»   » ಬಿಗ್ ಬಾಸ್ ದಿವಾಕರ್ ಮನೆಗೆ ಬಂತು ಹೊಸ ಕಾರ್

ಬಿಗ್ ಬಾಸ್ ದಿವಾಕರ್ ಮನೆಗೆ ಬಂತು ಹೊಸ ಕಾರ್

Posted By:
Subscribe to Filmibeat Kannada
ಬಿಗ್ ಬಾಸ್ ದಿವಾಕರ್ ಮನೆಗೆ ಬಂತು ಹೊಸ ಕಾರ್ | Filmibeat Kannada

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಕಾಮನ್ ಮ್ಯಾನ್ ಆಗಿ ಪ್ರವೇಶ ಪಡೆದು ಫೈನಲ್ಸ್ ವರೆಗೂ ತಲುಪಿ ರನ್ನರ್ ಅಪ್ ಆಗಿದ್ದ ದಿವಾಕರ್ ಜೀವನ ಈಗ ಸಂಪೂರ್ಣ ಬದಲಾಗಿದೆ. ಬೈಕ್ ಇಎಂಐ ಕಟ್ಟಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದ ದಿವಾಕರ್ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.

ಬಿಗ್ ಬಾಸ್ ದಿವಾಕರ್ ಹೊಸ ಕಾರ್ ಖರೀದಿ ಮಾಡಿದ್ದಾರೆ. ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ಕೊಂಡುಕೊಂಡಿರುವ ದಿವಾಕರ್ ಶೋ ರೋಮ್ ನಿಂದ ನೇರವಾಗಿ ಕಾರನ್ನ ಮನೆಗೂ ತೆಗೆದುಕೊಂಡು ಹೋಗದೆ ಜೆಪಿ ನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ.

ಮಾರ್ಚ್ 5, ದರ್ಶನ್ ಮತ್ತು ಸುದೀಪ್ ಪಾಲಿಗೆ ಕರಾಳ ದಿನ

ಹೇಗಿದೆ ದಿವಾಕರ್ ಕೊಂಡುಕೊಂಡಿರುವ ಕಾರ್? ಶೋ ರೋಮ್ ನಿಂದ ಜೆ ಪಿ ನಗರಕ್ಕೆ ತೆಗೆದುಕೊಂಡು ಹೋಗಿದ್ಯಾಕೆ? ಬಿಗ್ ಬಾಸ್ ಮನೆಯಿಂದ ಬಂದ ನಂತರ ದಿವಾಕರ್ ಏನು ಮಾಡುತ್ತಿದ್ದಾರೆ? ಈ ಎಲ್ಲಾ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಾರ್ ಖರೀದಿ ಮಾಡಿದ ದಿವಾಕರ್

ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನ ಸ್ಪರ್ಧಿ ದಿವಾಕರ್ ಹೊಸ ಕಾರ್ ಖರೀದಿ ಮಾಡಿದ್ದಾರೆ. ಕೆಂಪು ಬಣ್ಣದ ಸ್ವಿಪ್ಟ್ ಕಾರ್ ಕೊಂಡುಕೊಂಡಿದ್ದು ಮೊದಲಿಗೆ ಕಾರನ್ನು ಕಿಚ್ಚ ಸುದೀಪ್ ಅವರಿಗೆ ತೋರಿಸಿದ್ದಾರೆ.

ಸಿಹಿ ತಿಂದು ಕಾರ್ ಓಡಿಸಿದ ಕಿಚ್ಚ

ಕಿಚ್ಚ ಸುದೀಪ್ ಅವರ ಮನೆ ಅಂಗಳಕ್ಕೆ ದಿವಾಕರ್ ತಮ್ಮ ಹೊಸ ಕಾರ್ ಅನ್ನು ತೆಗೆದುಕೊಂಡು ಹೋಗಿದ್ದರು. ಸಿಹಿ ತಿಂದು ಸುದೀಪ್ ಕಾರನ್ನ ಒಂದು ರೌಂಡ್ ಓಡಿಸಿದ್ದಾರೆ.

ಬಿಗ್ ಬಾಸ್ ನಿಂದ ಎಲ್ಲವೂ ಸಿಕ್ಕಿದೆ

ದಿವಾಕರ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರದ ಜೀವನ ತುಂಬಾ ಚೆನ್ನಾಗಿದೆ. ಸಿನಿಮಾಗಳ ಅವಕಾಶ ಹಾಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನವೂ ಸಿಕ್ಕಿದೆ.

ಹೊಸ ಚಿತ್ರದಲ್ಲಿ ಅಭಿನಯ

ದಿವಾಕರ್ ಕನ್ನಡದ ಹೊಸ ಚಿತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ವಿಶೇಷ ಅಂದರೆ ಚಿತ್ರದಲ್ಲಿ ಜಯ ಶ್ರೀನಿವಾಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಧಾರಾವಾಹಿಗಳಲ್ಲಿ ಅಭಿನಯಿಸಲು ಅವಕಾಶ ಹುಡುಕಿಕೊಂಡು ಬರುತ್ತಿದ್ದು ಒಳ್ಳೆ ಪಾತ್ರಕ್ಕಾಗಿ ಕಾಯುತ್ತಿದ್ದಾರಂತೆ.

English summary
Bigg Boss Kannada 5 Runner Up Diwakar has bought a new car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada