ಅಂಬರೀಶ್ ನೆನೆದು ಭಾವುಕರಾದ ನಟ ಬಾಲಯ್ಯ
ನಟ ಬಾಲಕೃಷ್ಣ ಕನ್ನಡ ನಟರ ಜೊತೆಗೆ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ. ರಾಜ್ ಕುಮಾರ್ ಕುಟುಂಬ ಮಾತ್ರವಲ್ಲದೆ ಅಂಬರೀಶ್ ಸಹ ಅವರ ಒಳ್ಳೆಯ ಗೆಳೆಯರಾಗಿದ್ದರು.
ಅಂಬರೀಶ್ ಅವರ ಅಗಲಿಕೆ ಬಾಲಕೃಷ್ಣ ಅವರಿಗೆ ನೋವುಂಟು ಮಾಡಿದೆ. ನಿನ್ನೆ 'ಎನ್ ಟಿ ಆರ್' ಚಿತ್ರದ ಪತ್ರಿಕಾಗೋಷ್ಠಿ ಬೆಂಗಳೂರಿನಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಬಾಲಯ್ಯ ಅಂಬರೀಶ್ ಅವರನ್ನು ನೆನೆದರು.
ಅಂಬರೀಶ್ ಅವರ ನಿಧನದ ಕಾರಣ ಮೌನಾಚರಣೆ ಮಾಡಿದರು. ಕಾರ್ಯಕ್ರಮದ ನಡುವೆ ಎಲ್ಲರಿಗೂ ಮೌನಾಚರಣೆ ಮಾಡೋಣ ಎಂದು ಅವರೇ ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ''ಅಂಬರೀಶ್ ಅವರು ನನಗೆ ಒಳ್ಳೆಯ ಸ್ನೇಹಿತ ಅವರ ನಿಧನದಿಂದ ನನಗೆ ತೀವ್ರ ನೋವಾಗಿದೆ. ನಮ್ಮ ಅಣ್ಣ ಹರಿಕೃಷ್ಣ ಮೃತರಾದ ದುಃಖವನ್ನು ಮರೆಯುವ ಮುನ್ನವೇ ಅಂಬರೀಶ್ ಅವರು ಕೂಡ ಹೋದರು.'' ಎಂದು ಒಂದು ಕ್ಷಣ ಭಾವುಕವಾದರು ಬಾಲಯ್ಯ.
ಅಂದಹಾಗೆ, ಬಾಲಯ್ಯ ನಿನ್ನೆ ಬೆಂಗಳೂರಿಗೆ ತಮ್ಮ 'ಎನ್ ಟಿ ಆರ್' ಚಿತ್ರದ ಪ್ರಮೋಷನ್ ಗಾಗಿ ಬಂದಿದ್ದರು. ಈ ಸಿನಿಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
English summary
Telugu actor Balakrishna spoke about Ambareesh in 'NTR' movie press meet.


Click it and Unblock the Notifications