For Quick Alerts
  ALLOW NOTIFICATIONS  
  For Daily Alerts

  ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ: ಕೌರವನಿಗೆ ಕೊರೊನಾ ಭೀತಿ

  |

  ಮಾಜಿ ನಟ, ಹಾಲಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಭೀತಿ ಕಾಡುತ್ತಿದೆ. ಸಚಿವ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಪಾಸಿಟಿವ್ ಆಗಿದ್ದು, ಸಚಿವರಿಗೂ ಆತಂಕ ಎದುರಾಗಿದೆ.

  ಈ ಕುರಿತು ಟ್ವೀಟ್ ಮಾಡಿರುವ ಬಿ.ಸಿ.ಪಾಟೀಲ್, 'ನನ್ನ ಶ್ರೀಮತಿ, ಅಳಿಯ ಹಾಗೂ ಹಿರೇಕೆರೂರಿನ ನಿವಾಸದ ಸಿಬ್ಬಂದಿ ವರ್ಗದವರು ಸೇರಿದಂತೆ ಒಟ್ಟು ಐವರಿಗೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದೆ' ಎಂದು ಟ್ವೀಟ್ ಮಾಡಿದ್ದಾರೆ.

  ಕೊರೊನಾದಿಂದ ಗುಣವಾಗಲು ತೆಗೆದುಕೊಂಡ ಆಯುರ್ವೇದ ಔ‍ಷಧದ ಚಿತ್ರ ಹಂಚಿಕೊಂಡ ನಟ ವಿಶಾಲ್ಕೊರೊನಾದಿಂದ ಗುಣವಾಗಲು ತೆಗೆದುಕೊಂಡ ಆಯುರ್ವೇದ ಔ‍ಷಧದ ಚಿತ್ರ ಹಂಚಿಕೊಂಡ ನಟ ವಿಶಾಲ್

  ಕೆಲವು ದಿನಗಳ ಹಿಂದೆ ಸಹ ಇದೇ ಬಿ.ಸಿ.ಪಾಟೀಲ್ ಅವರಿಗೆ ಕೊರೊನಾ ಆತಂಕ ಎದುರಾಗಿದ್ದು, ಮಿನಿಸ್ಟರ್ ಕ್ವಾಟ್ರಸ್‌ನಲ್ಲಿನ ಪಾಟೀಲ್ ಸಂಬಂಧಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಆಗಿತ್ತು, ಬಿಸಿ.ಪಾಟೀಲ್ ಅವರ ಸಂಪರ್ಕದಲ್ಲಿದ್ದರು. ಆಗ ಬಿ.ಸಿ.ಪಾಟೀಲ್‌ಗೆ ಕೊರೊನಾ ಭೀತಿ ಉಂಟಾಗಿತ್ತಾದರೂ ಅವರಿಗೆ ಸೋಂಕು ತಗುಲಿರಲಿಲ್ಲ.

  ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ

  ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ

  ಆದರೆ ಈಗ ಪರಿಸ್ಥಿತಿ ಭಿನ್ನವಾಗಿದ್ದು, ಸ್ವತಃ ಬಿ.ಸಿ.ಪಾಟೀಲ್ ಪತ್ನಿಗೆ ಕೊರೊನಾ ಬಂದಿದೆ. ಅಷ್ಟೇ ಅಲ್ಲದೆ ಪಾಟೀಲ್ ನಿವಾಸದಲ್ಲಿದ್ದ ಐದು ಮಂದಿ ಸಿಬ್ಬಂದಿಗೂ ಕೊರೊನಾ ಪಾಸಿಟಿವ್ ಬಂದಿದೆ. ಹಾಗಾಗಿ ಈ ಬಾರಿ ಕೊರೊನಾ ಸೋಂಕಿನ ದಿಗಿಲು ಪಾಟೀಲ್‌ಗೆ ತುಸು ಹೆಚ್ಚಿಗೆ ಇದೆ.

  ಪತ್ನಿ ಮತ್ತು ಅಳಿಯನಿಗೆ ಕೊರೊನಾ

  ಪತ್ನಿ ಮತ್ತು ಅಳಿಯನಿಗೆ ಕೊರೊನಾ

  ಪಾಟೀಲ್ ಅವರ ಪತ್ನಿ, ಅಳಿಯ ಸೇರಿ ಇನ್ನುಳಿದ ಸೋಂಕಿತ ಸಿಬ್ಬಂದಿಯನ್ನು ಸಂಬಂಧಿತ ಕೊರೊನಾ ಕೇರ್ ಸೆಂಟರ್‌ಗೆ ಸೇರಿಸಲಾಗಿದೆ ಎಂದು ಬಿ.ಸಿ.ಪಾಟೀಲ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಅವರೆಲ್ಲರೂ ಬೇಗ ಗುಣಮುಖವಾಗಲಿ ಎಂದು ಹಾರೈಸಿರೆಂದು ಪಾಟೀಲ್ ಮನವಿ ಮಾಡಿದ್ದಾರೆ.

  'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...'ನಾನಿರುವುದೇ ಹೀಗೆ': ನಿಮಗೆ ಗೊತ್ತಿರದ ಸುಧಾರಾಣಿ ಬದುಕು...

  ಕ್ವಾರಂಟೈನ್ ಆಗಬೇಕಿದೆ

  ಕ್ವಾರಂಟೈನ್ ಆಗಬೇಕಿದೆ

  ನಿಯಮಗಳನ್ವಯ ಬಿ.ಸಿ.ಪಾಟೀಲ್ ಅವರು ಕ್ವಾರಂಟೈನ್‌ಗೆ ಒಳಪಡಬೇಕಾಗಿದೆ. ಈಗ ಪಾಸಿಟಿವ್ ಬಂದಿರುವ ಎಲ್ಲರೂ ಹಿರೇಕೆರೂರಿನ ನಿವಾಸದಲ್ಲಿದ್ದರು. ಬಿ.ಸಿ.ಪಾಟೀಲ್‌ ಹಿರೇಕೆರೂರು ನಿವಾಸಕ್ಕೆ ಭೇಟಿ ಕೊಟ್ಟಿದ್ದರೇ ಇಲ್ಲವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

  ನಟನೆಯಿಂದ ದೂರ ಉಳಿದಿರುವ ಬಿ.ಸಿ.ಪಾಟೀಲ್

  ನಟನೆಯಿಂದ ದೂರ ಉಳಿದಿರುವ ಬಿ.ಸಿ.ಪಾಟೀಲ್

  ನಟರಾಗಿ ನಿಷ್ಕರ್ಷ, ಮಹಾಕ್ಷತ್ರಿಯ, ಕೌರವ, ಜಾಣ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಬಿ.ಸಿ.ಪಾಟೀಲ್. ಇದೀಗ ನಟನೆ ಬಿಟ್ಟು ಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಕೃಷಿ ಸಚಿವರಾಗಿರುವ ಅವರು ನಟಿಸಿದ ಕೊನೆಯ ಸಿನಿಮಾ 2017 ರಲ್ಲಿ ಬಿಡುಗಡೆಯಾದ ಕಾಫಿತೋಟ.

  ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್

  English summary
  Actor, politician BC Patil's wife tested coronavirus positive. His son in law also tested positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X