»   » ಬುಲೆಟ್ ಪ್ರಕಾಶ್-ದಿನಕರ್ ಕಿರಿಕ್; 'ಸುಲ್ತಾನ್' ಚಿತ್ರದ ಕಥೆ ಫಿನಿಶ್!?

ಬುಲೆಟ್ ಪ್ರಕಾಶ್-ದಿನಕರ್ ಕಿರಿಕ್; 'ಸುಲ್ತಾನ್' ಚಿತ್ರದ ಕಥೆ ಫಿನಿಶ್!?

Posted By:
Subscribe to Filmibeat Kannada

ಸಣ್ಣ ವಿಷ್ಯಕ್ಕೆ ಶುರುವಾದ ಕಿರಿಕ್ ನಿಂದ ಒಂದು ದೊಡ್ಡ ಪ್ರಾಜೆಕ್ಟ್ ಗೆ ಫುಲ್ ಸ್ಟಾಪ್ ಇಡುವ ಹಂತಕ್ಕೆ ಬಂದು ತಲುಪಿದೆ. ಆ ದೊಡ್ಡ ಪ್ರಾಜೆಕ್ಟ್ ಮತ್ತಿನ್ಯಾವುದೂ ಅಲ್ಲ, ಬುಲೆಟ್ ಪ್ರಕಾಶ್ ನಿರ್ಮಾಣದ ದರ್ಶನ್ ಅಭಿನಯಿಸಲು ಒಪ್ಪಿಕೊಂಡಿರುವ ಚಿತ್ರ 'ಸುಲ್ತಾನ್'.

ಎಲ್ಲವೂ ಬುಲೆಟ್ ಪ್ರಕಾಶ್ ಪ್ಲಾನ್ ಪ್ರಕಾರ ನಡೆದಿದ್ದರೆ, ಮುಂದಿನ ವರ್ಷದ ಹೊತ್ತಿಗೆ 'ಸುಲ್ತಾನ್' ಸಿನಿಮಾ ಸೆಟ್ಟೇರಬಹುದಿತ್ತು. ಆದ್ರೆ, ಅಷ್ಟರೊಳಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ಜೊತೆ ಮಾಡಿಕೊಂಡಿರುವ ಕಿರಿಕ್ ನಿಂದಾಗಿ 'ಸುಲ್ತಾನ್' ಹಣೆಬರಹ ಈಗ ನೆಟ್ಟಗಿದ್ದ ಹಾಗಿಲ್ಲ. ['ದಿನಕರ್ ತೂಗುದೀಪ ಅವರಿಗೆ ಅಹಂಕಾರ ನೆತ್ತಿಗೇರಿದೆ!']

ದಿನಕರ್ ತೂಗುದೀಪ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, 'ಸುಲ್ತಾನ್' ಸಿನಿಮಾ ಸೆಟ್ಟೇರುವ ಯಾವುದೇ ಲಕ್ಷಣಗಳು ಇಲ್ಲ. ಹಾಗಾದ್ರೆ, 'ಸುಲ್ತಾನ್' ಬಗ್ಗೆ ದಿನಕರ್ ತೂಗುದೀಪ ಏನು ಹೇಳಿದ್ದಾರೆ? ಅದಕ್ಕೆ ಬುಲೆಟ್ ನೀಡಿರುವ ಪ್ರತಿಕ್ರಿಯೆ ಏನು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಸಂಬಂಧ ಹೇಗಿರುವುದಕ್ಕೆ ಸಾಧ್ಯ?

''ಸಣ್ಣ ವಿಷ್ಯವನ್ನ ಇಷ್ಟು ದೊಡ್ಡದು ಮಾಡಿದ ಮೇಲೆ ಮುಂದೆ ರಿಲೇಶನ್ ಶಿಪ್ ಹೇಗಿರುತ್ತೆ ಸ್ವಲ್ಪ ಯೋಚನೆ ಮಾಡಿ. ಮುಂದೆ ಈ ಸಿನಿಮಾ ಆಗುತ್ತೋ, ಇಲ್ವೋ ಅನ್ನೋದು ದೊಡ್ಡ question mark'' ಅಂತ 'ಸುಲ್ತಾನ್' ಚಿತ್ರದ ಬಗ್ಗೆ ದಿನಕರ್ ತೂಗುದೀಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. [ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

ಬುಲೆಟ್ ಪ್ರಕಾಶ್ ಏನಂತಾರೆ?

''ದರ್ಶನ್ ಇಷ್ಟ ಪಟ್ಟರೆ ಸಿನಿಮಾ ಮಾಡ್ತೀನಿ. ಸಿನಿಮಾ ತಂದಿರೋದೇ, ಸಿನಿಮಾ ಮಾಡುವುದಕ್ಕೆ. ಈಗಲೇ ಯಾವುದೇ ಆತುರದ ನಿರ್ಧಾರ ಮಾಡಲ್ಲ. ಏನೇನು ಆಗುತ್ತೋ, ಎಲ್ಲಾ ಫೇಸ್ ಮಾಡಬೇಕು'' - ಬುಲೆಟ್ ಪ್ರಕಾಶ್ [ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?]

ಫ್ರೆಂಡ್ ಶಿಪ್ ಕಟ್ ಆದರೆ...

''ಫ್ರೆಂಡ್ ಶಿಪ್ ಕಟ್ ಆದರೆ ಏನೂ ಮಾಡೋಕೆ ಆಗಲ್ಲ. ಒಂದೊಳ್ಳೆ ಫ್ರೆಂಡ್ ನ ಮಿಸ್ ಮಾಡಿಕೊಂಡೆ ಅಂದುಕೊಳ್ಳುತ್ತೇನೆ. ಫ್ರೆಂಡ್ ಶಿಪ್ ಗಟ್ಟಿಯಾಗುವುದಕ್ಕೆ ಸಿನಿಮಾ ಮಾಡುವುದಕ್ಕೆ ಮುಂದಾದೆ'' - ಬುಲೆಟ್ ಪ್ರಕಾಶ್ [ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

ದುಡ್ಡು ಕೊಟ್ಟೆ ಸಿನಿಮಾ ಮಾಡಿಸುವುದು!

''ನಾನು ದುಡ್ಡು ಕೊಟ್ಟೆ ಮಾಡಿಸುವುದು. ಎಷ್ಟೋ ಜನ ಅಂದರು ಫ್ರೀ ಡೇಟ್ ಅಂತ. ಆದರೆ, ನನ್ನ ಮನಸಾಕ್ಷಿಗೆ ಗೊತ್ತು. ದುಡ್ಡು ಕೊಟ್ಟೆ ಮಾಡಿಸಿಕೊಳ್ಳುವುದು'' - ಬುಲೆಟ್ ಪ್ರಕಾಶ್

ಆದ್ರೆ ಸಂತೋಷ!

''ಡೇಟ್ ಕೊಟ್ಟರೆ ಸಂತೋಷ, ಸಿನಿಮಾ ಮಾಡ್ತೀನಿ. ಇಲ್ಲಾ ಅಂದ್ರೂ ಸಂತೋಷ, ನಟನೆ ಮಾಡಿಕೊಂಡು ಇರ್ತೀನಿ. ದೇವರು ಒಳ್ಳೆಯದು ಮಾಡಲಿ ಅವರಿಗೆ. ಎಲ್ಲವೂ ಜನರ ಮುಂದೆ ಇದೆ'' - ಬುಲೆಟ್ ಪ್ರಕಾಶ್

English summary
Bullet Prakash has lodged complaint in Amruthahalli Police Station, Bengaluru against Director Dinakar Toogudeepa for threatening him last night (February 3rd). Will this incident affect 'Sultan' project? Check out Dinakar Toogudeepa and Bullet Prakash's reaction.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada