For Quick Alerts
  ALLOW NOTIFICATIONS  
  For Daily Alerts

  ಬದಲಾಯ್ತು ಬುಕ್ ಮೈ ಶೋ ರೇಟಿಂಗ್ ವಿಧಾನ: ಕಾಂತಾರ, ಜೇಮ್ಸ್, ಕೆಜಿಎಫ್ 2 ರೇಟಿಂಗ್ ಈಗ ಎಷ್ಟಿದೆ?

  |

  'ಬುಕ್ ಮೈ ಶೋ' ಸದ್ಯ ಭಾರತದಲ್ಲಿ ಪ್ರಭಾವಶಾಲಿಯಾಗಿ ನಿಂತಿರುವ ಸಿನಿಮಾ ಟಿಕೆಟ್ ಬುಕಿಂಗ್ ಅಪ್ಲಿಕೇಶನ್ ಆಗಿದೆ. ಬುಕ್ ಮೈ ಶೋ ಮಾದರಿಯಲ್ಲಿಯೇ ಹಲವಾರು ಟಿಕೆಟ್ ಬುಕಿಂಗ್ ಅಪ್ಲಿಕೇಶನ್‌ಗಳು ಲಭ್ಯವಿದ್ದರೂ ಸಹ ಜನರ ಒಲವು ಮಾತ್ರ ಬುಕ್ ಮೈ ಶೋ ಕಡೆ ಹೆಚ್ಚಿದೆ. ಅದರಲ್ಲಿಯೂ ಭಾರತೀಯರು ಈ ಬುಕ್ ಮೈ ಶೋ ಅಪ್ಲಿಕೇಶನ್ ಅನ್ನು ಹೆಚ್ಚಾಗಿ ಬಳಸುತ್ತಾರೆ.

  ಈ ಹಿಂದೆ ಕೇವಲ ಟಿಕೆಟ್ ಬುಕ್ ಮಾಡಲು ಈ ಅಪ್ಲಿಕೇಶನ್ ಅನ್ನು ಬಳಸುತ್ತಿದ್ದ ಸಿನಿಪ್ರೇಮಿಗಳು ಇತ್ತೀಚಿನ ದಿನಗಳಲ್ಲಿ ಚಿತ್ರ ಹಿಟ್ ಅಥವಾ ಫ್ಲಾಪ್ ಎಂಬುದನ್ನು ತಿಳಿಯಲು ಕೂಡ ಬಳಸಲು ಆರಂಭಿಸಿದ್ದಾರೆ. ಚಿತ್ರದ ಟಿಕೆಟ್‌ಗಳು ವೇಗವಾಗಿ ಮಾರಾಟವಾಗುತ್ತಿವೆಯಾ, ಚಿತ್ರಕ್ಕೆ ಎಷ್ಟು ಶೋಗಳು ಸಿಕ್ಕಿವೆ, ಬಿಡುಗಡೆಯಾದ ನಂತರವೂ ಚಿತ್ರ ತನ್ನ ಪ್ರದರ್ಶನಗಳನ್ನು ಉಳಿಸಿಕೊಂಡಿದೆಯಾ ಹಾಗೂ ಚಿತ್ರಕ್ಕೆ ಎಷ್ಟು ರೇಟಿಂಗ್ ಸಿಕ್ಕಿದೆ ಎಂಬ ಮಾನದಂಡಗಳನ್ನು ಬಳಸಿ ಚಿತ್ರ ಗೆದ್ದಿದೆಯಾ ಅಥವಾ ಸೋತಿದೆಯಾ ಎಂಬುದನ್ನು ಜನ ನಿರ್ಧರಿಸಲು ಆರಂಭಿಸಿದ್ದಾರೆ.

  ಅದರಲ್ಲಿಯೂ ಚಿತ್ರವೊಂದರ ಫಲಿತಾಂಶವನ್ನು ಅಳೆಯಲು ಈ ಬುಕ್ ಮೈ ಶೋ ಪ್ರೇಕ್ಷಕರ ರೇಟಿಂಗ್ ಅನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹೌದು, ಬುಕ್ ಮೈ ಶೋ ರೇಟಿಂಗ್ ಚೆನ್ನಾಗಿದ್ದರೆ ಚಿತ್ರ ಚೆನ್ನಾಗಿದೆ ಎಂದರ್ಥ. ಬುಕ್ ಮೈ ಶೋ ರೇಟಿಂಗ್ ಕಳಪೆಯಾಗಿದ್ದರೆ ಅಂತಹ ಚಿತ್ರದ ಟಿಕೆಟ್ ಖರೀದಿಸಲು ಜನರು ಹಿಂದೇಟು ಹಾಕುತ್ತಿರುವುದನ್ನು ಒಪ್ಪಲೇಬೇಕು. ಹೀಗೆ ಸಿನಿ ರಸಿಕರ ಗಮನವನ್ನು ಸೆಳೆದಿರುವ ಬುಕ್ ಮೈ ಶೋ ಅಪ್ಲಿಕೇಶನ್ ತನ್ನ ರೇಟಿಂಗ್ ವಿಧಾನವನ್ನು ಬದಲಾಯಿಸಿದೆ. ಈ ಹಿಂದೆ 100% ರೇಟಿಂಗ್ ಮಾದರಿಯನ್ನು ಪಾಲಿಸುತ್ತಿದ್ದ ಬುಕ್ ಮೈ ಶೋ ಈಗ 'ಐಎಂಡಿಬಿ' ರೀತಿ 10 ಅಂಕದ ಮಾದರಿಯನ್ನು ಅಳವಡಿಸಿಕೊಂಡಿದೆ.

  ನೂರಕ್ಕೆಷ್ಟು ಅಲ್ಲ, ಇನ್ಮುಂದೆ ಹತ್ತಕ್ಕೆಷ್ಟು?

  ನೂರಕ್ಕೆಷ್ಟು ಅಲ್ಲ, ಇನ್ಮುಂದೆ ಹತ್ತಕ್ಕೆಷ್ಟು?

  ಇನ್ನು ಈ ಹಿಂದೆ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ಚಿತ್ರಕ್ಕೆ ಎಷ್ಟು ರೇಟಿಂಗ್ ಬಂದಿವೆ, ಚಿತ್ರ ನೂರಕ್ಕೆ ಎಷ್ಟು ರೇಟಿಂಗ್ ಪಡೆದುಕೊಂಡು ಪ್ರದರ್ಶನ ಕಾಣುತ್ತಿದೆ ಎಂದು ಪ್ರಶ್ನೆಯನ್ನು ಹಾಕುತ್ತಿದ್ದ ಸಿನಿಪ್ರೇಕ್ಷಕರು ಇನ್ನು ಮುಂದೆ ಚಿತ್ರ ಹತ್ತಕ್ಕೆ ಎಷ್ಟು ರೇಟಿಂಗ್ ಪಡೆದುಕೊಂಡಿದೆ ಎಂದು ಕೇಳಬೇಕಾಗುತ್ತದೆ. ಸಾಮಾನ್ಯವಾಗಿ ಚಿತ್ರದ ವಿಮರ್ಶೆ ನೀಡುವವರು 5ಕ್ಕೆ ಇಷ್ಟು ಅಂಕಗಳು ಎಂದು ರೇಟ್ ಮಾಡುತ್ತಾರೆ. ಐಎಂಡಿಬಿ ಅಪ್ಲಿಕೇಶನ್ 10 ಅಂಕಗಳ ಮಾದರಿಯನ್ನು ಅನುಸರಿಸುತ್ತಿತ್ತು. ಆದರೆ ಬುಕ್ ಮೈ ಶೋ ಮಾತ್ರ 100% ಮಾದರಿಯನ್ನು ಅಳವಡಿಸಿಕೊಂಡಿತ್ತು. ಆದರೀಗ ಬುಕ್ ಮೈ ಶೋ ಕೂಡ 10 ಅಂಕದ ಮಾದರಿಗೆ ತನ್ನ ರೇಟಿಂಗ್ ವಿಧಾನವನ್ನು ಬದಲಾಯಿಸಿಕೊಂಡಿದೆ.

  ರೇಟಿಂಗ್ ಬದಲಾದ ನಂತರ ಕಾಂತಾರ, ಜೇಮ್ಸ್, ಕೆಜಿಎಫ್ ಪಡೆದುಕೊಂಡ ಅಂಕ ಹೀಗಿದೆ

  ರೇಟಿಂಗ್ ಬದಲಾದ ನಂತರ ಕಾಂತಾರ, ಜೇಮ್ಸ್, ಕೆಜಿಎಫ್ ಪಡೆದುಕೊಂಡ ಅಂಕ ಹೀಗಿದೆ

  ಕಾಂತಾರ 10 ಅಂಕಗಳಿಗೆ 9.9 ಅಂಕಗಳು

  ಜೇಮ್ಸ್ 10 ಅಂಕಗಳಿಗೆ 9.4 ಅಂಕಗಳು

  ಕೆಜಿಎಫ್ 2 10 ಅಂಕಗಳಿಗೆ 9.3 ಅಂಕಗಳು

  ವಿಕ್ರಾಂತ್ ರೋಣ 10 ಅಂಕಗಳಿಗೆ 8.5 ಅಂಕಗಳು

  ಇತರೆ ಭಾಷೆ ಚಿತ್ರಗಳ ರೇಟಿಂಗ್

  ಇತರೆ ಭಾಷೆ ಚಿತ್ರಗಳ ರೇಟಿಂಗ್

  ವಿಕ್ರಮ್ ( ತಮಿಳು ): 10 ಅಂಕಗಳಿಗೆ 9.5 ಅಂಕಗಳು

  RRR: 10 ಅಂಕಗಳಿಗೆ 8.9 ಅಂಕಗಳು

  ಪೊನ್ನಿಯಿನ್ ಸೆಲ್ವನ್: 10 ಅಂಕಗಳಿಗೆ 9.5 ಅಂಕಗಳು

  ಲೈಗರ್: 10 ಅಂಕಗಳಿಗೆ 5.6 ಅಂಕಗಳು

  English summary
  BookMyShow changed it's rating method from 100% to 10 points; checkout Kantara new rating
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X