Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸದ್ದಿಲ್ಲದೇ ಶುರುವಾಗಿದೆ 'ವಿಜಯ ಮಲ್ಯ' ಸಿನಿಮಾ, ಹೀರೋ ಯಾರು.?
Recommended Video

9,000 ಕೋಟಿ ಸಾಲ ತೀರಿಸದೆ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಭಾರತದ ಮೋಸ್ಟ್ ವಾಂಟೆಡ್ ಬಿಸ್ ನೆಸ್ ಮ್ಯಾನ್. ಆದ್ರೆ, ಒಂದು ಕಾಲದಲ್ಲಿ ಮಲ್ಯ ಅಂದ್ರೆ, ಶ್ರೀಮಂತಿಕೆಯ ಪ್ರತಿರೂಪ.
ಅರಮನೆಯಂತಹ ಬಂಗಲೆಗಳು, ಸುತ್ತು ಸುಂದರ ಹುಡುಗಿಯರು, ಮೈ ತುಂಬ ವಜ್ರದ ಆಭರಣಗಳು, ಐಷಾರಾಮಿ ಕಾರುಗಳು, ಹೀಗೆ ದೇಶದ ಅತಿ ದೊಡ್ಡ ಶ್ರೀಮಂತರಲ್ಲಿ ವಿಜಯ ಮಲ್ಯ ಕೂಡ ಒಬ್ಬರಾಗಿದ್ದರು.
ಆದ್ರೆ, ಮಾಡಿದ ಸಾಲ ತೀರಿಸಲಾಗದೆ ದೇಶಬಿಟ್ಟು ಹೋಗಿ ತಲೆಮರೆಸಿಕೊಂಡಿರುವ ಮಲ್ಯ ವಿರುದ್ಧ ಈಗ ದೇಶದಲ್ಲಿ ಅನೇಕ ಪ್ರಕರಣಗಳು ದಾಖಲಾಗಿದೆ. ಇಂತಹ ಮಲ್ಯ ಕುರಿತು ಅದ್ಯಾವಾಗ ಸಿನಿಮಾ ಬರುತ್ತೆ ಅಂತ ಚಿತ್ರಪ್ರೇಮಿಗಳು ಕಾಯ್ತಿದ್ರು. ಇದೀಗ, ಆ ಸಮಯ ಬಂದಿದೆ. ಬಾಲಿವುಡ್ ನಲ್ಲಿ ಮಲ್ಯ ಕುರಿತು ಸಿನಿಮಾ ತಯಾರಾಗ್ತಿದ್ದು, ಭರದಿಂದ ಶೂಟಿಂಗ್ ಸಾಗ್ತಿದೆ. ಮುಂದೆ ಓದಿ...

ಮದ್ಯದ ದೊರೆಯಾದ ಗೋವಿಂದ
ವಿಜಯ ಮಲ್ಯ ಕುರಿತು ತಯಾರಾಗುತ್ತಿರುವ ಸಿನಿಮಾದಲ್ಲಿ ಬಾಲಿವುಡ್ ಹಿರಿಯ ನಟ ಗೋವಿಂದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಥಾಥ್ ಮಲ್ಯ ಅವರ ಪಾತ್ರವನ್ನ ಗೋವಿಂದ ನಿಭಾಯಿಸುತ್ತಿದ್ದಾರೆ.

ಒಂದು ಸಾಂಗ್ ಕೂಡ ಮುಗಿದಿದೆ
ಈ ಚಿತ್ರಕ್ಕೆ 'ರಂಗೀಲಾ ರಾಜ್' ಎಂದು ಹೆಸರಿಟ್ಟಿದ್ದು, ಈಗಾಗಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಇತ್ತೀಚಿಗಷ್ಟೆ ಚಿತ್ರದ ಒಂದು ಹಾಡಿನ ಶೂಟಿಂಗ್ ಮಾಡಲಾಗಿದ್ದು, ಖ್ಯಾತ ನೃತ್ಯ ಸಂಯೋಜಕ ಚಿನ್ನಿ ಪ್ರಕಾಶ್ ಕೊರಿಯೋಗ್ರಫಿ ಮಾಡಿದ್ದಾರೆ.

ಮಲ್ಯ ಅವತಾರಗಳು ಇರಲಿದೆ
ಮಲ್ಯ ಅಂದಾಕ್ಷಣ ಶ್ರೀಮಂತ ವ್ಯಕ್ತಿ ಎಂಬುದು ಕಣ್ಮುಂದೆ ಬರುತ್ತೆ. ಸದಾ ಹುಡುಗಿಯರ ಜೊತೆ ಕಾಣಿಸಿಕೊಳ್ಳುತ್ತಿದ್ದ ಮಲ್ಯ ಅವರ ಬದುಕು ಕಂಡಂತೆ ಚಿತ್ರೀಸಲಾಗುತ್ತಿದೆ. ಐಷಾರಾಮಿ ಜೀವನ, ಯುವತಿಯರ ಸಹವಾಸ, ಪಾರ್ಟಿ, ಪಬ್, ಹೀಗೆ ಎಲ್ಲವೂ ಚಿತ್ರದಲ್ಲಿರಲಿದೆ.

ನಿರ್ದೇಶಕ ಯಾರು.?
ಕೇಂದ್ರ ಸೆನ್ಸಾರ್ ಮಂಡಳಿಯ ಮಾಜಿ ಅಧ್ಯಕ್ಷ ಪಹಲಾಜ್ ನಿಹಾಲನಿ ಅವರು ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ, ಭರದಿಂದ ಚಿತ್ರೀಕರಣ ಮಾಡುತ್ತಿರುವ ಚಿತ್ರತಂಡ ಆಗಸ್ಟ್ ನಲ್ಲಿ ತೆರೆಗೆ ಬರುವ ಸಿದ್ಧತೆ ಮಾಡಿದೆ.