twitter
    For Quick Alerts
    ALLOW NOTIFICATIONS  
    For Daily Alerts

    ಕೊರೊನಾ 4ನೇ ಅಲೆ: ಥಿಯೇಟರ್‌ಗಳಲ್ಲಿ 50% ಆಕ್ಯುಪೆನ್ಸಿ ಬಗ್ಗೆ ಸದ್ದು!

    |

    ನಿಧಾನವಾಗಿ ಕೋವಿಡ್ 19 4ನೇ ಅಲೆಯ ಬಗ್ಗೆ ಸದ್ದು ಕೇಳಿ ಬರುತ್ತಿದೆ. ಕೊರೊನಾದ ಮತ್ತೊಂದು ಅಲೆ ಅಬ್ಬರಿಸಲಿದೆ ಎನ್ನುವ ಬಗ್ಗೆ ವರದಿ ಆಗುತ್ತಿದೆ. ಹಾಗಾಗಿ ಮತ್ತೆ ಜನರಿಗೆ ಆತಂಕ ಶುರುವಾಗಲಿದೆ. ಇದು ಮತ್ತೆ ಹೆಚ್ಚಾದರೆ ಜನರ ನಿತ್ಯ ಜೀವನದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರಲಿದೆ. ಹಾಗಾಗಿ ಈ ಬಗ್ಗೆ ಚಿತ್ರರಂಗದಲ್ಲೂ ಕೂಡ ಆತಂಕ ಮನೆ ಮಾಡಿದೆ.

    ಕೊರೊನಾ ಹಾವಳಿ ಶುರುವಾದಾಗಿಂದ ಚಿತ್ರರಂಗ ಸಂಕಷ್ಟವನ್ನು ಎದುರಿಸುತ್ತಾ ಇದೆ. ಸಾಕಷ್ಟು ಚಿತ್ರಗಳು ರಿಲೀಸ್ ಆಗಲು ವರ್ಷಗಟ್ಟಲೆ ಕಾದಿವೆ. ಈಗ ಮತ್ತೆ ಕೊರೊನಾ, ಲಾಕ್‌ಡೌನ್ ಎಂದರೆ ಆತಂಕ ಸಹಜ. ಇನ್ನು ಈಗ 4ನೇ ಅಲೆಯ ಆರಂಭ ಎಂದು ಹೇಳಲಾಗುತ್ತಿದೆ. ಆದರೆ ಮೇ ತಿಂಗಳ ಅಂತ್ಯದಲ್ಲಿ ಕೊರೊನಾ ಅಬ್ಬರ ಮತ್ತೆ ಶುರುವಾಗಲಿದೆ ಎನ್ನಲಾಗುತ್ತಿದೆ.

    ಹಾಗಾಗಿ ಇದು ಚಿತ್ರರಂಗಕ್ಕೆ ತಲೆ ನೋವು ಆಗಲಿದೆ. ಯಾಕೆಂದರೆ ಲಾಕ್‌ಡೌನ್ ವಿಚಾರ ಬಂದಾಗ ಮೊದಲು ಬೀಗ ಹಾಕುವುದೇ ಚಿತ್ರ ಮಂದಿರಗಳಿಗೆ. ಆದರೆ ಅದಕ್ಕೂ ಮುನ್ನ ಚಿತ್ರರಂಗದಲ್ಲಿ 50% ಆಕ್ಯುಪೆನ್ಸಿ ಜಾರಿ ಮಾಡಲಾಗುತ್ತದೆ. ಈಗ ಇದರ ಬಗ್ಗೆ ಗುಸು, ಗುಸು ಕೇಳಿ ಬರುತ್ತಿದೆ. ಸರ್ಕಾರ ಮತ್ತೆ ಥಿಯೇಟರ್‌ಗಳಲ್ಲಿ 50% ಆಕ್ಯುಪೆನ್ಸಿ ಜಾರಿ ಮಾಡಲಿದೆ ಎನ್ನಲಾಗುತ್ತಿದೆ.

    Because Of Covid 19 4th Wave, Is 50% Occupancy Enforce in Karnataka Cinema halls

    ಕಳೆದ ಬಾರಿ 2021ರ ಡಿಸೆಂಬರ್ ಕೊನೆ ವಾರದಲ್ಲಿ ಒಮಿಕ್ರಾನ್ ವೈರಾಣು ಹರಡುವಿಕೆ ಹೆಚ್ಚಾದ ಬಳಿಕ ಕೆಲ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಯಿತು. ಕೋವಿಡ್ ಸ್ಥಿತಿಗತಿ ಆಧರಿಸಿ ಮಾರ್ಗಸೂಚಿ ಬಿಡುಗಡೆ ಮಾಡಲಾಗಿತ್ತು. ಜನವರಿ 15 ರಿಂದಲೇ ಚಿತ್ರಮಂದಿರ, ಜಿಮ್, ಯೋಗ ಕೇಂದ್ರ, ಸ್ವಿಮ್ಮಿಂಗ್ ಪೂಲ್ ನಲ್ಲಿ 50% ರಷ್ಟು ಬಳಕೆಗೆ ಮಾತ್ರ ಅವಕಾಶ ನೀಡಲಾಗಿತ್ತು.

    Because Of Covid 19 4th Wave, Is 50% Occupancy Enforce in Karnataka Cinema halls

    ಇದರಿಂದ ಸಾಕಷ್ಟು ಚಿತ್ರಗಳು ರಿಲೀಸ್ ಆಗಲು ಸಾಧ್ಯವೇ ಆಗಿರಲಿಲ್ಲ. ಹಾಗಾಗಿ ಚಿತ್ರಮಂದಿರಗಳು ಅನ್‌ಲಾಕ್ ಆಗುತ್ತಲೇ ಸಾಲು, ಸಾಲು ಚಿತ್ರಗಳು ತೆರೆಗೆ ಬಂದು ಬಿಟ್ಟವು. ಈಗಲೂ ಸಾಲು, ಸಾಲು ಚಿತ್ರಗಳು ರಿಲೀಸ್ ದಿನಾಂಕವನ್ನು ಫಿಕ್ಸ್ ಮಾಡಿಕೊಂಡು ತೆರೆಗೆ ಬರಲು ಸಜ್ಜಾಗಿವೆ. ಈ ಸಮಯದಲ್ಲಿ ಮತ್ತೆ 50% ಅಂದರೆ, ಒಂದಷ್ಟು ಚಿತ್ರಗಳು ಸಂಕಷ್ಟಕ್ಕೆ ಸಿಲುಕಲಿವೆ.

    English summary
    Because Of Covid 19 4th Wave, Is 50% Occupancy Enforce in Karnataka Cinema halls, Know More,
    Monday, May 2, 2022, 14:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X