»   » ಬಿಗ್ ಬಾಸ್ ಪ್ರಥಮ್ ಮತ್ತು ಭುವನ್ ನಡುವೆ ಗಲಾಟೆ..!

ಬಿಗ್ ಬಾಸ್ ಪ್ರಥಮ್ ಮತ್ತು ಭುವನ್ ನಡುವೆ ಗಲಾಟೆ..!

Posted By:
Subscribe to Filmibeat Kannada

'ಬಿಗ್ ಬಾಸ್ ಸೀಸನ್ 4'ರಲ್ಲಿ ಸಹ ಸ್ಫರ್ಧಿಗಳಾಗಿದ್ದ ಪ್ರಥಮ್ ಮತ್ತು ಭುವನ್ ಅವರ ನಡುವೆ ಗಲಾಟೆ ನಡೆದಿದೆ. 'ಸಂಜು ಮತ್ತು ನಾನು' ಧಾರಾವಾಹಿಯ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ.

'ಸಂಜು ಮತ್ತು ನಾನು' ಧಾರಾವಾಹಿಯ ಚಿತ್ರೀಕರಣ ನಿನ್ನೆ ಬೆಂಗಳೂರಿನಲ್ಲಿ ನಡೆಯುತ್ತಿತ್ತು. ಈ ವೇಳೆ ಪ್ರಥಮ್ ಮತ್ತು ಭುವನ್ ಅವರ ನಡುವೆ ಚಿಕ್ಕ ವಿಷಯಕ್ಕೆ ಮಾತಿನ ಚಕಮಕಿ ನಡೆದಿದೆಯಂತೆ. ಆ ನಂತರ ಇಬ್ಬರ ನಡುವೆ ಗಲಾಟೆ ಆಗಿದ್ದು, ಭುವನ್ ಪೊಲೀಸ್ ಠಾಣೆ ಮೆಟ್ಟಿಲೆರುವ ನಿರ್ಧಾರ ಮಾಡಿದ್ದಾರಂತೆ.

Brawl Between Big Boss Pratham And Bhuvan

ಸದ್ಯ ಈ ಘಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಥಮ್ ' ಚಿತ್ರೀಕರಣದ ವೇಳೆ ನನ್ನ ಮತ್ತು ಭುವನ್ ನಡುವೆ ಗಲಾಟೆ ಆಗಿದ್ದು ನಿಜ ಆದರೆ ನಾನು ಅವರಿಗೆ ಹಲ್ಲೆ ಮಾಡಿಲ್ಲ ಅಂತ ತಿಳಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಸಹ ಸ್ಫರ್ಧಿಗಳಾಗಿದ್ದ ಪ್ರಥಮ್, ಭುವನ್ ಹಾಗೂ ಸಂಜನಾ ಸದ್ಯ ಕಲರ್ಸ್ ಸೂಪರ್ ವಾಹಿನಿಯ 'ಸಂಜು ಮತ್ತು ನಾನು' ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ.

English summary
Brawl Between Big Boss Pratham And Bhuvan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada