For Quick Alerts
  ALLOW NOTIFICATIONS  
  For Daily Alerts

  ಬಿಗ್ ಬಾಸ್ ದಿವಾಕರ್ ಮತ್ತೊಂದು ಹೊಸ ಸಿನಿಮಾ 'ಗುಲಾಲ್'

  |

  ಬಿಗ್ ಬಾಸ್ ಕನ್ನಡ ಸೀಸನ್ 5ರ ರನ್ನರ್ ಅಪ್ ದಿವಾಕರ್ ಈಗ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಿದ್ದಾರೆ. ಈಗಾಗಲೇ ದಿವಾಕರ್ ಅಭಿನಯದ ರೇಸ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮೊದಲ ಸಿನಿಮಾ ರಿಲೀಸ್ ಗೂ ಮೊದಲೇ ಈಗ ಇನ್ನೊಂದು ಚಿತ್ರ ಆರಂಭಿಸಿದ್ದಾರೆ.

  ಹೌದು, ಗುಲಾಲ್ ಎಂಬ ಹೊಸ ಸಿನಿಮಾದಲ್ಲಿ ದಿವಾಕರ್ ನಟಿಸುತ್ತಿದ್ದು, ಇತ್ತೀಚಿಗಷ್ಟೆ ಲಕ್ಷ್ಮಿಪುರದ ಸಾಯಿಬಾಬಾ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿದೆ.

  ಶಿವುಜಮಖಂಡಿ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಇದು ಇವರ ಮೂರನೇ ಸಿನಿಮಾ. ಇದಕ್ಕೂ ಮೊದಲು ನನ್ನ ನಿನ್ನ ಪ್ರೇಮಕಥೆ, ಕೃಷ್ಣ ತೀರ ಸಿನಿಮಾಗಳನ್ನ ಮಾಡಿದ್ದರು.

  ಧನಂಜಯ್ ಎಚ್, ಗೋಪಾಲಕೃಷ್ಣ ಹವಾಲ್ದಾರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ದಿವಾಕರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದಿವಾಕರ್ ಗೆ ಜೋಡಿಯಾಗಿ ನೇತ್ರಾ ಕಾಣಿಸಿಕೊಳ್ಳುತ್ತಿದ್ದಾರೆ.

  ಇನ್ನುಳಿದಂತೆ ತಬಲಾ ನಾಣಿ, ಮೋಹನ್ ಜುನೇಜ ಅವರು ಗುಲಾಲ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Bigg boss kannada 5th runner runner up contestants diwakar starts his new movie gulaal. the movie directed by shivu jamakandi.
  Friday, May 3, 2019, 19:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X