»   » ಬೌದ್ಧಧರ್ಮ ಅಪ್ಪಿದ ಬೆಂಗಳೂರು ಮೂಲದ ನಟಿ

ಬೌದ್ಧಧರ್ಮ ಅಪ್ಪಿದ ಬೆಂಗಳೂರು ಮೂಲದ ನಟಿ

Posted By:
Subscribe to Filmibeat Kannada

ಇತ್ತೀಚಿನ ದಿನಗಳಲ್ಲಿ ಸಿನಿಮಾ ತಾರೆಗಳು ಸ್ವ-ಇಚ್ಛೆಯಿಂದ ಮತಾಂತರಗೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಸಿನಿಮಾ ತಾರೆಗಳಾದ ನಗ್ಮಾ, ನಯನತಾರಾ, ಖುಷ್ಬೂ ಹಾಗೂ ಸಂಗೀತ ನಿರ್ದೇಶಕರಾದ ಯುವನ್ ಶಂಕರ್ ರಾಜಾ, ಎ.ಆರ್.ರೆಹಮಾನ್ ಇವರೆಲ್ಲಾ ಮತಾಂತಗೊಂಡವರೇ.

ಇದೀಗ ಈ ಪಟ್ಟಿಗೆ ಹೊಸದಾಗಿ ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ಆದರೆ ಕನ್ನಡ ಚಿತ್ರ ನಿರ್ಮಾಪಕರ ಪಾಲಿಗೆ ಹುಳಿ ದ್ರಾಕ್ಷಿಯಾದ ನಟಿ ರಿಯಾ ಚಕ್ರವರ್ತಿ. ಬೆರಳೆಣಿಕೆಯಷ್ಟು ತೆಲುಗು, ಹಿಂದಿ ಚಿತ್ರಗಳಲ್ಲಿ ರಿಯಾ ಬಣ್ಣ ಹಚ್ಚಿದ್ದಾರೆ. [ಹಿಂದೂ, ಕ್ರೈಸ್ತ,ಇಸ್ಲಾಂಗೆ ಮತಾಂತರಗೊಂಡ ತಾರೆಗಳು]

Rhea Chakraborthy1

ಇದೀಗ ರಿಯಾ ಅವರು ಬೌದ್ಧಧರ್ಮವನ್ನು ಅನುಸರಿಸುತ್ತಿದ್ದಾರಂತೆ. ಬೌದ್ಧಧರ್ಮದ ಕಡೆಗೆ ತಾವು ಆಕರ್ಷಿತರಾಗಲು ಕಾರಣ ಏನು ಎಂದರೆ, ಅವರು ಕೊಟ್ಟ ಉತ್ತರ, ಈ ಧರ್ಮ ತಮಗೆ ಸಿಕ್ಕಾಪಟ್ಟೆ ಸಂತೋಷ ಕೊಡುತ್ತಿದೆ. ಜೊತೆಗೆ ಗೆಲುವನ್ನೂ ತಂದುಕೊಡುತ್ತಿದೆ ಎಂದಿದ್ದಾರೆ.

ರಿಯಾ ಅಭಿನಾಯದ ಚಿತ್ರಗಳು ಬಾಕ್ಸ್ ಆಫೀಸಲ್ಲಿ ಗೋತಾ ಹೊಡೆಯುತ್ತಾ ಇವರ ವೃತ್ತಿಬದುಕಿನ ಗ್ರಾಫ್ ಸಹ ತಳಕಚ್ಚಿತ್ತು. ಅದೇನು ಅಚ್ಚರಿಯೋ ಏನೋ ಇವರು ಬೌದ್ಧ ಧರ್ಮ ಅನುಸರಿಸಿದ ಬಳಿಕ ವೃತ್ತಿ ಬದುಕಿನಲ್ಲಿ ಒಂಚೂರು ಬದಲಾವಣೆಯೂ ಕಾಣಿಸುತ್ತಿದೆ. ಹಾಗಾಗಿ ಅವರ ಮಾತುಗಳನ್ನು ನಂಬಬಹುದು. (ಏಜೆನ್ಸೀಸ್)

English summary
Bangalore based beauty Rhea Chakraborthy now showing interest on Rhea Chakraborthy’s Buddhism practice. Rhea says, Buddhism is giving her high level happiness and is showing way to victories.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada