ಭುವನ್ ಮೇಲೆ ಪ್ರಥಮ್ ಹಲ್ಲೆ: ದೂರು ದಾಖಲು
ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ 4'ನ ಸ್ಫರ್ಧಿಗಳಾದ ಪ್ರಥಮ್ ಮತ್ತು ಭುವನ್ ಅವರ ನಡುವೆ ಖಾಸಗಿ ವಾಹಿನಿಯೊಂದರ ಧಾರಾವಾಹಿ ಚಿತ್ರೀಕರಣ ವೇಳೆ ಗಲಾಟೆ ನಡೆದಿದೆ. ಈ ವೇಳೆ ಪ್ರಥಮ್ ರವರು ನನ್ನ ಕಾಲು ಕಚ್ಚಿದ್ದಾರೆ ಎಂದು ಆರೋಪಿಸಿ ಭುವನ್ ರವರು ತಲಘಟ್ಟಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

'ಬಿಗ್ ಬಾಸ್ ಕನ್ನಡ 4' ಖ್ಯಾತಿಯ ಭುವನ್, ಪ್ರಥಮ್ ಮತ್ತು ಸಂಜನಾ ಮೂವರು ಖಾಸಗಿ ವಾಹಿನಿಯೊಂದರ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಹಲವು ದಿನಗಳಿಂದ ಕಿರುತೆರೆಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ನಿನ್ನೆ ಇದೇ ಧಾರಾವಾಹಿ ಚಿತ್ರೀಕರಣ ವೇಳೆ ಪ್ರಥಮ್ ಮತ್ತು ಸಂಜನಾ ನಡುವೆ ಒಂದು ದೃಶ್ಯದ ಶೂಟ್ ನಡೆಯಬೇಕಿತ್ತು. ಆದರೆ ಈ ದೃಶ್ಯದಲ್ಲಿ ಪ್ರಥಮ್ ಜೊತೆ ನಟಿಸಲು ಸಂಜನಾ ಒಪ್ಪಿರಲಿಲ್ಲವಂತೆ. ಅದಕ್ಕೆ ಪ್ರಥಮ್ ರವರು ಭುವನ್ ಜೊತೆ ಮಾತ್ರ ನಟಿಸುತ್ತೀಯ ನನ್ನ ಜೊತೆ ಏಕೆ ನಟಿಸುವುದಿಲ್ಲ ಎಂದು ಕೇಳುತ್ತಿರುವಾಗ ಭುವನ್ ಮಧ್ಯ ಪ್ರವೇಶಿಸಿದರಂತೆ. ಈ ವೇಳೆ ಪ್ರಥಮ್ ಮತ್ತು ಭುವನ್ ನಡುವಿನ ಮಾತಿನ ಚಕಮಕಿ ಜಗಳಕ್ಕೆ ತಿರುಗಿ ಇಬ್ಬರು ಪರಸ್ಪರ ನೂಕಾಟ ನಡೆಸಿದರಂತೆ. ಈ ಹಿನ್ನೆಲೆಯಲ್ಲಿ ಈಗ ಭುವನ್ ರವರು ಪ್ರಥಮ್ ಕಾಲು ಕಚ್ಚಿದ್ದಾರೆ ಎಂದು ಆರೋಪಿಸಿ ತಲಘಟ್ಟಪುರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಥಮ್ ರಿಂದ ಕಾಲು ಕಚ್ಚಿಸಿಕೊಂಡ ಭುವನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರಂತೆ.


Click it and Unblock the Notifications











