»   » 85ನೇ ವಯಸ್ಸಿನಲ್ಲಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ಭಗವಾನ್!

85ನೇ ವಯಸ್ಸಿನಲ್ಲಿ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟ ನಿರ್ದೇಶಕ ಭಗವಾನ್!

Posted By:
Subscribe to Filmibeat Kannada

ವಯಸ್ಸಾದ ಮೇಲೆ ಬಹುತೇಕರು ತಮ್ಮ ಮಕ್ಕಳು, ಮೊಮ್ಮಕ್ಕಳ ಜೊತೆ ಮನೆಗಷ್ಟೆ ಸೀಮಿತ ಆಗುತ್ತಾರೆ. ''ನನಗೆ ವಯಸ್ಸಾಯಿತು..ಇನ್ನೇನು ಮಾಡುವುದು'' ಎಂಬ ಭಾವನೆಯನ್ನು ತುಂಬಿಕೊಂಡಿರುತ್ತಾರೆ. ಆದರೆ ನಿರ್ದೇಶಕ ಭಗವಾನ್ ಮಾತ್ರ ಈ ವಯಸ್ಸಿನಲ್ಲಿಯೂ ಅದೇ ಉತ್ಸಾಹದಲ್ಲಿದ್ದಾರೆ.

ಕನ್ನಡದ ಹಿರಿಯ ನಿರ್ದೇಶಕರಾದ ಭಗವಾನ್ ಈಗ ಮತ್ತೆ ನಿರ್ದೇಶನ ಮಾಡುತ್ತಾರೆ. ತಮ್ಮ 85ನೇ ವಯಸ್ಸಿನಲ್ಲಿ ಮತ್ತೆ ಆಕ್ಷನ್ ಕಟ್ ಹೇಳುವುದಕ್ಕೆ ಇವರು ಸಜ್ಜಾಗಿದ್ದಾರೆ. ವಿಶೇಷ ಅಂದರೆ ಭಗವಾನ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರದಲ್ಲಿ ನಟಿಸುತ್ತಿರುವುದು ನಟ ಅನಂತ್ ನಾಗ್. ಮುಂದೆ ಓದಿ...

20 ವರ್ಷಗಳ ಬಳಿಕ

ನಿರ್ದೇಶಕ ಭಗವಾನ್ 20 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕೆ ಇಳಿದಿದ್ದು, ತಮ್ಮ 85ನೇ ವಯಸ್ಸಿನಲ್ಲಿ ಚಿತ್ರವನ್ನು ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ.

'ಆಡುವ ಗೊಂಬೆ' ಚಿತ್ರ

ಭಗವಾನ್ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ 'ಆಡುವ ಗೊಂಬೆ' ಎಂಬ ಟೈಟಲ್ ಫಿಕ್ಸ್ ಆಗಿದೆ.

ಮತ್ತೆ ಭಗವಾನ್ - ಅನಂತ್ ನಾಗ್ ಜೋಡಿ

ಈ ಹಿಂದೆ ಅನಂತ್ ನಾಗ್ ಅವರಿಗೆ 'ಬಯಲು ದಾರಿ' ಸೇರಿದಂತೆ 9 ಸಿನಿಮಾಗಳನ್ನು ಮಾಡಿದ್ದ ಭಗವಾನ್ ಈಗ ಮತ್ತೆ ಅನಂತ್ ನಾಗ್ ಅವರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.

ನವೆಂಬರ್ 1ಕ್ಕೆ ಲಾಂಚ್

ಕನ್ನಡ ರಾಜ್ಯೋತ್ಸವದ ವಿಶೇಷವಾಗಿ ನವೆಂಬರ್ 1 ರಂದು 'ಆಡುವ ಗೊಂಬೆ' ಚಿತ್ರದ ಮುಹೂರ್ತ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಕೌಟುಂಬಿಕ ಕಥೆ

ಚಿತ್ರ ಕೌಟುಂಬಿಕ ಕಥೆಯನ್ನು ಹೊಂದಿದ್ದು, ಅದು ಇಂದಿನ ಟ್ರೆಂಡ್ ಗೆ ಪೂರಕವಾಗುವಂತಿದೆಯಂತೆ. ಇನ್ನು ಚಿತ್ರದ ಕಥೆ ಮತ್ತು ಸಂಭಾಷಣೆಯನ್ನು ಭಗವಾನ್ ಅವರೇ ಬರೆದಿದ್ದಾರೆ.

ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ

40 ದಿನಗಳ ಚಿತ್ರೀಕರಣ

ಸಿನಿಮಾದ ಚಿತ್ರೀಕರಣ 40 ದಿನಗಳ ಕಾಲ ನಡೆಯಲಿದೆ. 20 ದಿನ ಚಿಕ್ಕಮಂಗಳೂರು ಹಾಗೂ ಇನ್ನುಳಿದ 20 ದಿನ ಬೆಂಗಳೂರಿನ ನಲ್ಲಿ ಶೂಟಿಂಗ್ ಆಗಲಿದೆ.

ಖ್ಯಾತ ನಿರ್ದೇಶಕ ದೊರೈ ಭಗವಾನ್ ಮುಡಿಗೆ ಹೊಸ ಗರಿ

ಹಿಂದಿನ ಚಿತ್ರ

ಭಗವಾನ್ ಕೊನೆಯವಾಗಿ 20 ವರ್ಷಗಳ ಹಿಂದೆ 'ಬಾಳೊಂದು ಚದುರಂಗ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆ ಬಳಿಕ ಈಗ ಮತ್ತೆ 'ಆಡುವ ಗೊಂಬೆ' ಮೂಲಕ ಅವರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

English summary
Kannada senior director Bhagavan next movie titled as 'Aaduva Gombe', which features Ananth Nag and Sudha Belawadi in the lead role. ಹಿರಿಯ ನಿರ್ದೇಶಕ ಭಗವಾನ್ 'ಆಡುವ ಗೊಂಬೆ' ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X