For Quick Alerts
  ALLOW NOTIFICATIONS  
  For Daily Alerts

  ಭಜರಂಗಿ 2 ಚಿತ್ರದ ಮತ್ತೊಂದು ಪೋಸ್ಟರ್ ಬಿಡುಗಡೆ, ಆರಕ ಪಾತ್ರದ ಲುಕ್ ರಿವೀಲ್

  |

  ಟ್ರೈಲರ್, ಟೀಸರ್ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ಹೈಪ್ ಕ್ರೀಯೇಟ್ ಮಾಡಿರೋ ಸಿನಿಮಾ ಭಜರಂಗಿ 2. ಶಿವರಾಜ್ ಕುಮಾರ್ ಮತ್ತು ಎ ಹರ್ಷ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಈ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಲಿದ್ದು, ಸಿನಿಮಾದ ಖಳನಟನ ಲುಕ್ ಪೋಸ್ಟರ್ ಬಿಡುಗಡೆಮಾಡಲಾಗಿದೆ.

  ಭಜರಂಗಿ 2 ಚಿತ್ರ ಆರಂಭ ಆದಾಗಿನಿಂದಲೂ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹುಟ್ಟಿಕೊಂಡಿದೆ. ಅದರಲ್ಲೂ ಶಿವರಾಜ್ ಕುಮಾರ್ ಅಭಿನಯದ ಸಿನಿಮಾ ಆಗಿರೋದರಿಂದ ಅಭಿಮಾನಿಗಳು ಸಿನಿಮಾ ರಿಲೀಸ್‌ಗೆ ಕಾಯುತ್ತಿದ್ದಾರೆ. ಇದರ ನಡುವೆ ಸಿನಿಮಾದ ಪೋಸ್ಟರ್ ಒಂದು ರಿಲೀಸ್ ಆಗಿದ್ದು ಇದರಲ್ಲಿ ಚಿತ್ರದ ಖಳನಾಯಕ ಆರಕ ಲುಕ್ ಭಯ ಹುಟ್ಟಿಸುವಂತಿದೆ. ಅಲ್ಲದೇ ಈ ಪೋಸ್ಟರ್‌ಗೆ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

  ನಾಳೆ ಅಂದ್ರೆ ಅ.20ರಂದು ಸಿನಿಮಾದ ಎರಡನೇ ಟ್ರೈಲರ್ ರಿಲೀಸ್ ಆಗಲಿದೆ. ಈ ಟ್ರೈಲರ್‌ನಲ್ಲಿ ಚಿತ್ರದಲ್ಲಿ ಎಲ್ಲಾ ಪಾತ್ರಗಳ ಲುಕ್ ರಿವೀಲ್ ಆಗಲಿದೆ, ಮೊದಲ ಟ್ರೈಲರ್‌ ನೋಡಿಯೇ ಸಾಕಷ್ಟು ಮಂದಿ ಖುಷಿಯಾಗಿದ್ರು, ಇದೀಗ ಚಿತ್ರದ 2ನೇ ಟ್ರೈಲರ್ ಯಾವ ರೀತಿ ಮೂಡಿಬರಲಿದೆ ಎಂಬ ಬಗ್ಗೆ ಸಾಕಷ್ಟು ಕುತೂಹಲಗೊಂಡಿದ್ದಾರೆ. ಇನ್ನು ಭಜರಂಗಿ 2 ಸಿನಿಮಾ ರಾಜ್ಯಾದ್ಯಂತ ಅ.29 ರಂದು ರಿಲೀಸ್ ಆಗುತ್ತಿದ್ದು, ಚಿತ್ರತಂಡ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಸಾಕಷ್ಟು ಪ್ರಚಾರದಲ್ಲೂ ತೊಡಗಿಸಿಕೊಂಡಿದೆ.

  ಶಿವರಾಜ್ ಕುಮಾರ್ ಲುಕ್ ಕೂಡ ಸಖತ್ ಆಗಿ ಮೂಡಿ ಬಂದಿದ್ದು, ಶಿವಣ್ಣ ಲುಕ್ ಪೋಸ್ಟರ್ ಕೂಡ ಈ ಹಿಂದೆ ರಿಲೀಸ್ ಆಗಿದೆ. ಹಾಗೇ ನಾಯಕಿ ಭಾವನಾ ಮೆನನ್, ಹಿರಿಯ ನಟಿ ಶ್ರುತಿ, ಖಳನಟ ಲೋಕಿ ಪೋಸ್ಟರ್‌ಗಳು ಕೂಡ ರಿಲೀಸ್ ಆಗಿದ್ದವು. ಈಗ ಹೊರಬಂದಿರುವ ಮತ್ತೊಬ್ಬ ಖಳನಟ ಚೆಲುವರಾಜು ಲುಕ್ ಪೋಸ್ಟರ್ ಭಾರಿ ಗಮನ ಸೆಳೆಯುತ್ತಿದೆ. ಟ್ರೈಲರ್ ಬಿಡುಗಡೆಗೂ ಮುನ್ನ ಈ ಪೋಸ್ಟರ್ ರಿಲೀಸ್ ಆಗಿರೋದು ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

  ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆದಾಗಿನಿಂದಲೂ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈ ಹಿಂದೆ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆದಾಗ ಟ್ವಿಟ್ಟರ್ ನಲ್ಲಿ ನಂ.1 ಟ್ರೆಂಡಿಂಗ್ ಸ್ಥಾನವನ್ನು ಪಡೆದುಕೊಂಡಿತ್ತು. ಅಲ್ಲದೇ ಭಜರಂಗಿ-2 ನಿರ್ದೇಶಕ ಹರ್ಷ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಜಯಣ್ಣ ಫಿಲ್ಮ್ಸ್ ನಿರ್ಮಾಣದಲ್ಲಿ ಸಿನಿಮಾ ಬರುತ್ತಿದೆ. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್‌ನಲ್ಲಿ ಭಜರಂಗಿ ಮತ್ತು ವಜ್ರಕಾಯ ಸಿನಿಮಾ ಬಳಿಕ ತಯಾರಾಗಿರುವ ಚಿತ್ರವಿದು.

  ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಭಾವನಾ ಮೆನನ್ ಕಾಣಿಸಿಕೊಂಡಿದ್ದು, ಭಾವನಾ ಮೆನನ್ ಟಗರು ಸಿನಿಮಾದ ಬಳಿಕ ಶಿವಣ್ಣ ಜೊತೆ ಎರಡನೇ ಭಾರಿ ನಟಿಸುತ್ತಿದ್ದಾರೆ. ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಭಜರಂಗಿ-2 ಹೇಗಿರಲಿದೆ ಎನ್ನುವ ಕುತೂಹಲಕ್ಕೆ ಅ.29ರಂದು ತೆರೆಬೀಳಲಿದೆ.

  English summary
  Actor Shivrajkumar starrer Bhajarangi 2 movie new poster released. Poster revealed the Aaraka look. Take a look.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X