»   » 'ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್!

'ಬಾಹುಬಲಿ' ಅಬ್ಬರಕ್ಕೆ ಭಾರತೀಯ ಬಾಕ್ಸ್ ಆಫೀಸ್ ಖಲ್ಲಾಸ್!

Posted By:
Subscribe to Filmibeat Kannada

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರವೂ ಪ್ರತಿ ದಿನ, ಪ್ರತಿ ಶೋನು ಒಂದಲ್ಲ ಒಂದು ದಾಖಲೆಗಳನ್ನ ಬರೆಯುತ್ತಲೇ ಸಾಗಿದೆ. ತೆಲುಗು, ತಮಿಳು, ಹಿಂದಿ, ಕನ್ನಡ ಚಿತ್ರರಂಗದಲ್ಲಿದ್ದ ಎಲ್ಲ ಹಳೇ ದಾಖಲೆಗಳನ್ನ ಮುರಿದು ಮುನ್ನಗ್ಗುತ್ತಿದೆ.

ಅತ್ತ ಬಾಲಿವುಡ್ ನಲ್ಲಿ ಖಾನ್, ಕಪೂರ್ ಗಳ ಅಬ್ಬರಕ್ಕೆ ಬ್ರೇಕ್ ಹಾಕಿ ಹೊಸ ಇತಿಹಾಸ ಹುಟ್ಟುಹಾಕಿದೆ. ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರ ದೇಶಗಳಲ್ಲೂ ರಾಜಮೌಳಿಯ ಚಿತ್ರ ಪರಾಕ್ರಮ ಮೆರೆದಿದೆ. ಮೊದಲ ದಿನ, ಮೊದಲ ವಾರ, ಹೀಗೆ ಬಾಕ್ಸ್ ಆಫೀಸ್ ನಲ್ಲಿ ಆಲ್ ಟೈಮ್ ರೆಕಾರ್ಡ್ ಕ್ರಿಯೆಟ್ ಮಾಡಿದೆ.['ಬಾಹುಬಲಿ-2' ಕಲೆಕ್ಷನ್: ಬಾಕ್ಸ್ ಆಫೀಸ್ ನಲ್ಲಿ ಹೊಸ 'ಮೌಳಿ'ಗಲ್ಲು.!]

ಹಾಗಾದ್ರೆ, 'ಬಾಹುಬಲಿ-2' ಬಿಡುಗಡೆಯ ನಂತರ ಏನೆಲ್ಲಾ ದಾಖಲೆಗಳನ್ನ ಮಾಡಿದೆ ಅಂತ ಇಲ್ಲಿದೆ ನೋಡಿ.....

ಮೊದಲ ದಿನದ 121 ಕೋಟಿ

'ಬಾಹುಬಲಿ ದಿ ಕನ್ ಕ್ಲೂಷನ್' ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ನಾಲ್ಕು ಭಾಷೆಗಳಲ್ಲಿ ತೆರೆಕಂಡಿದ್ದ ಈ ಚಿತ್ರದ ಮೊದಲ ದಿನವೇ 100 ಕೋಟಿ ಗಡಿದಾಟಿತ್ತು. ಒಟ್ಟಾರೆ ಮೊದಲ ದಿನ ಬಾಹುಬಲಿ ಗಳಿಸಿದ್ದು ಬರೋಬ್ಬರಿ 121 ಕೋಟಿ. ಇದು ಭಾರತೀಯ ಚಿತ್ರರಂಗದಲ್ಲಿ ಮೊದಲು.[ಸಾವಿರ ರೂಪಾಯಿ ಕೊಟ್ಟು ಗೋಲ್ಡ್ ಕ್ಲಾಸ್ ನಲ್ಲಿ ಕೂತು 'ಬಾಹುಬಲಿ-2' ನೋಡಿದ ಸಿ.ಎಂ ಸಿದ್ದು.! ]

ಬಾಲಿವುಡ್ ನಂಬರ್ ಸಿನಿಮಾ

ಬಾಲಿವುಡ್ ನಲ್ಲಿ ಕೇವಲ ಖಾನ್, ಕಪೂರ್ ಗಳದ್ದೇ ದರ್ಬಾರ್ ಇತ್ತು. ಆದ್ರೆ, ಈ ಎಲ್ಲ ಸಂಪ್ರದಾಯಗಳನ್ನ ಬಾಹುಬಲಿ ಪುಡಿ ಪುಡಿ ಮಾಡಿದೆ. ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನ 41 ಕೋಟಿ ಕಲೆಕ್ಷನ್ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್! ]

ಅತಿ ಹೆಚ್ಚು ಸ್ಕ್ರೀನ್ ನಲ್ಲಿ ಬಿಡುಗಡೆ

ಭಾರತೀಯ ಸಿನಿಮಾವೊಂದು ಇಲ್ಲಿಯವರೆಗೂ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾದ ಹೆಗ್ಗಳಿಕೆ ಬಾಹುಬಲಿ 2 ಚಿತ್ರಕ್ಕೆ ಸಲ್ಲುತ್ತೆ. ವರ್ಲ್ಡ್ ವೈಡ್ ಸುಮಾರು 9000 ಸ್ಕ್ರೀನ್ ನಲ್ಲಿ 'ಬಾಹುಬಲಿ' ರಿಲೀಸ್ ಆಗಿದೆ. ಇಷ್ಟು ದೊಡ್ಡದ ಒಪನಿಂಗ್ ಮಾಡಿರುವುದು ಇದೇ ಮೊದಲು.['ಬಾಹುಬಲಿ 2' ನೋಡಿ ರಾಜಮೌಳಿ ಬೆನ್ನುತಟ್ಟಿದ ಸೂಪರ್ ಸ್ಟಾರ್ ರಜನಿ]

ಅಮೆರಿಕಾದಲ್ಲಿ ಬಾಹುಬಲಿ ರೆಕಾರ್ಡ್

ಗಳಿಕೆಯಲ್ಲಿ ಹಾಲಿವುಡ್ ಚಿತ್ರಗಳನ್ನ ಹಿಂದಿಕ್ಕಿರುವ ಬಾಹುಬಲಿ ಅಮೆರಿಕಾದಲ್ಲಿ ಹೊಸ ದಾಖಲೆ ಬರೆದಿದೆ. ಮೊದಲ ವಾರಂತ್ಯದಲ್ಲಿ 65 ಕೋಟಿ ಗಳಿಸುವ ಮೂಲಕ, ಯುಎಸ್ ಬಾಕ್ಸ್ ಆಫೀಸ್ ನಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿರುವ ಚಿತ್ರವಾಗಿ ಹೊರಹೊಮ್ಮಿದೆ.['ಬಾಹುಬಲಿ' ಚೆನ್ನಾಗಿಲ್ಲ ಅಂದ್ರೆ ಮನೋವೈದ್ಯರ ಸಹಾಯ ಅಗತ್ಯ: ವರ್ಮಾ]

600 ಕೋಟಿ ಬಾಚಿದ 'ಬಾಹುಬಲಿ'

ಮೊದಲ ಮೂರು ದಿನಗಳು ಪರಾಕ್ರಮ ಮೆರೆದಿದ್ದ ಬಾಹುಬಲಿ ಇನ್ನು ತನ್ನ ನಾಗಲೋಟವನ್ನ ಮುಂದುವರೆಸಿದೆ. ದಾಖಲೆಗಳ ಪ್ರಕಾರ 6 ದಿನಗಳಲ್ಲಿ ಬಾಹುಬಲಿ 600 ಕೋಟಿಗಳಿಸಿದೆ ಎನ್ನಲಾಗುತ್ತಿದೆ.

1000 ಕೋಟಿಯತ್ತ ಹೆಜ್ಜೆ!

ಸದ್ಯ 'ಬಾಹುಬಲಿ'ಯ ಅಬ್ಬರ ನೋಡುತ್ತಿದ್ದರೇ, ಭಾರತೀಯ ಗಲ್ಲಾಪೆಟ್ಟಿಗೆ 1000 ಕೋಟಿ ಗಳಿಸುವ ಎಲ್ಲ ಲಕ್ಷಣಗಳು ಕಾಣುತ್ತಿದೆ. ಇಲ್ಲಿಯವರೆಗೂ ಅಮೀರ್ ಖಾನ್ ಅಭಿನಯದ ಪಿ.ಕೆ ಚಿತ್ರ 792 ಕೋಟಿ ಗಳಿಸುವ ಮೂಲಕ ಮೊದಲ ಸ್ಥಾನದಲ್ಲಿದೆ.

English summary
It's been 6 days since the film released, but Baahubali 2 is unstoppable at the box office. The film is galloping with big numbers, smashing each and every record every set by any Indian film in the past. Moreover, the film is busy making some new records too....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada