ಅನಿರುದ್ಧ್ ಹೇಳಿಗೆ ಕ್ಷಮೆಯಾಚಿಸಿದ ನಟಿ ಭಾರತಿ ವಿಷ್ಣುವರ್ಧನ್
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಿಷ್ಣು ಅಳಿಯ ನಟ ಅನಿರುದ್ಧ್ ನೀಡಿದ್ದ ಹೇಳಿಗೆ ಭಾರತಿ ವಿಷ್ಣುವರ್ಧನ್ ಕ್ಷಮೆ ಕೇಳಿದ್ದಾರೆ.
'ಸಿಎಂ ಉಡಾಫೆ ಆಗಿ ಮಾತಾಡ್ತಾರೆ, ಮಾನ ಮರ್ಯಾದೆ ಇದ್ದರೇ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಿ ಎಂದು ಅನಿರುದ್ಧ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಎಚ್ ಡಿ ಕೆ ಅನಿರುದ್ಧ್ ವಿರುದ್ಧ್ ಬೇಸರ ವ್ಯಕ್ತಪಡಿಸಿದ್ದರು.

ಈ ಬೆಳವಣಿಗೆಯನ್ನ ಗಮನಿಸಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರು, ''ತುಂಬಾ ದುಃಖವಾಗಿದೆ, ತುಂಬಾ ನೋವಾಗಿದೆ, ಬಹಳ ನೋವಿನಿಂದ ಹೇಳಿದ್ದಾರೆ. ಯಾರಿಗೂ ಅಗೌರವವಾಗಿ ಮಾತನಾಡುವ ಉದ್ದೇಶ ನಮಗಿಲ್ಲ. ಅವರಿಂದ ತಪ್ಪಾಗಿದ್ರೆ ಕ್ಷಮೆ ಕೇಳುತ್ತೇವೆ'' ಎಂದು ಭಾರತಿ ಸ್ಪಷ್ಟಪಡಿಸಿದ್ದಾರೆ.
ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದ ಬಳಿಕ, ನಾವು ಅವರನ್ನ ಸಂಪರ್ಕ ಮಾಡಿದ್ದೇವು. ಎರಡು ದಿನ ಬಿಟ್ಟು ಚರ್ಚೆ ಮಾಡೋಣ ಅಂದ್ರು. ಆಮೇಲೆ ಕರೆಯಲಿಲ್ಲ. ಹಾಗಾಗಿ, ನೋವಾಗಿದೆ ಎಂದು ಭಾರತಿ ಹೇಳಿದ್ದಾರೆ.
English summary
Actress Bharathi vishnuvardhan asked sorry to chief minister hd kumaraswamy, regarding anirudh statement
bharathi vishnuvardhan dr vishnuvardhan hd kumaraswamy controversy ಭಾರತಿ ವಿಷ್ಣುವರ್ಧನ್ ಡಾ ವಿಷ್ಣುವರ್ಧನ್ ಎಚ್ ಡಿ ಕುಮಾರಸ್ವಾಮಿ ವಿವಾದ ಸ್ಯಾಂಡಲ್ ವುಡ್


Click it and Unblock the Notifications