»   » ವಿಷ್ಣು ಸ್ಮಾರಕದ ಕುರಿತು ಭಾರತಿ ವಿಷ್ಣುವರ್ಧನ್ ನೋವಿನ ನುಡಿ

ವಿಷ್ಣು ಸ್ಮಾರಕದ ಕುರಿತು ಭಾರತಿ ವಿಷ್ಣುವರ್ಧನ್ ನೋವಿನ ನುಡಿ

Posted By:
Subscribe to Filmibeat Kannada

ಸಾಹಸಸಿಂಹ ಡಾ.ವಿಷ್ಣುವರ್ಧನ್ ಕಣ್ಮರೆ ಆಗಿ ಆರುವರೆ ವರ್ಷಗಳು ಕಳೆದರೂ, ಅವರ ಸ್ಮಾರಕ ನಿರ್ಮಾಣಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಅಭಿಮಾನ್ ಸ್ಟುಡಿಯೋ ಮತ್ತು ಬಾಲಣ್ಣನ ಮಕ್ಕಳ ಆಸ್ತಿ ವಿವಾದಗಳಿಂದ ಬೇಸೆತ್ತಿರುವ ಭಾರತಿ ವಿಷ್ಣುವರ್ಧನ್ ಇದೀಗ ವಿಷ್ಣು ರವರ ಸ್ಮಾರಕ ಮೈಸೂರಿನಲ್ಲಿಯೇ ನಿರ್ಮಾಣವಾಗಲಿ ಎಂದು ನೋವಿನಿಂದ ನುಡಿದಿದ್ದಾರೆ.

ವಿಷ್ಣುವರ್ಧನ್ ರವರ ಅಳಿಯ ಅನಿರುದ್ಧ ನಟಿಸುತ್ತಿರುವ 'ರಾಜಾಸಿಂಹ' ಚಿತ್ರದ ಪತ್ರಿಕಾಗೋಷ್ಟಿ ನಿನ್ನೆ ಮೈಸೂರಿನ ದುದ್ದಗೆರೆಯಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಭಾರತಿ ವಿಷ್ಣುವರ್ಧನ್, ''ಸ್ಮಾರಕ ನಿರ್ಮಾಣ ವಿಚಾರದಲ್ಲಿ ಪ್ರತಿಫಲ ಸಿಗುತ್ತಿಲ್ಲ. ನಟ ಬಾಲಕೃಷ್ಣ ರವರ ಪುತ್ರ ಹಗುರವಾಗಿ ಮಾತನಾಡಿರುವುದು ಮನಸ್ಸಿಗೆ ತುಂಬ ನೋವಾಗಿದೆ. ಹೀಗಾಗಿ ಅಲ್ಲಿ ಬೇಡವೇ ಬೇಡ'' [ವಿಷ್ಣು ಸ್ಮಾರಕ ಸ್ಥಳಾಂತರ ಗುಲ್ಲು; ಅಭಿಮಾನಿಗಳ ಬೃಹತ್ ಪ್ರತಿಭಟನೆ]

Bharathi Vishnuvardhan wants Vishnu Memorial to be built in Mysuru

''ಸ್ಮಾರಕಕ್ಕೆ ಮೀಸಲಿಟ್ಟ ಜಾಗವನ್ನು ಸರ್ಕಾರ ತಮ್ಮ ವಶಕ್ಕೆ ತೆಗೆದುಕೊಂಡು ಅಭಿಮಾನ್ ಸ್ಟುಡಿಯೋದಲ್ಲಿ ಬೇಲಿ ಹಾಕಿತ್ತು. ಆದ್ರೆ ಈಗ ಅದನ್ನೂ ತೆಗೆದಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಅಲ್ಲಿ ಸ್ಮಾರಕ ನಿರ್ಮಾಣ ಬೇಡ'' [ವಿಷ್ಣುವರ್ಧನ್ ಸ್ಮಾರಕದ ಕಥೆ ಹೇಳುವೆ, ನಿನ್ನ ಕಥೆ ಹೇಳುವೆ!]

''ಮೈಸೂರಿನಲ್ಲಿ ಇದ್ದ ವಿಷ್ಣುವರ್ಧನ್ ರವರ ತಂದೆ ಎಚ್.ಎನ್.ನಾರಾಯಣರಾವ್ ರವರಿಗೆ ಅಂದಿನ ರಾಜ ಜಯಚಾಮರಾಜ ಒಡೆಯರ್ ರವರು ನಿಮಗೆ ಗಂಡು ಮಗುವಾಗಲಿದ್ದು, ಆ ಮಗುವಿಗೆ ಸಂಪತ್ ಕುಮಾರ್ ಎಂದು ಹೆಸರಿಡಿ ಅಂತ ಹೇಳಿದ್ದರಂತೆ. ಅವರು ಹೇಳಿದಂತೆ ಗಂಡು ಮಗುವಿಗೆ ಅದೇ ಹೆಸರಿಟ್ಟರು. ವಿಷ್ಣು ಹುಟ್ಟಿದ್ದು ಮೈಸೂರಿನಲ್ಲಿ, ಕೊನೆಯುಸಿರೆಳೆದದ್ದು ಮೈಸೂರಿನಲ್ಲೇ. ಮೈಸೂರು ಅಂದ್ರೆ ವಿಷ್ಣುಗೆ ಇಷ್ಟ. ಹೀಗಾಗಿ ಅಲ್ಲೇ ಸ್ಮಾರಕ ನಿರ್ಮಾಣ ಆಗಲಿ''

Bharathi Vishnuvardhan wants Vishnu Memorial to be built in Mysuru

''ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಲಾಗಿದೆ'' ಅಂತ ಹೇಳಿದರು.

ವಿಷ್ಣುವರ್ಧನ್ ರವರ ಸ್ಮಾರಕ ನಿರ್ಮಾಣ ಬೆಂಗಳೂರಿನಲ್ಲೇ ಆಗಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಈಗ ಭಾರತಿ ರವರ ಮಾತನ್ನ ಕೇಳಿದ್ಮೇಲೆ ಏನ್ ಹೇಳ್ತಾರೋ..?

English summary
Kannada Actress and Wife of Late Dr.Vishnuvardhan, Bharathi Vishnuvardhan has openly told the Press and Media that Vishnuvardhan's Memorial to be built in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada