಆಗಿದ್ದ ಸಿನಿಮಾ ಮಧ್ಯರಾತ್ರಿ 2 ಗಂಟೆಗೆ ಮುಗಿದಿದೆ.
ಇಂಟರ್ ವೆಲ್ ವರೆಗೆ ಎಸಿ ಇಲ್ಲದೆ ಕುಳಿತ್ತಿದ್ದ ಜನ ನಂತರ ಗಲಾಟೆ ಮಾಡಿದ್ದಾರೆ. ಬೇರೆ ಬೇರೆ ಸ್ಕ್ರೀನ್ ಗಳಲ್ಲಿ ಎಸಿ ಹಾಕಿದ್ದು, ಕನ್ನಡ ಸಿನಿಮಾ ಎನ್ನುವ ಕಾರಣಕ್ಕೆ ಇಲ್ಲಿ ಎಸಿ ಹಾಕಿಲ್ಲ ಎಂದು ಜನ ಮ್ಯಾನೆಜರ್ ಅನ್ನು ತರಾಟೆಗೆ ತೆಗೆದುಕೊಂಡರು.

ಈ ಗಲಾಟೆಯ ನಡುವೆ ಸಿನಿಮಾ ಒಂದುವರೆ ಗಂಟೆ ತಡ ಆಗಿದೆ. ಎಸಿಯ ಗಲಾಟೆ ನಡುವೆ ಎಷ್ಟೊಂದು ಜನರಿಗೆ ತೊಂದರೆ ಆಗಿದೆ. ರಾತ್ರಿ ಸಿನಿಮಾ ನೋಡಲು ಬಂದು ಕುಟುಂಬಗಳು ಚಿತ್ರಮಂದಿರಲ್ಲೂ ಕೂರಲು ಆಗದೆ, ಮನೆಗೂ ಹೋಗಲು ಆಗದೆ ಕಂಗಾಲಾಗಿದ್ದರು.
ನಂತರ ಪೊಲೀಸರ ಆಗಮನದಿಂದ ಪರಿಸ್ಥಿತಿ ತಣ್ಣಗಾಯಿತು. ಬಳಿಕ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ಹಣ ವಾಪಸ್ ನೀಡಿದ್ದಾರೆ. ಘಟನೆಯಿಂದ ಸಿನಿಮಾ ನೋಡಲು ಬಂದ ಸಾಮಾನ್ಯ ಪ್ರೇಕ್ಷಕರಿಗೆ ತುಂಬ ತೊಂದರೆ ಆಗಿದೆ.


Click it and Unblock the Notifications











