ಕನ್ನಡ ರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದ್ದ ಶಿವಣ್ಣ ಅಭಿಮಾನಿಗಳಿಗೆ ನಿರಾಸೆ

Recommended Video

Ayushman Bhava movie release date postponed | FILMIBEAT KANNADA

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಚಿತ್ರದ ಜೊತೆ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನ ಆಚರಿಸಲು ಅಭಿಮಾನಿಗಳು ಸಜ್ಜಾಗಿದ್ದರು. ಆದ್ರೀಗ, ಆ ಸಂಭ್ರಮಕ್ಕೆ ನಿರಾಸೆ ಎದುರಾಗಿದೆ.

ಹೌದು, ನವೆಂಬರ್ 1 ರಂದು ಬಿಡುಗಡೆಯಾಗಬೇಕಿದ್ದ ಆಯುಷ್ಮಾನ್ ಭವ ಸಿನಿಮಾ ಮುಂದೋಗಿದೆ. ಈ ಹಿಂದೆ ತೀರ್ಮಾನಿಸಿದಂತೆ ನವೆಂಬರ್ 1ಕ್ಕೆ ಆಯುಷ್ಮಾನ್ ಭವ ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಮುಂದಿನ ದಿನಾಂಕವನ್ನ ಪ್ರಕಟ ಮಾಡದ ಚಿತ್ರತಂಡ ಸದ್ಯದಲ್ಲಿ ಅಧಿಕೃತವಾಗಿ ತಿಳಿಸಲಿದೆ.

ಪ್ರಾಣಿದಯಾ ಸಂಘ ದಿಂದ ಅನುಮತಿ ಸಿಗದ ಕಾರಣ ಚಿತ್ರದ ಬಿಡುಗಡೆಗೆ ಸಮಸ್ಯೆಯಾಗಿದೆ ಎಂಬ ಮಾಹಿತಿ ಸಿಕ್ಕಿದೆ. ನವೆಂಬರ್ ಮೂರನೇ ವಾರ ಅಂದ್ರೆ 15ನೇ ತಾರೀಕು ಚಿತ್ರಮಂದಿರಕ್ಕೆ ಬರಲು ಚಿಂತಿನೆ ನಡೆಸಿದೆಯಂತೆ ಚಿತ್ರತಂಡ.

Ayushman Bhava Release Date Postponed

ಇನ್ನುಳಿದಂತೆ ಪಿ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ದ್ವಾರಕೀಶ್ ನಿರ್ಮಿಸಿದ್ದರು. ಶಿವರಾಜ್ ಕುಮಾರ್ ನಾಯಕನಾಗಿರುವ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿದ್ದಾರೆ. ಅನಂತ್ ನಾಗ್, ತಮಿಳು ನಟ ಪ್ರಭು ಸೇರಿದಂತೆ ಹಲವರು ನಟಿಸಿದ್ದಾರೆ.

ಆಯುಷ್ಮಾನ್ ಭವ ಸಿನಿಮಾದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಥ್ರಿಲ್ ಹೆಚ್ಚಿದೆ. ಆಪ್ತಮಿತ್ರ ಹಾಗೂ ಶಿವಲಿಂಗ ಸಿನಿಮಾ ಬಳಿಕ ಅಂತಹದ್ದೇ ಜಾನರ್ ಹೊಂದಿರುವ ಸಿನಿಮಾ ಇದು ಎಂಬ ಭರವಸೆ ಹುಟ್ಟಿಕೊಂಡಿದೆ.

More from Filmibeat

English summary
Hatrick hero Shivarajkumar starrer Ayushman Bhava movie release date postponed.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X