»   » 'ದೇವ್ರಂಥ ಮನುಷ್ಯ' ಪ್ರಥಮ್ ಗೆ ಇಬ್ಬರು ನಾಯಕಿಯರು

'ದೇವ್ರಂಥ ಮನುಷ್ಯ' ಪ್ರಥಮ್ ಗೆ ಇಬ್ಬರು ನಾಯಕಿಯರು

Posted By:
Subscribe to Filmibeat Kannada

'ಬಿಗ್ ಬಾಸ್' ವಿನ್ನರ್ ಆದ ಒಳ್ಳೆ ಹುಡುಗ ಪ್ರಥಮ್ ಗೆ ಸಾಲು ಸಾಲು ಸಿನಿಮಾಗಳು ಆಫರ್ ಬಂದಿತ್ತು ಎಂಬುದನ್ನ ನೀವು ಓದೇ ಇರ್ತೀರಾ. ಈಗ ಆ ಸಿನಿಮಾಗಳ ಪೈಕಿ ಮೊದಲ ಚಿತ್ರವನ್ನ ಪ್ರಥಮ್ ಕೈಗೆತ್ತಿಕೊಂಡಿದ್ದಾರೆ.['ಬಿಗ್ ಬಾಸ್' ಪ್ರಥಮ್ ಬಗ್ಗೆ ಬಂತು ಬಿಗ್ ಬ್ರೇಕಿಂಗ್ ನ್ಯೂಸ್.!]

ಬರೀ ಟೈಟಲ್ ನಿಂದಲೇ ಸಖತ್ ಸೌಂಡ್ ಮಾಡ್ತಿರುವ ಈ ಚಿತ್ರದಲ್ಲಿ ನಾಯಕಿಯರು ಎಷ್ಟು ಜನ ಎಂದು ಗೊತ್ತಾದ್ರೆ ಶಾಕ್ ಆಗ್ತೀರಾ. ಇನ್ನು ವಿಶೇಷ ಅಂದ್ರೆ, 'ಬಿಗ್ ಬಾಸ್'ನ ಮತ್ತೊಬ್ಬ ಸ್ವರ್ಧಿ ಕೂಡ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ......

ಪ್ರಥಮ್ ಮೊದಲ ಚಿತ್ರ ಶುರು

'ಬಿಗ್ ಬಾಸ್' ವಿನ್ನರ್ ಒಳ್ಳೆ ಹುಡುಗ ಪ್ರಥಮ್ ಅಭಿನಯಿಸಲಿರುವ ಮೊದಲ ಚಿತ್ರ ಶುರುವಾಗಿದೆ. 'ದೇವ್ರಂಥ ಮನುಷ್ಯ' ಎಂಬ ಶೀರ್ಷಿಕೆಯನ್ನಿಟ್ಟಿರುವ ಚಿತ್ರತಂಡ, 'ಸಂಜೆ ಮೇಲೆ ಸಿಗ್ಬೇಡಿ' ಎಂಬ ಅಡಿಬರಹವನ್ನ ಇಟ್ಟು ಕುತೂಹಲ ಹೆಚ್ಚಿಸಿದೆ. ಟೈಟಲ್ ಗೆ ತಕ್ಕಂತೆ ಪಕ್ಕಾ ಎಂಟರ್ ಟೈನ್ ಮೆಂಟ್ ಸಿನಿಮಾ ಇದಾಗಲಿದೆಯಂತೆ.[ಪುನೀತ್ ಹುಟ್ಟುಹಬ್ಬಕ್ಕೆ 'ಬಿಗ್ ಬಾಸ್ ಪ್ರಥಮ್' ಕೊಟ್ಟ ದುಬಾರಿ ಗಿಫ್ಟ್?]

ದೇವೇಗೌಡರು ಅತಿಥಿ!

ಪ್ರಥಮ್ ಅಭಿನಯಲಿಸರುವ ಮೊದಲ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಅತಿಥಿಯಾಗಿ ಆಗಮಿಸಿದ್ದರು. ಮೊದಲಿನಿಂದಲೂ ದೇವೇಗೌಡರು ನನ್ನ ಆಫ್ತರು ಎಂದು ಪ್ರಥಮ್ ಹೇಳಿಕೊಳ್ಳುತ್ತಿದ್ದರು.['ಬಿಗ್ ಬಾಸ್' ಕ್ರೇಜ್ ಇನ್ನೂ ಕಮ್ಮಿ ಆಗಿಲ್ಲ ಅನ್ನೋಕೆ ಸಾಕ್ಷಿ ಇಲ್ಲಿದೆ]

ಇಬ್ಬರು ನಾಯಕಿಯರು

ಅಂದ್ಹಾಗೆ, ಪ್ರಥಮ್ ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರು, ಪೂರ್ಣಿಮಾ ಮತ್ತು ಬೆತ್ತನಗೆರೆ ಖ್ಯಾತಿಯ ನಯನ ಹೀರೋಯಿನ್ ಆಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ತಬಲಾ ನಾಣಿ, ಸಂಗೀತ, ಪವನ್ ಮುಂತಾದವರು ನಟಿಸುತ್ತಿದ್ದಾರೆ.[ಸ್ವಲ್ಪ ಯಾಮಾರಿದ್ರೆ...ಪ್ರಥಮ್-ಹುಚ್ಚ ವೆಂಕಟ್ ಮಧ್ಯೆ ಮಾರಾಮಾರಿ ಆಗ್ತಿತ್ತು.!]

ಕೀರ್ತಿ-ಪ್ರಥಮ್ ಜುಗಲ್ ಬಂದಿ

ವಿಶೇಷ ಅಂದ್ರೆ, ಪ್ರಥಮ್ ನಾಯಕನಾಗಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಕಿರಿಕ್ ಕೀರ್ತಿ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರದ ಹಾಡೊಂದಕ್ಕೆ ಹೆಜ್ಜೆ ಹಾಕಲಿರುವ ಕೀರ್ತಿ, ಪ್ರಥಮ್ ಜೊತೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಬಿಗ್ ಬಾಸ್ ವಿನ್ನರ್ ಹಾಗೂ ರನ್ನರ್ ಇಬ್ಬರನ್ನ ಒಂದೇ ಚಿತ್ರದಲ್ಲಿ ನೋಡಬಹುದು.['ಹುಚ್ಚ ವೆಂಕಟ್'ಗೆ ಆಕ್ಷನ್ ಕಟ್ ಹೇಳ್ತಾರಂತೆ 'ಒಳ್ಳೆ ಹುಡುಗ ಪ್ರಥಮ್'!]

ನಿರ್ದೇಶನ ಯಾರು?

ಇನ್ನು ಈ ಚಿತ್ರಕ್ಕೆ ಕಿರಣ್ ಶೆಟ್ಟಿ ಚಿತ್ರಕಥೆ ಬರೆದು ಆಕ್ಷನ್ ಕಟ್‌ ಹೇಳುತ್ತಿದ್ದಾರೆ, ಮಂಜುನಾಥ್, ಸುರೇಶ್ ಮತ್ತು ವೆಂಕಟ್ ಗೌಡ ಅವರು 'ದೇವ್ರಂಥ ಮನುಷ್ಯ' ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದಾರೆ, ಅರುಣ್ ಸುರೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ, ಇನ್ನು ಚಿತ್ರಕ್ಕೆ ರಾಜೇಶ್ ರಾಮನಾಥ್ ಅವರ ಸಂಗೀತವಿದೆ.

ಯಾವಾಗ ಚಿತ್ರೀಕರಣ

ಸದ್ಯ, ಟೈಟಲ್ ಲಾಂಚ್ ಮಾಡಿರುವ 'ದೇವ್ರಂಥ ಮನುಷ್ಯ' ಏಪ್ರಿಲ್ ಮೂರರಿಂದ ಚಿತ್ರೀಕರಣ ಶುರು ಮಾಡಲಿದೆ. ಜುಲೈ ತಿಂಗಳೊತ್ತಿಗೆ ಈ ಚಿತ್ರವನ್ನ ತೆರೆ ಮೇಲೆ ತರುವ ಯೋಚನೆಯಲ್ಲಿದೆ ಚಿತ್ರತಂಡ.

ಪ್ರಥಮ್ ಫುಲ್ ಬ್ಯುಸಿ!

ಈ ಚಿತ್ರವನ್ನ ಬಿಟ್ಟು ಇನ್ನು ಮೂರು ಚಿತ್ರಗಳಲ್ಲಿ ಒಳ್ಳೆ ಹುಡುಗ ಬ್ಯುಸಿಯಾಗಿದ್ದಾರೆ. ಅದ್ರ ಜೊತೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಎರಡು ವಿಶೇಷ ಕಾರ್ಯಕ್ರಮಗಳಲ್ಲಿ ಪ್ರಥಮ್ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ, ಬಿಗ್ ಬಾಸ್ ವಿನ್ನರ್ ಪ್ರಥಮ್ ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

English summary
Biggboss Pratham Starrer 1st Kananda Movie 'Devrantha Manushya' Title lunch, the movie directed by kiran Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada