twitter
    For Quick Alerts
    ALLOW NOTIFICATIONS  
    For Daily Alerts

    'ಎಪಿಎಂಸಿ ಕಾಯ್ದೆ ಉತ್ತಮವೆಂದು ಸಾಬೀತುಪಡಿಸಿ': ಸರ್ಕಾರಕ್ಕೆ ಶಶಿಕುಮಾರ್ ಆಗ್ರಹ

    |

    ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ದೇಶಾದ್ಯಂತ ಬಹುದೊಡ್ಡ ಹೋರಾಟವೇ ನಡೆದಿತ್ತು ಈಗಲೂ ನಡೆಯುತ್ತಿದೆ. ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ, ಎಪಿಎಂಸಿ ಕಾಯ್ದೆಯಲ್ಲಿನ ಬದಲಾವಣೆಗಳು ರೈತ ವರ್ಗಕ್ಕೆ ಸಹಕಾರಿಯಾಗಲಿದೆ ಎಂದು ಸರ್ಕಾರ ಹೇಳಿದೆ. ಆದರೆ, ರೈತರು ಈ ಕಾಯ್ದೆಯಿಂದ ನಮಗೆ ಯಾವುದೇ ಲಾಭವಿಲ್ಲ, ಇದೆಲ್ಲವೂ ಕಾರ್ಪೋರೇಟ್‌ಗೆ ನೆರವಾಗುತ್ತೆ ಅಷ್ಟೇ ಎಂದು ವಿರೋಧಿಸಿದರು.

    ಈ ಹೋರಾಟದಲ್ಲಿ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದ ಮಾರ್ಡನ್ ರೈತ ಶಶಿಕುಮಾರ್ ಸಹ ಭಾಗವಹಿಸಿದ್ದರು. ಇದೀಗ, ಎಪಿಎಂಸಿ ಕಾಯ್ದೆ ಉತ್ತಮವೆಂದು ಹೇಳುತ್ತಿದ್ದ ಸರ್ಕಾರಕ್ಕೆ ಶಶಿಕುಮಾರ್ ಅದನ್ನು ಸಾಬಿತುಪಡಿಸಿ ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ನಿಮ್ಮ ವಾದವೇ ಸರಿ ಎನಿಸುವುದಾದರೆ ಈಗಿನ ಸಂಕಷ್ಟದ ಸಮಯಕ್ಕೆ ಈ ಕಾಯ್ದೆ ಬಹಳ ಉಪಯುಕ್ತವಾಗಲಿದೆ. ಇದನ್ನು ಉಪಯೋಗಿಸಿಕೊಳ್ಳಲು ಸಹಾಯ ಮಾಡಿ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ. ಮುಂದೆ ಓದಿ...

    ನೀವು ಹೇಳಿದ್ದು ಸರಿ ಇದ್ದರೆ ಸಾಬೀತುಪಡಿಸಿ

    ನೀವು ಹೇಳಿದ್ದು ಸರಿ ಇದ್ದರೆ ಸಾಬೀತುಪಡಿಸಿ

    ''ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ನೀವು ಬೆಳೆದ ಬೆಳೆಯನ್ನು ಎಲ್ಲಿಬೇಕಾದರೂ, ಯಾವಾಗ ಬೇಕಾದರೂ ಮಾರಾಟ ಮಾಡಬಹುದು. ಆನ್‌ಲೈನ್‌ನಲ್ಲೇ ಅದನ್ನು ನೇರವಾಗಿ ಮಾರಬಹುದು ಎಂದು ಹೇಳಿದ್ರಿ. ನೀವು ಹೇಳಿದ್ದು ನಿಜವೇ ಆಗಿದ್ದರೆ ದಯವಿಟ್ಟು ಅದು ಹೇಗೆ ಎಂದು ಹೇಳಿ. ಆನ್‌ಲೈನ್‌ನಲ್ಲಿ ಮಾರುವುದು ಹೇಗೆ? ಖರೀದಿ ಮಾಡುವವರು ಎಲ್ಲಿ ಸಿಗ್ತಾರೆ ಎಂದು ತಿಳಿಸಿಕೊಡಿ'' ಎಂದು ಶಶಿಕುಮಾರ್ ಒತ್ತಾಯಿಸಿದ್ದಾರೆ.

    28 ಮಕ್ಕಳನ್ನು ದತ್ತು ಪಡೆದ 'ಬಿಗ್ ಬಾಸ್ 6' ವಿನ್ನರ್ ಶಶಿ28 ಮಕ್ಕಳನ್ನು ದತ್ತು ಪಡೆದ 'ಬಿಗ್ ಬಾಸ್ 6' ವಿನ್ನರ್ ಶಶಿ

    ಹೇಗೆ ಹುಡುಕಿದರೂ ನಮಗೆ ಮಾಹಿತಿ ಸಿಕ್ತಿಲ್ಲ

    ಹೇಗೆ ಹುಡುಕಿದರೂ ನಮಗೆ ಮಾಹಿತಿ ಸಿಕ್ತಿಲ್ಲ

    ''ನಾನೊಬ್ಬ ಪದವೀಧರ. ಕೃಷಿ ವಿಭಾಗದಲ್ಲಿ ಪದವಿ ಮಾಡಿದ್ದೇನೆ. ಆನ್‌ಲೈನ್ ಮಾರಾಟದ ಬಗ್ಗೆ ಹೇಗೆ ಹುಡುಕಿದರೂ, ಎಲ್ಲೇ ಹುಡುಕಿದರೂ ನನಗೆ ಮಾಹಿತಿ ಸಿಕ್ತಿಲ್ಲ. ನನ್ನ ಸಹೋದರ ಎಂ.ಟೆಕ್ (ಸಾಫ್ಟ್‌ವೇರ್ ಇಂಜಿನಿಯರ್) ಅವರಿಗಾದರೂ ತಿಳಿಯಬೇಕು ಅಲ್ಲವೇ? ದಯವಿಟ್ಟು ಇದನ್ನು ತಿಳಿಸಿ ಕೊಡಿ. ಈ ಕಾಯಿದೆ ಅನುಕೂಲತೆ ಜನರಿಗೆ ತಿಳಿಸಲು ಇದು ಸಕಾಲ'' ಎಂದು ಒತ್ತಾಯಿಸಿದ್ದಾರೆ.

    ನನ್ನ ಬಂಡವಾಳದ ಮೇಲೆ 50 ಪೈಸೆ ಕೊಡಿ ಸಾಕು

    ನನ್ನ ಬಂಡವಾಳದ ಮೇಲೆ 50 ಪೈಸೆ ಕೊಡಿ ಸಾಕು

    ''ಒಂದು ಕೆಜಿ ಟೊಮೆಟೊ ಬೆಳೆಯಲು ನನಗೆ ಏಂಟು ರೂಪಾಯಿ ವೆಚ್ಚ ಆಗುತ್ತದೆ. ನೀವು ನನಗೆ ಏಂಟು ರೂಪಾಯಿ ಮೇಲೆ ಐವತ್ತು ಪೈಸೆ ಹೆಚ್ಚಿಗೆ ಕೊಟ್ಟರೆ ಸಾಕು, ನಾನು ಎಷ್ಟು ಟನ್ ಬೇಕಾದರೂ ಟೊಮೆಟೊ ಸರಬರಾಜು ಮಾಡ್ತೇನೆ, ಕೇವಲ ಟೊಮೆಟೊ ಮಾತ್ರವಲ್ಲ ಕ್ಯಾರೆಟ್, ಮಾವಿನ ಹಣ್ಣು ಸೀಸನ್ ಬರ್ತಿದೆ, ಮಾವಿನ ಹಣ್ಣು ಬೇಕು ಅಂದು ಸರಬರಾಜು ಮಾಡ್ತೇನೆ'' ಎಂದು ಶಶಿಕುಮಾರ್ ತಿಳಿಸಿದ್ದಾರೆ.

    ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!ನುಡಿದಂತೆ ನಡೆದ 'ಬಿಗ್ ಬಾಸ್' ವಿನ್ನರ್ ಶಶಿ ಕುಮಾರ್.!

    Recommended Video

    D Boss ವಿವಾಹ ವಾರ್ಷಿಕೋತ್ಸವದ ದಿನ ವೈರಲ್ ಆಯ್ತು ಮದುವೆ ಪತ್ರಿಕೆ | Filmibeat Kannada
    ಸರ್ಕಾರದ ಪ್ಯಾಕೇಜ್‌ ಬಗ್ಗೆ ಶಶಿಕುಮಾರ್ ಹೇಳಿದ್ದೇನು?

    ಸರ್ಕಾರದ ಪ್ಯಾಕೇಜ್‌ ಬಗ್ಗೆ ಶಶಿಕುಮಾರ್ ಹೇಳಿದ್ದೇನು?

    ''ಸರ್ಕಾರದ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್‌ನಲ್ಲಿ ಒಂದು ಹೆಕ್ಟರ್ ಬೆಳೆಗೆ 10 ಸಾವಿರ ರೂಪಾಯಿ ಅಂತ ಹೇಳಿದೆ. ಒಂದು ಹೆಕ್ಟರ್ ಅಂದ್ರೆ ಎರಡೂವರೆ ಎಕೆರೆ. ಒಂದು ಎಕೆರೆ ಟೊಮೆಟೊ ಬೆಳೆಯುವುದಕ್ಕೆ ನಾವು ಎರಡೂವರೆಯಿಂದ ಮೂರು ಲಕ್ಷ ಖರ್ಚು ಮಾಡಿದ್ದೇವೆ. ಒಂದು ಎಕೆರೆ ನಾಲ್ಕು ಸಾವಿರ ಕೊಡ್ತಿರುವುದು ಬಹಳ ಒಳ್ಳೆಯ ಕೆಲಸ'' ಎಂದು ಆಕ್ರೋಶ ಹೊರಹಾಕಿದ್ದಾರೆ.

    English summary
    Bigg Boss Kannada Winner Shashi Kumar express Displeasure against APMC Act 2020.
    Thursday, May 20, 2021, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X