For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ'ನ ಮೆಚ್ಚಿತೆ ಮುಂಬೈ?

  |

  ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಭರ್ಜರಿಯಾಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟಿದೆ. ವಿಕ್ರಾಂತ್ ರೋಣನನ್ನು ನೋಡಲು ಕಾತರದಿಂದ ಕಾಯುತ್ತಿದ್ದ ಪ್ರೇಕ್ಷಕರು ಈಗ ಈ ಸಿನಿಮಾವನ್ನು ಕಣ್ತುಂಬಿ ಕೊಂಡಿದ್ದಾರೆ.

  ಸದ್ಯ ವಿಕ್ರಾಂತ್ ರೋಣ ಸಿನಿಮಾದೇ ಹವಾ. ಸಿನಿಮಾ ನೋಡಿದ ಮಂದಿ ಮೆಚ್ಚಿ ಕೊಂಡಾಡುತ್ತಿದ್ದಾರೆ. ಸಿನಿಮಾ ನೋಡಿದ ಬಂದ ಪ್ರೇಕ್ಷಕರು ವಿಕ್ರಾಂತ್ ರೋಣನಿಗೆ ಜೈಕಾರ ಹಾಕುತ್ತಿದ್ದಾರೆ. ಈ ಮೂಲಕ ನಟ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದು ಬೀಗಲು ಇನ್ನು ಈ ಚಿತ್ರವೇ ಸಾಕ್ಷಿ ಎನ್ನಬಹುದು. ಆದರೆ ಅದಕ್ಕಿನ್ನೂ ಕೊಂಚ ಸಮಯಬೇಕಿದೆ.

  ರಮ್ಯಾ, ಕಾರ್ತಿ, ಗಣೇಶ್ 'ವಿಕ್ರಾಂತ್ ರೋಣ' ನೋಡ್ತಾರಂತೆ: ಸ್ಟಾರ್‌ಗಳ ದಂಡೇ ಇದೆ!ರಮ್ಯಾ, ಕಾರ್ತಿ, ಗಣೇಶ್ 'ವಿಕ್ರಾಂತ್ ರೋಣ' ನೋಡ್ತಾರಂತೆ: ಸ್ಟಾರ್‌ಗಳ ದಂಡೇ ಇದೆ!

  ಇನ್ನು ವಿಕ್ರಾಂತ್ ರೋಣ ಸಿನಿಮಾ ಹೇಳಿ, ಕೇಳಿ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ವಿಶ್ವದೆಲ್ಲೆಡೆ ಸಿನಿಮಾ ಹೇಗೆ ಸದ್ದು ಮಾಡುತ್ತಿದೆ. ಎನ್ನುವ ಸಹಜ ಕುತೂಹಲ ಇದ್ದೇ ಇರುತ್ತದೆ. ಈಗ ಈ ಚಿತ್ರದ ಹವಾ ವಿಶ್ವದಾದ್ಯಂತ ಪಸರಿಸಿದೆ ಎನ್ನುದರ ಜೊತೆಗೆ, ನಾರ್ತ್‌ನಲ್ಲಿ ಅದರಲ್ಲೂ ಮುಂಬೈನಲ್ಲಿ ಸಿನಿಮಾ ಯಾವ ರೀತಿ ರೆಸ್ಪಾನ್ಸ್ ಪಡೆದಿದೆ ಎನ್ನುವ ಬಗ್ಗೆ ಮುಂದೆ ಓದಿ....

  ಭಾರತದಾದ್ಯಂತ ವಿಕ್ರಾಂತ್ ರೋಣನ ಅಬ್ಬರ!

  ಭಾರತದಾದ್ಯಂತ ವಿಕ್ರಾಂತ್ ರೋಣನ ಅಬ್ಬರ!

  'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ಈ ಸಿನಿಮಾ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದಿದೆ. ಭಾರತದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಸುಮಾರು 3000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಗೆ ಬಂದಿದೆ. ಭಾರತದಾದ್ಯಂತ ಸಿನಿಮಾ ಹವಾ ಜೋರಾಗಿದೆ. ನಾರ್ತ್‌ನಲ್ಲಿ ಸೌತ್ ಸಿನಿಮಾಗಳು ಕಮಾಲ್ ಮಾಡುತ್ತಿರುವ ಹಿನ್ನೆಲೆ ಈ ಚಿತ್ರದ ರೆಸ್ಪಾನ್ಸ್ ಬಗ್ಗೆಯೂ ಕುತೂಹಲ ಸಹಜ. ಮುಂಬೈನಲ್ಲಿ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ದೊರತಿದೆ ಎನ್ನುವುದಕ್ಕೆ ಉತ್ತರ ಸಿಕ್ಕಿದೆ.

  ಮುಂಬೈನಲ್ಲಿ ಮೆಚ್ಚಿದ 'ವಿಕ್ರಾಂತ್ ರೋಣ'!

  'ವಿಕ್ರಾಂತ್ ರೋಣ' ಚಿತ್ರಕ್ಕೆ ಮೊದಲ ದಿನ ರೆಸ್ಪಾನ್ಸ್ ಹೇಗಿದೆ ಎನ್ನುವುದರ ಬಗ್ಗೆ ಮೊದಲ ದಿನ ಒಂದಷ್ಟು ವರದಿಗಳು ಬಂದಿವೆ. ಪ್ರೇಕ್ಷಕ ಬಳಗದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಮುಂಬೈ ಮಂದಿ 'ವಿಕ್ರಾಂತ್ ರೋಣ'ನ ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ಹಿಂದಿ ಅವತರಣಿಕೆಯ 'ವಿಕ್ರಾಂತ್ ರೋಣ' ಸಿನಿಮಾ ನೋಡಿದ ಪ್ರೇಕ್ಷಕರು ಹೇಳಿದ್ದೇನು ಎನ್ನುವ ಕೆಲವು ಕಮೆಂಟ್‌ಗಳು ಹೀಗಿವೆ.

  - vfx, ಅನಿಮೇಶನ್, ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿದೆ. ಒಂದು ಗಳಿಗೆ ಸಿನಿಮಾವನ್ನು ನೋಡುವುದನ್ನು ಮಿಸ್ ಮಾಡಿಕೊಂಡರೆ ಸಿನಿಮಾ ಅರ್ಥವಾಗುವುದಿಲ್ಲ.

  - ಸಿನಿಮಾ ತುಂಬಾ ಚೆನ್ನಾಗಿದೆ, ಸೌತ್ ಮಂದಿ ಕಮಾಲ್ ಮಾಡ್ತಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ಕಮಾಲ್ ಮಾಡಿದ್ದಾರೆ. ಆರಂಭದಲ್ಲಿ ಕಾಂಪ್ಲಿಕೇಟೆಡ್ ಅನಿಸಿದರೂ, ಚಿತ್ರದಲ್ಲಿ ಪ್ರತಿಯೊಂದು ದೃಶ್ಯಗಳಿಗೆ ಕೊನೆಯ ತನಕ ಲಿಂಕ್ ಇದೆ. ಹಾಗಾಗಿ ಸಂಪೂರ್ಣ ನೋಡಿದ ಮೇಲೆ ಅರ್ಥವಾಗುತ್ತದೆ.

  - ಇದು ತುಂಬಾ ಉತ್ತಮವಾದ ಸಿನಿಮಾ. ಈ ಮಟ್ಟಿಗೆ ನಿರೀಕ್ಷೆ ಇರಲಿಲ್ಲ, ನಿರೀಕ್ಷೆಗೂ ಮೀರಿದ ಸಿನಿಮಾ ಇದು.

  - ಆರಂಭದಲ್ಲಿ ಒಂದಷ್ಟು ಗೊಂದಲಗಳೂ ಹುಟ್ಟಿಕೊಂಡರೆ ನಿಧಾನವಾಗಿ ಸಿನಿಮಾ ಅರ್ಥವಾಗುತ್ತಾ ಹೋಗುತ್ತೆ. ಸುದೀಪ್ ಅವರನ್ನು ನೋಡಿದರೆ ಸಲ್ಮಾನ್ ಖಾನ್ ನೋಡಿದಂತೆ ಆಗುತ್ತದೆ. ಅವರ ಡೈಲಾಗ್ ಹೇಳುವ ರೀತಿ ಸಲ್ಲು ಅವ್ರನ್ನು ನೆನಪಿಸುತ್ತದೆ.

  ವಿಕ್ರಾಂತ್ ರೋಣ ಬಾಲಿವುಡ್ ಬಾಕ್ಸಾಫೀಸ್!

  ವಿಕ್ರಾಂತ್ ರೋಣ ಬಾಲಿವುಡ್ ಬಾಕ್ಸಾಫೀಸ್!

  ಇನ್ನು ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನವೇ ಹಿಂದಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಹಾಗಾಗಿ ಈ ಸಿನಿಮಾ ಕೂಡ ಬಾಲಿವುಡ್ ಬಾಕ್ಸಾಫೀಸಿನಲ್ಲಿ ಇತಿಹಾಸ ಬರೆಯುವ ಸೂಚನೆಯನ್ನ ಕೊಟ್ಟಿದೆ. ಆದರೆ ಮೊದಲ ವೀಕೆಂಡ್ ತನಕ ಕಾಯಲೇಬೇಕು. ಮೊದಲ ವೀಕೆಂಡ್ ಕಳೆದ ಬಳಿಕ ಸಿನಿಮಾ ಬಾಲಿವುಡ್ ಬಾಕ್ಸಾಫೀಸಿನಲ್ಲಿ ಯಾವ ಮಟ್ಟಿಗೆ ಗಳಿಕೆ ಮಾಡಿದೆ ಎನ್ನುವ ಲೆಕ್ಕಾಚಾರ ಹೊರಬಂದರೆ, ಅಲ್ಲಿ ಚಿತ್ರದ ಭವಿಷ್ಯ ಹೇಗಿರಲಿದೆ ಎನ್ನುವುದನ್ನು ಸುಲಭವಾಗಿ ತಿಳಿಯಬಹುದು

  ಕೊಲ್ಲತ್ತಾದಲ್ಲಿ 87 ಶೋ!

  ಕೊಲ್ಲತ್ತಾದಲ್ಲಿ 87 ಶೋ!

  ಪಶ್ಚಿಮ ಬಂಗಾಳದಲ್ಲಿ ವಿಕ್ರಾಂತ್ ರೋಣ ಸಿನಿಮಾಗೆ ಬೇಡಿಕೆ ಹೆಚ್ಚಿದ ಕಾರಣ, ಪ್ರದರ್ಶನಗಳನ್ನು ಹೆಚ್ಚು ಮಾಡಲಾಗಿದೆ. ಅದರಲ್ಲೂ ಕೊಲ್ಕತ್ತಾದಲ್ಲಿ ಈ ಚಿತ್ರದ ಕ್ರೇಜ್ ಹೆಚ್ಚಾಗಿದ್ದು, ಕೊಲ್ಕತ್ತಾದಲ್ಲಿ ಮಾತ್ರವೇ 87 ಶೋಗಳು ಪ್ರದರ್ಶನ ಕಾಣುತ್ತಿವೆ. ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗಿದೆ. ಇನ್ನು ಕೊಲ್ಕತ್ತಾದಲ್ಲಿ ಸೌತ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಹಾಗಾಗಿ ಈ ಚಿತ್ರ ಅಲ್ಲಿನ ಬಾಕ್ಸಾಫೀಸ್ ಕೊಳ್ಳೆ ಹೊಡೆಯುವ ಸೂಚೆನೆ ಕೊಟ್ಟಿದೆ.

  English summary
  Audience Response Vikrant Rona Hindi Version, Audience Response For Vikrant Rona,
  Friday, July 29, 2022, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X