»   » ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಿದ ಅಪೂರ್ವ ಜೋಡಿಗಳು

ಕನ್ನಡ ಬೆಳ್ಳಿತೆರೆಯಲ್ಲಿ ಮಿಂಚಿದ ಅಪೂರ್ವ ಜೋಡಿಗಳು

Posted By:
Subscribe to Filmibeat Kannada

ಕನ್ನಡ ಬೆಳ್ಳಿತೆರೆ ಮೇಲೆ ಸಾರ್ವಕಾಲಿಕವಾಗಿ ಮಿಂಚಿದ ಜೋಡಿಗಳು ಒಂದೇ ಎರಡೇ. ಕೆಲವು ನಾಯಕರುಗಳು ಚಿತ್ರಕ್ಕೆ ನಾಯಕಿ ಯಾರಾಗಬೇಕೆಂದು ತಾವೇ ನಿರ್ಧರಿಸುತ್ತಿದ್ದರು. ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ. ಆನ್ ಸ್ಕ್ರೀನ್ ಕೆಮೆಸ್ಟ್ರಿ ಚೆನ್ನಾಗಿರುತ್ತೆ ಎನ್ನುವುದು ಇವರ ವಾದ.

ಡಾ. ರಾಜಕುಮಾರ್ ಕಾಲದಿಂದ ಹಿಡಿದು ಇಂದಿನವರೆಗೂ ಬೆಳ್ಳಿತೆರೆ ಮೇಲೆ ಕೆಲವೊಂದು ಜೋಡಿಗಳಿಗೆ ಪ್ರೇಕ್ಷಕ ಕೂಡಾ ಮರುಳಾಗಿದ್ದ ಮತ್ತು ಜೊತೆಯಾಗಿ ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸದ್ದನ್ನೂ ಮಾಡಿದ್ದವು.

ಡಾ. ರಾಜ್ ಕಾಲದಿಂದ ಹಿಡಿದು ಇಂದಿನ ಯಶ್, ದಿಗಂತ್ ಯುಗದವರೆಗೆ ಕನ್ನಡ ಚಿತ್ರರಸಿಕರು ಕಂಡ ಅಪೂರ್ವ ತಾರಾ ಜೋಡಿಗಳ ಯಾರ್ಯಾರು?

ಸ್ಲೈಡ್ ಕ್ಲಿಕ್ಕಿಸಿ ಈ ಜೋಡಿಗಳಲ್ಲಿ ನಿಮ್ಮ ಆಯ್ಕೆಯಾವುದೆಂದು ತಿಳಿಸಿ..

ತಾರಾ ಜೋಡಿ 1

ಯಶ್ - ರಾಧಿಕಾ ಪಂಡಿತ್
ಈ ಇಬ್ಬರೂ ಪ್ರತಿಭಾನ್ವಿತ ತಾರೆಯರನ್ನು ಶಶಾಂಕ್ ಮೊಗ್ಗಿನ ಮನಸು ಚಿತ್ರದ ಮೂಲಕ ಪರಿಚಯಿಸಿದರು. ಇತ್ತೀಚೆಗೆ ಈ ಜೋಡಿ ನಟಿಸಿದ ಡ್ರಾಮಾ ಚಿತ್ರ ಯಶಸ್ವಿ ಪಟ್ಟಿಗೆ ಸೇರಿದ ಚಿತ್ರ. ಈ ಇಬ್ಬರ ಬಗ್ಗೆ ಅದೇನೋ ಗಾಂಧಿನಗರದಲ್ಲಿ 'ಗುಸುಗುಸು' ಮಾತಿ ಚಾಲ್ತಿಯಲ್ಲಿದೆ.

ತಾರಾ ಜೋಡಿ 2

ದಿಗಂತ್ - ಐಂದ್ರಿತಾ ರೇ

ಮನಸಾರೆ ಮತ್ತು ಪಾರಿಜಾತ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿಯ ಮಧ್ಯೆ ಕುಚ್ ಕುಚ್ ಹೇ ಎನ್ನುವ ಮಾತಿದೆ. ನಾನು ಐಂದ್ರಿತಾ ಜೊತೆ ಡೇಟಿಂಗ್ ನಡೆಸುತ್ತಿದ್ದೇನೆ ಮತ್ತು 2015 ರಲ್ಲಿ ನಾವಿಬ್ಬರೂ ಮದುವೆಯಾಗಲಿದ್ದೇವೆ ಎಂದು ದಿಗಂತ್ ಈ ಹಿಂದೆ ಹೇಳಿಕೆ ನೀಡಿದ್ದರು.

ತಾರಾ ಜೋಡಿ 3

ಗಣೇಶ್ - ಅಮೂಲ್ಯ

ಈ ಜೋಡಿಯ ಚೆಲುವಿನ ಚಿತ್ತಾರ ಚಿತ್ರ ಹಿಗ್ಗಾಮುಗ್ಗಾ ಹಿಟ್ ಆದ ನಂತರ ಶ್ರಾವಣಿ ಸುಬ್ರಮಣ್ಯ ಎನ್ನುವ ಚಿತ್ರದಲ್ಲಿ ಇಬ್ಬರೂ ಮತ್ತೆ ಜೊತೆಯಾಗಿ ನಟಿಸುತ್ತಿದ್ದಾರೆ.

ತಾರಾ ಜೋಡಿ 4

ಪುನೀತ್ ರಾಜಕುಮಾರ್ - ಪಾರ್ವತಿ ಮೆನನ್


ಮಿಲನ ಚಿತ್ರದಲ್ಲಿ ಜೊತೆಯಾಗಿ ನಟಿಸಿದ ಈ ಜೋಡಿ ಪೃಥ್ವಿ ಚಿತ್ರದಲ್ಲೂ ನಟಿಸಿದ್ದರು. ಎರಡೂ ಚಿತ್ರ ಸೂಪರ್ ಹಿಟ್ ಆಗಿದ್ದವು.

ತಾರಾ ಜೋಡಿ 5

ದರ್ಶನ್ - ರಕ್ಷಿತಾ

ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಹಾಟ್ ಜೋಡಿಯೆಂದೇ ಖ್ಯಾತಿಯಾಗಿತ್ತು. ಒಂ ಪ್ರಕಾಶ್ ನಿರ್ದೇಶನ ಮತ್ತು ದರ್ಶನ್ ಹೀರೋ ಆಗಿರುವ ಹೆಚ್ಚಿನ ಚಿತ್ರಕ್ಕೆ ರಕ್ಷಿತಾ ನಾಯಕಿಯಾಗಿದ್ದರು. ಈ ಜೋಡಿ ಹಲವು ವರ್ಷಗಳ ಕಾಲ ಸುಂಟರಗಾಳಿಯನ್ನೇ ಬೀಸಿತ್ತು.

ತಾರಾ ಜೋಡಿ 6

ಸುದೀಪ್ - ರಾಗಿಣಿ ದ್ವಿವೇದಿ

ವೀರಮದಕರಿ ಮತ್ತು ಕೆಂಪೇಗೌಡ ಚಿತ್ರದಲ್ಲಿ ಜೊತೆಯಾಗಿ ನಟಿಸಿದ್ದರು. ಎರಡೂ ಚಿತ್ರ ಕ್ಲಿಕ್ ಆಗಿದ್ದವು.

ತಾರಾ ಜೋಡಿ 7

ಶಂಕರನಾಗ್ - ಗಾಯತ್ರಿ

ಜೊತೆಯಾಗಿ ನಟಿಸಿದ ಆಟೋರಾಜ ಚಿತ್ರ ಇಬ್ಬರಿಗೂ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು. ನಲಿವಾ ಗುಲಾಬಿ ಹೂವೇ.. ಎನ್ನುವ ಹಾಡು ಇಂದಿಗೂ ಸೂಪರ್ ಹಿಟ್ ಹಾಡು.

ತಾರಾ ಜೋಡಿ 8

ಶ್ರೀನಾಥ್ - ಮಂಜುಳಾ

ಎಪ್ಪತ್ತರ ದಶಕದಲ್ಲಿ ಕನ್ನಡ ಚಿತ್ರರಂಗದ ಯಶಸ್ವಿ ಜೋಡಿ. ಮೂರುವರೆ ವಜ್ರಗಳು, ನಿನಗಾಗಿ ನಾನು, ಪುಟಾಣಿ ಏಜೆಂಟ್, ಪಾಯಿಂಟ್ ಪರಿಮಳ ಯಶಸ್ವಿ ಚಿತ್ರಗಳು.

ತಾರಾ ಜೋಡಿ 9

ಅನಂತನಾಗ್ - ಲಕ್ಷ್ಮಿ

ಎಪ್ಪತ್ತು, ಎಂಬತ್ತರ ದಶಕದ ಅತ್ಯಂತ ಯಶಸ್ವಿ ಜೋಡಿ ಅನಂತನಾಗ್ ಮತ್ತು ಲಕ್ಷ್ಮಿ. ನಾ ನಿನ್ನ ಬಿಡಲಾರೆ, ಬೆಂಕಿಯಬಲೆ, ಇಬ್ಬನಿ ಕರಗಿತು ಮುಂತಾದ ಚಿತ್ರಗಳು ಭಾರೀ ಜನಪ್ರಿಯತೆ ಗಳಿಸಿತ್ತು.

ತಾರಾ ಜೋಡಿ 10

ಡಾ. ಅಂಬರೀಶ್ - ಅಂಬಿಕಾ

ಸ್ನೇಹ ಸೇಡು, ನ್ಯಾಯ ನೀತಿ ಧರ್ಮ, ಭರ್ಜರಿ ಬೇಟೆ, ಚಕ್ರವ್ಯೂಹ, ಮಮತೆಯ ಮಡಿಲು, ಬೇಟೆ ಮುಂತಾದ ಯಶಸ್ವಿ ಚಿತ್ರಗಳನ್ನು ನೀಡಿದ ತಾರಾ ಜೋಡಿ.

ತಾರಾ ಜೋಡಿ 11

ಡಾ, ವಿಷ್ಣುವರ್ಧನ್ - ಸುಹಾಸಿನಿ

ಬಂಧನ ಚಿತ್ರದ ನಂತರ ಈ ಜೋಡಿ ಭಾರೀ ಜನಪ್ರಿಯತೆ ಗಳಿಸಿತ್ತು. ಇಬ್ಬರು ನಟಿಸಿದ್ದ ಇತರ ಚಿತ್ರಗಳೆಂದರೆ ಮುತ್ತಿನಹಾರ, ಮಾತಾಡ್ ಮಾತಾಡ್ ಮಲ್ಲಿಗೆ, ಸ್ಕೂಲ್ ಮಾಸ್ಟರ್.

ತಾರಾ ಜೋಡಿ 12

ಡಾ. ರಾಜಕುಮಾರ್ - ಭಾರತಿ

ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ಜೋಡಿ, ಬಂಗಾರದ ಮನುಷ್ಯ, ಬಂಗಾರದ ಪಂಜರ ಹೀಗೆ ಸಾಗುವ ಈ ಜೋಡಿಯ ಚಿತ್ರಗಳು ಅಭೂತಪೂರ್ವ ಯುಶಸ್ಸು ಸಾಧಿಸಿತ್ತು.

English summary
Best on screen couples of Kannada film industry. Who is your choice?
Please Wait while comments are loading...