»   » ಮತ್ತೊಮ್ಮೆ ಕನ್ನಡದ ಕೀರ್ತಿ ಎತ್ತಿಹಿಡಿದ 'ತಿಥಿ' ಖ್ಯಾತಿಯ ಈರೇಗೌಡ

ಮತ್ತೊಮ್ಮೆ ಕನ್ನಡದ ಕೀರ್ತಿ ಎತ್ತಿಹಿಡಿದ 'ತಿಥಿ' ಖ್ಯಾತಿಯ ಈರೇಗೌಡ

Posted By:
Subscribe to Filmibeat Kannada

'ತಿಥಿ'... ಇಡೀ ಕನ್ನಡ ಚಿತ್ರರಂಗವೇ ಹೆಮ್ಮೆ ಪಡುವಂತಹ ಚಿತ್ರ. ಭಾರತೀಯ ಚಿತ್ರರಂಗವೇ ಒಮ್ಮೆ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡಿ, ಈ ರೀತಿಯಲ್ಲೂ ಸಿನಿಮಾ ಮಾಡಬಹುದಾ ಎಂದು ಪ್ರತಿಯೊಬ್ಬರನ್ನೂ ಆಶ್ಚರ್ಯ ಪಡುವಂತೆ ಮಾಡಿದ ಚಿತ್ರ.

'ತಿಥಿ' ಚಿತ್ರಕ್ಕೆ ಕಥೆ ಬರೆದಿದ್ದ ಈರೇಗೌಡ ಈಗ 'ಬಳೆಕೆಂಪ' ಎಂಬ ಸಿನಿಮಾವನ್ನ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಚಿತ್ರೀಕರಣದ ಹಂತದಲ್ಲಿರುವ 'ಬಳೆಕೆಂಪ' ಸಿನಿಮಾ ಪ್ರಶಸ್ತಿಯನ್ನ ಗಿಟ್ಟಿಸಿಕೊಂಡಿದೆ.

'Bale Kempa' wins the work in progress award

'ಬಳೆಕೆಂಪ' ಸಿನಿಮಾ ರಾಷ್ಟ್ರೀಯ ಚಲನಚಿತ್ರ ಅಭಿವೃದ್ದಿ ನಿಗಮ ನಿಯಮಿತಿ (National Film Development Corporation Limited) ವತಿಯಿಂದ ವರ್ಕ್ ಇನ್ ಪ್ರೋಗ್ರೆಸ್ ಲಾಬ್ ಇನ್ ಪ್ರಶಸ್ತಿಯನ್ನ ಪಡೆದುಕೊಂಡಿದೆ. ಗೋವಾದಲ್ಲಿ ನಡೆಯುತ್ತಿರುವ 'ಐ ಎಫ್ ಎಫ್ ಐ' (ಇಂಟರ್ ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ ಆಫ್ ಇಂಡಿಯಾ) ನಲ್ಲಿ ಇನ್ನೂ ಚಿತ್ರೀಕರಣ ಮುಗಿಯದ 'ಬಳೆಕೆಂಪ' ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ಕಳೆದ ಬಾರಿ 'ತಿಥಿ' ಸಿನಿಮಾ ಕೂಡ ವರ್ಕ್ ಇನ್ ಪ್ರೋಗ್ರೆಸ್ ಲಾಬ್ ಇನ್ ಪ್ರಶಸ್ತಿಯನ್ನ ಪಡೆದುಕೊಂಡಿತ್ತು. ಒಟ್ಟಾರೆ ಚಿತ್ರೀಕರಣ ಹಂತದಲ್ಲೇ ಯಶಸ್ಸು ಪಡೆದುಕೊಂಡಿರುವ 'ಬಳೆಕೆಂಪ' ಚಿತ್ರ ತೆರೆ ಮೇಲೆ ಬಂದಾಗ ಪ್ರೇಕ್ಷಕರನ್ನ ಮೋಡಿ ಮಾಡೋದ್ರಲ್ಲಿ ಅನುಮಾನವಿಲ್ಲ.

English summary
Eregowda of 'Thithi' film directed Kannada Movie 'Bale Kempa' wins 'Work in progress Award'. ತಿಥಿ ಸಿನಿಮಾ ಖ್ಯಾತಿಯ ನಿರ್ದೇಶಕ ಈರೇಗೌಡ ನಿರ್ದೇಶನದ ಮೊದಲ ಚಿತ್ರ ಬಳೇ ಕೆಂಪ ವರ್ಕ್ ಇನ್ ಪ್ರೋಗ್ರೆಸ್ ಪ್ರಶಸ್ತಿ ಪಡೆದುಕೊಂಡಿದೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada