»   » 'ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!

'ಬೆತ್ತನಗೆರೆ' ಎ ರಾ ಸ್ಟೋರಿ ಮೊದಲನೇ ಹಂತ ಫಿನಿಷ್!

Posted By:
Subscribe to Filmibeat Kannada

ನೈಜ ಘಟನೆ ಆಧಾರಿತ ಚಿತ್ರ 'ಬೆತ್ತನಗೆರೆ'. ಚಿತ್ರೀಕರಣ ಮುಗಿಸಿಕೊಂಡು ಮೈಸೂರಿನಿಂದ ಬೆಂಗಳೂರಿಗೆ ಆಗಮಿಸಿದೆ ಚಿತ್ರತಂಡ? ಮೈಸೂರಿನಲ್ಲಿ ಹತ್ತು ದಿನಗಳ ಮಾತಿನ ಭಾಗದ ಚಿತ್ರೀಕರಣ ಮುಗಿಸಿಕೊಂಡು ಬೆಂಗಳೂರಿನಲ್ಲಿ ಕೆಲವು ಘಟನೆಗಳನ್ನು ನೈಜ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಇರಾದೆ ಇದೆ.

ಈ ಚಿತ್ರದ ನಿರ್ದೇಶಕರು ಬೆತ್ತೆನೆಗೆರೆ ಸ್ಥಳದ ವ್ಯಕ್ತಿ ಮೋಹನ್ ಗೌಡ ಬಿ.ಜಿ. 'ಬೆತ್ತೆನೆಗೆರೆ' ಸಿನಮಾಗೆ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. 'ಬೆತ್ತನಗೆರೆ' ಚಿತ್ರದ ಅಡಿಬರಹ 'ಎ ರಾ ಸ್ಟೋರಿ!' ಕ್ರೈಂ ಲೋಕದಲ್ಲಿ ತಿಳಿದ ವ್ಯಕ್ತಿ ಬೆತ್ತೆನೆಗೆರೆ ಸೀನ. [ಬೆತ್ತನಗೆರೆ ಸೀನ ಪೊಲೀಸ್ ಎನ್ಕೌಂಟರ್ ಗೆ ಔಟ್]


ಸೀನನ ಸಹೋದರ ಮೋಹನ್ ಅವರೇ ಸಿನೆಮಾ ನಿರ್ದೇಶನದ ಜೊತೆಗೆ ಒಳಗಿನ ಕೆಲವು ಮನಮಿಡಿಯುಯ ಅಂಶಗಳನ್ನು ಹೇಳಲು ಹೊರಟಿದ್ದಾರೆ. ಈ ರೌಡಿಗಳ ಲೋಕಕ್ಕೆ ಯುವಜನರು ಬರಲೇಬಾರದು ಎಂಬ ಸಂದೇಶ ಚಿತ್ರದಲ್ಲಿದೆ.

ಖ್ಯಾತ ಕ್ರಿಕೆಟ್ ಪಟು ವಿನೋದ್ ಕಾಂಬ್ಳಿ ಅವರು ವಿಶೇಷ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸುತ್ತಿದ್ದಾರೆ. ಇಬ್ಬರು ಹೆಸರಾಂತ ನಿರ್ಮಾಪಕರುಗಳ ಮಕ್ಕಳು, ಆ ಇಬ್ಬರು ತಲಾ ಎರಡೆರಡು ಸಿನಿಮಗಳಲ್ಲಿ ಅಭಿನಯಿಸಿದ ನಾಯಕರು? ಅಕ್ಷಯ್ ಹಾಗೂ ಸುಮಂತ್ ಸಹೋದರರಾಗಿ ಅಭಿನಯಿಸುತ್ತಿದ್ದಾರೆ. ನಯನಾ ಈ ಚಿತ್ರದ ನಾಯಕಿ.

ಪಾತ್ರವರ್ಗದಲ್ಲಿ ಜೈ ಜಗದೀಶ್, ಬುಲ್ಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ, ಯತಿರಾಜ್ ಹಾಗೂ ಇತರರಿದ್ದಾರೆ. ಸವಿಕ ಎಂಟರ್ಪೈಸಸ್ ಅಡಿಯಲ್ಲಿ ಬಿ.ಎನ್ ಸ್ವಾಮಿ ಅವರು ನಿರ್ಮಿಸುತ್ತಿರುವ 'ಬೆತ್ತೆನೆಗೆರೆ' ಚಿತ್ರದ ಕಾರ್ಯಕಾರಿ ನಿರ್ಮಾಪಕರು ಮುಕುಂದ. ಜಗದೀಶ್ ವಾಲಿ ಅವರ ಛಾಯಾಗ್ರಹಣ, ರಾಜೇಶ್ ರಾಮನಾಥ್ ಅವರ ಸಂಗೀತ, ಲಿಂಗರಾಜು ಅವರ ಸಂಕಲನ, ಮಾಲೂರ್ ಶ್ರೀನಿವಾಸ್ ಅವರ ನೃತ್ಯ, ಡಿಫರೆಂಟ್ ಡ್ಯಾನಿ ಅವರ ಸಾಹಸ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

English summary
A crime thriller 'Bettanagere' finished its first schedule. The movie is written and directed by Mohan Gowda B.G. Akshay and Sumanth playing a lead roles. The story is about gangster Bettanagere who was gun downed by police in an encounter. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada