»   » ಹಲೋ ಹಲೋ ಕೌರವೇಶ ಇದೇನಿದು ಹೊಸ ವೇಷ

ಹಲೋ ಹಲೋ ಕೌರವೇಶ ಇದೇನಿದು ಹೊಸ ವೇಷ

Posted By:
Subscribe to Filmibeat Kannada

ಬಣ್ಣದ ಕೊಡೆ ಹಿಡಿದುಕೊಂಡು ಹಳ್ಳಿಯೊಂದಕ್ಕೆ ಬರುವ ಟೀಚರಮ್ಮ ಕುಕ್ಕುಕ್ಕೂ ಕುಕ್ಕೂಕ್ಕೂ ಪ್ರೀತಿ ಮಾಡೋಣ ಅಂತು ಕುಕ್ಕುಕ್ಕೂ ಎಂದು ಹಾಡುತ್ತಾರೆ. ಅದೇ ಊರಿನ ಯಜಮಾನ ಬಿಳಿ ಪಂಚೆಯಲ್ಲಿ ಹುರಿಮೀಸೆ ತಿರುವುತ್ತಾ ಟೀಚರಮ್ಮನನ್ನು ಫಾಲೋ ಮಾಡುತ್ತಾನೆ.

ಈ ಸನ್ನಿವೇಶ ಗೊತ್ತಲ್ಲಾ. 1990ರಲ್ಲಿ ಬಿಡುಗಡೆಯಾದ ಬಿ.ಸಿ.ಪಾಟೀಲ್ (ಬಸವನಗೌಡ ಚನ್ನಬಸವನಗೌಡ ಪಾಟೀಲ್) ಹಾಗೂ ಪ್ರೇಮಾ ಅಭಿನಯದ 'ಕೌರವ' ಚಿತ್ರದ್ದು. ಈಗ ಬಿ.ಸಿ.ಪಾಟೀಲ್ ಅವರು ಮತ್ತೆ ಬೆಳ್ಳಿಪರದೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಮರಳುತ್ತಿದ್ದಾರೆ. ಈ ಬಾರಿಯೂ 'ಕೌರವ'ನಾಗಿ ಎಂಬುದು ವಿಶೇಷಗಳಲ್ಲಿ ವಿಶೇಷ.

Actor BC patil

2013ರ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರು ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿದ್ದು ಗೊತ್ತೇ ಇದೆ. ಆದರೆ ಮತದಾರ ಪ್ರಭುಗಳು ಪಾಟೀಲ್ ಅವರ ಕೈಹಿಡಿಯಲಿಲ್ಲ. ಕೆಜೆಪಿಯ ಯು.ಬಿ.ಬಣಕಾರ್ ಅವರು ಹಿರೇಕೆರೂರು ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದು, ಪಾಟೀಲ್ ಅವರು ಕೆಲವು ಸಾವಿರ ಮತಗಳ ಅಂತರದಿಂದ ಸೋತಿದ್ದು ಇನ್ನೂ ನೆನ್ನೆಮೊನ್ನೆ ನಡೆದಂತೆ ಇದೆ.

ಈಗ ಪಾಟೀಲ್ ಅವರು ಕೌರವ ಭಾಗ 2 ಮಾಡಲು ಮುಂದಾಗಿದ್ದಾರೆ. ಜನ ತಮ್ಮನ್ನು ಈಗಲೂ ಕೌರವ ಪಾತ್ರದಿಂದ ಗುರುತಿಸುತ್ತಾರೆ. ಎಷ್ಟೋ ವರ್ಷಗಳಾದರೂ ಆ ಪಾತ್ರ ಇನ್ನೂ ಜನಮಾನಸದಲ್ಲಿ ಉಳಿದುಹೋಗಿದೆ. ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಎಸ್ ಮಹೇಂದರ್ ಅವರು ಈ ಬಾರಿ ಚಿತ್ರಕಥೆ ರಚಿಸಲಿದ್ದಾರೆ ಎಂದಿದ್ದಾರೆ.

ಮಹೇಂದರ್ ಅವರು ಚಿತ್ರಕಥೆ ಮುಗಿಸಿದ ಕೂಡಲೆ ತಾನು ಬಣ್ಣ ಹಚ್ಚಿಕೊಳ್ಳಲು ಸಿದ್ಧವಾಗುತ್ತೇನೆ ಎಂದಿದ್ದಾರೆ. ಪಾಟೀಲ್ ಅವರು ಸದ್ಯಕ್ಕೆ 'ಒಂದ್ ಚಾನ್ಸ್ ಕೊಡಿ', 'ಪುಂಗಿದಾಸ' ಸೇರಿದಂತೆ ಹಲವು ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. 'ಕೌರವ' ಚಿತ್ರದ ಎಲ್ಲಾ ಹಾಡುಗಳು ಇಂದಿಗೂ ಮತ್ತೆ ಮತ್ತೆ ಗುನುಗುವಂತಿವೆ. ಏನೈತೋ ಅಂತರಾಳದೊಳಗೆ ಏನೈತೋ, ಹುಡುಗೀರಂದ್ರೆ ಡೇಂಜರಪ್ಪೋ, ಇಳಕಲ್ ಸೀರೆ ಉಟ್ಕೊಂಡು... (ಏಜೆನ್ಸೀಸ್)

English summary
Kannada films actor cum politician B.C.Patil is all set to make a Kaurava sequel, which gave him a lot of popularity when released in the late 1990s. S Mahendar who directed the original is writing the screenplay for the film.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada