twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಪೊಲೀಸರ ಕ್ರಿಯಾಶೀಲತೆ: ಕನ್ನಡ ಸಿನಿಮಾಗಳಿಂದ ಕೊರೊನಾ ಜಾಗೃತಿ

    |

    ತನ್ನ ಕ್ರಿಯಾಶೀಲತೆ, ಹಾಸ್ಯ, ವ್ಯಂಗ್ಯಕ್ಕೆ ಹೆಸರಾದ ಬೆಂಗಳೂರು ಸಿಟಿ ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗ ಕೊರೊನಾ ಸಮಯದಲ್ಲಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

    Recommended Video

    ಮಾನವೀಯತೆ ಮುಖಾಂತರ ನಾವೆಲ್ಲರೂ ಹೇಗೆ ಒಂದಾಗಿರಬಹುದು | Chetan Kumar | Filmibeat exclusive

    ಬೆಂಗಳೂರು ಪೊಲೀಸರು ಕನ್ನಡ ಸಿನಿಮಾಗಳನ್ನು ಬಳಸಿಕೊಂಡು ಭಿನ್ನವಾಗಿ ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದ್ದಾರೆ.

    ನಟಿ ಪೂಜಾ ಬೇಡಿಯನ್ನು ಗೋವಾ ಕ್ವಾರೆಂಟೈನ್‌ನಲ್ಲಿ ಇರಿಸಿರುವ ಜಾಗ ಹೇಗಿದೆ ಗೊತ್ತೇ?ನಟಿ ಪೂಜಾ ಬೇಡಿಯನ್ನು ಗೋವಾ ಕ್ವಾರೆಂಟೈನ್‌ನಲ್ಲಿ ಇರಿಸಿರುವ ಜಾಗ ಹೇಗಿದೆ ಗೊತ್ತೇ?

    ಹೊಸ-ಹಳೆಯ ಕನ್ನಡ ಸಿನಿಮಾಗಳ ಹೆಸರು, ಸಿನಿಮಾಗಳ ಜನಪ್ರಿಯ ಸಂಭಾಷೆಗಳನ್ನು ಪ್ರಸ್ತುತ ಸನ್ನಿವೇಶಕ್ಕೆ ಬಗ್ಗಿಸಿ-ಒಗ್ಗಿಸಿ ಕೊರೊನಾ ಜಾಗೃತಿ ಮೂಡಿಸುತ್ತಿದೆ ಬೆಂಗಳೂರು ಸಿಟಿ ಪೊಲೀಸ್ ಸಾಮಾಜಿಕ ಜಾಲತಾಣ ವಿಭಾಗ.

    ಪೊಗರು ಸಿನಿಮಾ ಡೈಲಾಗ್ ಹೀಗೆ ಬದಲಾಗಿದೆ

    ಪೊಗರು ಸಿನಿಮಾ ಡೈಲಾಗ್ ಹೀಗೆ ಬದಲಾಗಿದೆ

    ಧೃವ ಸರ್ಜಾ ಅಭಿನಯದ ಪೊಗರು ಸಿನಿಮಾದ ಟ್ರೇಲರ್ ನಲ್ಲಿದ್ದ ಮಾಸ್ ಡೈಲಾಗ್ ಅನ್ನು ಬದಲಿಸಿ, 'ಲಾಕ್ಡೌನ್ ರಿಲ್ಯಾಕ್ಸ್ ಆಗಿದೆ ಅಂತ ಸುಮ್ನೆ ಹೊರಗೆ ಹೋಗ್ಬೇಡ, ಹೋದ್ರು ಮಾಸ್ಕ್ ಇಲ್ದೆ ಹೋಗ್ಬೇಡ, ಶೇಕ್ ಆಗಿ ಹೋಗ್ತೀಯಾ' ಎಂದಾಗಿಸಿದ್ದಾರೆ ಬೆಂಗಳೂರು ಪೊಲೀಸರು. ಧೃವ ಸರ್ಜಾ ಮುಖಕ್ಕೆ ಮಾಸ್ಕ್ ಬೇರೆ ಹಾಕಿದ್ದಾರೆ.

    ಶಿವರಾಜ್ ಕುಮಾರ್ ಏನೋ ಹೇಳುತ್ತಿದ್ದಾರೆ ಕೇಳಿ

    ಶಿವರಾಜ್ ಕುಮಾರ್ ಏನೋ ಹೇಳುತ್ತಿದ್ದಾರೆ ಕೇಳಿ

    ಶಿವರಾಜ್ ಕುಮಾರ್ ಅವರ ಇತ್ತೀಚಿನ ಚಿತ್ರ ಕವಚ. ಇದಕ್ಕೆ ಬೆಂಗಳೂರು ಪೊಲೀಸರು ಸೇರಿಸಿರುವ ಟ್ಯಾಗ್ ಲೈನ್, 'ಹೊರಗೆ ಹೋಗುತ್ತಿದ್ದೀರಾ, ಹಾಗಾದರೆ ಮರೆಯಬೇಡಿ ನಿಮ್ಮ ಸುರಕ್ಷತಾ 'ಕವಚ'' ಎಂದು ಬದಲಾಯಿಸಿದ್ದಾರೆ. ಈ ಕವಚ ಲೋಹದಿಂದ ಮಾಡಲ್ಪಟ್ಟಿಲ್ಲ, ಆದರೆ ಇದರಿಂದ ನಿಮ್ಮ ಜೀವವನ್ನು ಉಳಿಸಬಹುದು'

    ಮನೆಗೆಲಸದವರಿಗೆ ಕೊರೊನಾ ಸೋಂಕು: ಕ್ವಾರಂಟೈನ್ ನಲ್ಲಿ ನಟಿ ಜಾಹ್ನವಿ ಕಪೂರ್ ಕುಟುಂಬಮನೆಗೆಲಸದವರಿಗೆ ಕೊರೊನಾ ಸೋಂಕು: ಕ್ವಾರಂಟೈನ್ ನಲ್ಲಿ ನಟಿ ಜಾಹ್ನವಿ ಕಪೂರ್ ಕುಟುಂಬ

    'ಒಂದು ಮಾಸ್ಕಿನ ಕತೆ'

    'ಒಂದು ಮಾಸ್ಕಿನ ಕತೆ'

    ಒಂದು ಮೊಟ್ಟೆಯ ಕತೆ ಸಿನಿಮಾ ಗೊತ್ತೇ ಇದೆ. ಆದರೆ ಬೆಂಗಳೂರು ಪೊಲೀಸರು ಹೇಳುತ್ತಿರುವ 'ಒಂದು ಮಾಸ್ಕಿನ ಕತೆ' ಗೊತ್ತಾ? ಮಾರಕ ಕೊರೊನಾ ವಿರುದ್ಧ ಹೋರಾಡಿ ಜನರನ್ನು ಸುರಕ್ಷಿತವಾಗಿಡುವ ಮಾಸ್ಕಿನ ಕತೆ ಹೇಳುತ್ತಿದ್ದಾರೆ.

    'ಬುದ್ದಿವಂತ' ಉಪೇಂದ್ರ ಏನೋ ಹೇಳುತ್ತಿದ್ದಾರೆ

    'ಬುದ್ದಿವಂತ' ಉಪೇಂದ್ರ ಏನೋ ಹೇಳುತ್ತಿದ್ದಾರೆ

    'ಒಬ್ಬ ಬುದ್ದಿವಂತ ಪರಿಶೀಲಿಸದ ಮಾಹಿತಿಯನ್ನು ಫಾರ್ವರ್ಡ್ ಮಾಡುವುದಿಲ್ಲ' ಎಂದಿರುವ ಪೊಲೀಸರು 'ಸಾಂಕ್ರಾಮಿಕ ರೋಗ ಹರಡಿದ ಸಂದರ್ಭದಲ್ಲಿ, ನಕಲಿ ಸುದ್ದಿಗಳೂ ಸಹ ಇದರಷ್ಟೇ ಮಾರಕವಾಗಬಹುದು. ಜಾಣ್ಮೆ ತೋರಿಸಿ. #ಕೊರೋನಾವನ್ನು ಬಂಧಿಸಿ!' ಎಂದು ಸಲಹೆ ನೀಡಿದ್ದಾರೆ.

    ಪೈಲ್ವಾನ್ ಸಹ ಮಾಸ್ಕ್ ಹಾಕಿದ್ದಾರೆ

    ಪೈಲ್ವಾನ್ ಸಹ ಮಾಸ್ಕ್ ಹಾಕಿದ್ದಾರೆ

    ಪೈಲ್ವಾನ್ ಸುದೀಪ್ ಕೈಗೆ ಬಾಕ್ಸಿಂಗ್ ಗ್ಲೌಸ್ ಹಾಕುವ ಜೊತೆಗೆ ಮುಖಕ್ಕೆ ಮಾಸ್ಕ್ ಧರಿಸಿದ್ದಾರೆ. ಇದು ಬೆಂಗಳೂರು ಪೊಲೀಸರ ಕ್ರಿಯಾಶೀಲತೆ. ಪೈಲ್ವಾನ್ ಪೋಸ್ಟರ್ ಜೊತೆಗೆ 'ಕೊರೋನಾವೈರಸನ್ನು ವಿಫಲಗೊಳಿಸಲು, ನಮಗೆ ಜಾಣ್ಮೆ ಹಾಗೂ ಶಕ್ತಿಯ ಅವಶ್ಯಕತೆಯಿದೆ' ಎಂದು ಬುದ್ಧಿವಾದ ಹೇಳುತ್ತಿದ್ದಾರೆ ಬೆಂಗಳೂರು ಪೊಲೀಸರು.

    English summary
    Bengaluru city police using Kannada movie posters and dialogues to create coronavirus awareness
    Wednesday, May 20, 2020, 21:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X