For Quick Alerts
  ALLOW NOTIFICATIONS  
  For Daily Alerts

  ಸ್ವಾತಂತ್ರ್ಯ ದಿನಾಚರಣೆಗೆ ಶ್ರೀಮುರಳಿ ಕೊಟ್ರು ಭರ್ಜರಿ ಗಿಫ್ಟ್

  By Bharath Kumar
  |

  ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ಹೊಸ ಸಿನಿಮಾ 'ಭರಾಟೆ'. ಈಗಾಗಲೇ ಮೇಕಿಂಗ್ ಮತ್ತು ಫಸ್ಟ್ ಲುಕ್ ಪೋಸ್ಟರ್ ಗಳಿಂದ ಸದ್ದು ಮಾಡುತ್ತಿರುವ ಈ ಚಿತ್ರದ ಮೋಷನ್ ಪೋಸ್ಟರ್ ಈಗ ಬಿಡುಗಡೆಯಾಗಿದೆ.

  ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ 'ಭರಾಟೆ' ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಹುಬ್ಬಳ್ಳಿಯಲ್ಲಿ ಸ್ಪೆಷಲ್ ಕಾರ್ಯಕ್ರಮ ಮಾಡಿ ಪೋಸ್ಟರ್ ಅನಾವರಣಗೊಳಿಸಲಾಗಿದೆ.

  ಸದ್ಯ, ಮೋಷನ್ ಪೋಸ್ಟರ್ ಲಿಂಕ್ ನ್ನ ನಟ ಶ್ರೀಮುರಳಿ ಶೇರ್ ಮಾಡಿದ್ದು, ಯೂಟ್ಯೂಬ್ ನಲ್ಲಿ ಮೆಚ್ಚುಗೆ ಗಳಿಸಿಕೊಂಡಿದೆ. ಭರಾಟೆ ಚಿತ್ರಕ್ಕಾಗಿ ಇಡೀ ಚಿತ್ರತಂಡ ರಾಜಸ್ತಾನಕ್ಕೆ ತೆರಳಿ ಅಲ್ಲಿ ಭರ್ಜರಿ ಫೋಟೋಶೂಟ್ ಮಾಡಿತ್ತು.

  ಹುಬ್ಬಳ್ಳಿ ಮಂದಿಗೆ ಶ್ರೀ ಮುರಳಿ ಕಡೆಯಿಂದ ಸಿಗಲಿದೆ ಒಂದು ಗಿಫ್ಟ್ಹುಬ್ಬಳ್ಳಿ ಮಂದಿಗೆ ಶ್ರೀ ಮುರಳಿ ಕಡೆಯಿಂದ ಸಿಗಲಿದೆ ಒಂದು ಗಿಫ್ಟ್

  ವಿಶೇಷ ಅಂದ್ರೆ, ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಸೋನು ಸೂದ್, ಟಾಲಿವುಡ್ ನ ಖ್ಯಾತ ನಟರಾದ ಜಗಪತಿ ಬಾಬು, ಸುಮನ್ ಸೇರಿದಂತೆ ಪ್ರಖ್ಯಾತ ವಿಲನ್ ಪಾತ್ರಧಾರಿಗಳೇ 'ಭರಾಟೆ' ಚಿತ್ರದ 9 ನೆಗೆಟಿವ್ ಕ್ಯಾರೆಕ್ಟರ್ ಗಳಿಗೆ ಬಣ್ಣ ಹಚ್ಚಲಿದ್ದಾರಂತೆ.

  ಅಂದ್ಹಾಗೆ, 'ಭರಾಟೆ' ಚಿತ್ರವನ್ನು ಚೇತನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. 'ಬಹದ್ದೂರ್', 'ಭರ್ಜರಿ' ಚಿತ್ರಗಳ ನಂತರ ಚೇತನ್ ಈ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಹ್ಯಾಟ್ರಿಕ್ ಬಾರಿಸುವ ಉತ್ಸಾಹದಲ್ಲಿದ್ದಾರೆ. ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

  English summary
  Roaring star sri murali starrer bharate movie motion poster released for independence day special.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X