»   » ಬಳ್ಳಾರಿಯಲ್ಲಿ ಮತ್ತೆ ಗರಿಗೆದರಿದ ಸಿನಿಮಾ ಗಣಿಗಾರಿಕೆ

ಬಳ್ಳಾರಿಯಲ್ಲಿ ಮತ್ತೆ ಗರಿಗೆದರಿದ ಸಿನಿಮಾ ಗಣಿಗಾರಿಕೆ

Posted By: ಜೀವನರಸಿಕ
Subscribe to Filmibeat Kannada

ಸ್ಯಾಂಡಲ್ ವುಡ್ ನ ಸಿನಿಕರ್ಮಿಗಳಿಗೆ ಶೂಟಿಂಗ್ ಫೇವರೀಟ್ ಪ್ಲೇಸ್ ಯಾವುದು ಅಂತೀರಾ? ಸಕಲೇಶಪುರಾನೂ ಅಲ್ಲ, ಮಡಿಕೇರೀನೂ ಅಲ್ಲ. ಅದು ಬಳ್ಳಾರಿ ಎಂದರೆ ನಿಮಗೆ ಅಚ್ಚರಿಯಾಗುತ್ತದೆ. ಬಳ್ಳಾರಿಲೇನಿದೆ ಬರೀ ಮಣ್ಣು ಕಲ್ಲು ಅಂತ ನೀವೇಳ್ಬಹುದು. ಆ ಮಣ್ಣು ಕಲ್ಲು ಕ್ಯಾಮೆರಾ ಕಣ್ಣಿಗೆ ಚಿನ್ನದಂತೆ ಕಾಣ್ತಿದೆ.

ಹೌದು ಸ್ಯಾಂಡಲ್ ವುಡ್ ನ ಸ್ಟಾರ್ ಸಿನಿಮಾಗಳು ಸಾಲುಸಾಲಾಗಿ ಬಳ್ಳಾರಿಯಲ್ಲಿ ಶೂಟಿಂಗ್ ನಡೆಸ್ತಿವೆ. ಪವರ್ ಸ್ಟಾರ್ ಸಿನಿಮಾದಲ್ಲಿ ಬಳ್ಳಾರಿ ಲೊಕೇಷನ್ ಚೆನ್ನಾಗಿ ಬಳಸಿಕೊಳ್ಳಲಾಗಿ, ರಗಡ್ ಆಗಿ ಕಾಣಿಸೋ ಗಣಿ ಪ್ರದೇಶವೇ ಇಲ್ಲಿ ಹೈಲೈಟ್.

Bellari is hot favorite for Kannada films

ಸದ್ಯ ಶೂಟಿಂಗ್ ಮಾಡ್ತಿರೋ ರಣವಿಕ್ರಮ ಚಿತ್ರ ಕೂಡ ಬಳ್ಳಾರಿ ಗಣಿಪ್ರದೇಶದಲ್ಲಿ ಶೂಟಿಂಗ್ ಮಾಡಿದ ಫಸ್ಟ್ ಲುಕ್ಕನ್ನ ನಾವೆ ನಿಮ್ಮ ಮುಂದೆ ಇಟ್ಟಿದ್ವಿ. ಈಗ ಸುದೀಪ್ ಅಭಿನಯದ 'ರನ್ನ' ಚಿತ್ರತಂಡ ಕೂಡ ಬಳ್ಳಾರಿಯಲ್ಲಿ ಭರ್ಜರಿ ಶೂಟಿಂಗ್ ಮಾಡ್ತಿದೆ. ['ರಣವಿಕ್ರಮ' ಪುನೀತ್ ರಾಜ್ ಕುಮಾರ್ ಫಸ್ಟ್ ಲುಕ್]

ಫೈಟ್ ಸೀಕ್ವೆನ್ಸ್ ಗಳಿಗೆ, ಚೇಸಿಂಗ್ ನಂತಹಾ ಸೀನ್ ಗಳಿಗೆ ಕಲ್ಲು ಮಣ್ಣಿನ ಪ್ರದೇಶ ಸುಂದರವಾಗಿ ಕಾಣಿಸುತ್ತೆ. ಈಗಂತೂ ಗಣಿಗಾರಿಕೆ ನಿಂತೇ ಹೋಗಿರೋದ್ರಿಂದ ಸಿನಿಮಾ ಮಂದಿಗೆ ಇದು ಪ್ಲಸ್ ಪಾಯಿಂಟ್ ಆಗ್ತಿದೆ.

ನಂದ ಕಿಶೋರ್ ಆಕ್ಷನ್ ಕಟ್ ಹೇಳುತ್ತಿರುವ ರನ್ನ ಚಿತ್ರದ ಮೋಷನ್ ಟೀಸರ್ ಈಗಾಗಲೆ ಬಿಡುಗಡೆಯಾಗಿದ್ದು ಚಿತ್ರರಸಿಕರ ಗಮನಸೆಳೆದಿದೆ. ರನ್ನ ಚಿತ್ರ ತೆಲುಗಿನ ಯಶಸ್ವಿ ಅತ್ತಾರಿಂಟಿಕಿ ದಾರೇದಿ ಚಿತ್ರದ ರೀಮೇಕ್.

English summary
After mining work stopped Bellary becomes hot favorite for Kannada films shootings. Power Star,Rana Vikrama shot in Bellary. Recently Sudeep starrer 'Ranna' also shot at Bellary.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada