»   » ಬರಗೂರರ 'ಮರಣದಂಡನೆ'ಯಲ್ಲಿ ಶ್ರೀಕಾಂತ್

ಬರಗೂರರ 'ಮರಣದಂಡನೆ'ಯಲ್ಲಿ ಶ್ರೀಕಾಂತ್

Posted By:
Subscribe to Filmibeat Kannada

ಬರಗೂರು ರಾಮಚಂದ್ರಪ್ಪ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಮರಣದಂಡನೆ' ಸದ್ದಿಲ್ಲದಂತೆ ಚಿತ್ರೀಕರಣ ಮುಗಿದಿದೆ. ಈ ಚಿತ್ರವನ್ನು ಹಾಲಪ್ಪ ಕ್ರಿಯೇಷನ್ಸ್ ಲಾಂಛನದಲ್ಲಿ ಮುರಳೀಧರ ಹಾಲಪ್ಪ ಅವರು ನಿರ್ಮಿಸುತ್ತಿದ್ದಾರೆ.

ಒಂದು ಹಾಡಿನ ಚಿತ್ರೀಕರಣ ಹೊರತುಪಡಿಸಿ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಬರಗೂರು ರಾಮಚಂದ್ರ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿದ ಚಿತ್ರ ಇದು. ನಿರ್ದೇಶನದ ಜೊತೆಗೆ ಸಂಭಾಷಣೆ, ಚಿತ್ರಕತೆ, ಗೀತರಚನೆಯನ್ನೂ ಬರಗೂರರೇ ಮಾಡಿರುವುದು ವಿಶೇಷ.

ಈ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ನಿರ್ದೇಶನವಿದ್ದು, ನಾಗರಾಜ ಆದವಾನಿ ಅವರ ಛಾಯಾಗ್ರಹಣ, ಸುರೇಶ್ ಅರಸು ಅವರ ಸಂಕಲನವಿದೆ. ಈ ಚಿತ್ರದ ಕಲಾ ನಿರ್ದೇಶಕರು ಮೋಹನ್ ಬಿ ಕೆರೆ, ಸಹ ನಿರ್ದೇಶಕರು ನಟರಾಜ್ ಶಿವು ಮತ್ತು ಪ್ರವೀಣ್.

Baraguru Ramachandrappa novel based movie 'Maranadandane'

ಭಯೋತ್ಪಾದನೆಯ ವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ಆ ಮೂಲಕ ಸಂಭವಿಸುವ ಕೆಲವು ಅವಘಡಗಳನ್ನು ಅನಾವರಣಗೊಳಿಸುವ ಈ ಚಿತ್ರದಲ್ಲಿ ಅಪರಾಧಿ ಮತ್ತು ನಿರಪರಾಧಿಗಳನ್ನು ಸೂಕ್ತವಾಗಿ ವಿಂಗಡಿಸುವಲ್ಲಿ ಸೋಲುವ ವ್ಯವಸ್ಥೆ ಕುರಿತು ವ್ಯಾಖ್ಯನವಿದೆ.

ಗಲ್ಲಿಗೆ ಹಾಕುವ ಕೆಲಸ ಮಾಡುವಾತನೇ ಗಲ್ಲಿಗೇರಬೇಕಾಗಿ ಬಂದ ಸಂದರ್ಭವನ್ನು ಒಳಗೊಂಡ ಕಥಾವಸ್ತುವು ಸಾವು ಬದುಕಿನ ತಲ್ಲಣಗಳನ್ನು ಸಾದರಪಡಿಸುತ್ತದೆ. ಅನೇಕರನ್ನು ಗಲ್ಲಿಗೆ ಹಾಕಿದ 'ಆನಂದ' ಅನುಭವಿಸುವವನೇ ಗಲ್ಲಿಗೆ ಕೊರಳು ಕೊಡಬೇಕಾಗಿ ಬಂದಾಗ ಅನುಭವಿಸುವ ಸಾವಿನ ತಲ್ಲಣವು ಒಂದು ಮುಖ್ಯ ಆಯಾಮವಾಗಿದೆ.

ಇಂತಹ ಒಂದು ವಿಶಿಷ್ಟ ಕಥಾವಸ್ತುವುಳ್ಳ 'ಮರಣದಂಡನೆ' ಚಿತ್ರದಲ್ಲಿ 'ಒಲವೇ ಮಂದಾರ' ಖ್ಯಾತಿಯ ಶ್ರೀಕಾಂತ್ ಮುಖ್ಯಪಾತ್ರ ವಹಿಸಿದ್ದಾರೆ. ಜೊತೆಗೆ ಹಿರಿಯ ನಟರಾದ ಸುಂದರರಾಜ್, ಪ್ರಮೀಳಾ ಜೋಷಾಯಿ, ಜಯಕುಮಾರ್, ಶಿವಲಿಂಗಪ್ರಸಾದ್, ಸುಂದರರಾಜು ಅರಸು, ಮೈಸೂರು ರಮಾನಂದ್, ಗುಬ್ಬಿ ಪ್ರಕಾಶ್ ಅಭಿನಯಿಸಿದ್ದಾರೆ.

ವಿಶೇಷವೆಂದರೆ ಕಿರುತೆರೆಯಲ್ಲಿ ಪ್ರಸಿದ್ಧರಾದ ರಜನಿ, ಶೀಲಾ, ಸಪ್ನಾರಾಜ್ ಅವರು ಈ ಚಿತ್ರದ ಮುಖ್ಯ ಸ್ತ್ರೀ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ, ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರದ ಕಲಾವಿದರ ತಂಡವನ್ನು ಈ ಚಿತ್ರವು ತೊಡಗಿಕೊಂಡಿರುವುದು ಒಂದು ವಿಶೇಷ. (ಫಿಲ್ಮಿಬೀಟ್ ಕನ್ನಡ)

English summary
Kannada movie 'Maranadandane' (means Capital Punishment), directed by Baraguru Ramachandrappa, the movie just finished shooting. The movie produced by Muralidhara Halappa under Halappa creations banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada