»   » 'ತಿಥಿ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನಂದ್ರು ಗೊತ್ತಾ?

'ತಿಥಿ' ಸಿನಿಮಾ ನೋಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏನಂದ್ರು ಗೊತ್ತಾ?

Posted By:
Subscribe to Filmibeat Kannada

''ತಿಥಿ' ಸಿನಿಮಾ ನೋಡಿದೆ. ಚೆನ್ನಾಗಿದೆ, ಮನರಂಜನೆಯಾಗಿದೆ, ಉತ್ತಮ ಸಾಮಾಜಿಕ ಸಂದೇಶವಿದೆ, ಕಡಿಮೆ ಬಜೆಟ್, ಒಳ್ಳೆ ಸಿನಿಮಾ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು 9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ 'ತಿಥಿ' ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

9ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನ ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಕನ್ನಡ ಸಿನಿಮಾ ಹಾಗೂ ಕನ್ನಡ ಚಿತ್ರರಂಗಕ್ಕೆ ಕೆಲವು ಸಲಹೆ, ಸೂಚನೆಗಳನ್ನ ನೀಡಿದರು.['ಬೆಂಗಳೂರು ಚಿತ್ರೋತ್ಸವ'ಕ್ಕೆ ಸಿ.ಎಂ ಚಾಲನೆ: ವಿಧಾನಸೌಧದ ಮೇಲೆ ಕನ್ನಡ ಸಂಸ್ಕ್ರತಿ ಅನಾವರಣ]

C M Siddaramaiah Talk About Thithi Movie

''ಇತ್ತೀಚೆಗೆ ಕನ್ನಡ ಚಿತ್ರಗಳು ದ್ವಂದ್ವಾರ್ಥವೇ ಮನರಂಜನೆ ಎಂದುಕೊಂಡಿವೆ. ಆದ್ರೆ, ಇದು ಜನಗಳಿಗೆ ನೋವು ತರುವಂತಹದು. ಹಾಗಂತ ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಅಂತ ಅಲ್ಲಾ, ಅದರ ಜೊತೆ ಕೆಟ್ಟ ಚಿತ್ರಗಳು ಬರುತ್ತಿವೆ''[ಫೆ 2 ರಿಂದ 9ರ ವರೆಗೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ]

''ಬಂಗಾರದ ಮನುಷ್ಯ ಸಿನಿಮಾವನ್ನ ನಾನು ಆಗಲೇ 5 ಸಲ ನೋಡಿದ್ದೀನಿ. ಹಲವು ಜನರು, ಅದರಲ್ಲೂ ವಿದ್ಯಾವಂತರೇ ಈ ಸಿನಿಮಾ ನೋಡಿ, ಮತ್ತೆ ಹಳ್ಳಿಗಳಿಗೆ ವಾಪಾಸ್ಸಾಗಿರುವುದು ಉಂಟು. ಈಗ ಅಂತಹ ಸಾಮಾಜಿಕ ಸಿನಿಮಾಗಳು ಬರಬೇಕು''

C M Siddaramaiah Talk About Thithi Movie

''ಇತ್ತೀಚೆಗೆ ಅಗಲಿದ ನನ್ನ ಸ್ನೇಹಿತ ಸಚಿವ ಮಹದೇವ ಪ್ರಸಾದ್ 'ತಿಥಿ' ಅಂತ ಒಂದು ಸಿನಿಮಾ ಬಂದಿದೆ. ತುಂಬಾ ಚೆನ್ನಾಗಿದೆ, ಹಲವು ಅವಾರ್ಡ್ ಗಳನ್ನ ತಗೊಂಡಿದೆ. ನೋಡೋಣ ಬನ್ನಿ ಅಂತಾ ತೋರಿಸಿದ್ರು. ನೋಡಿದೆ, ಎಷ್ಟು ಚೆನ್ನಾಗಿದೆ ಗೊತ್ತಾ? ಮನರಂಜನೆನೂ ಇದೆ, ಸಂದೇಶನೂ ಇದೆ, ಹೆಚ್ಚು ಖರ್ಚು ಆಗಿಲ್ಲ, ಕಡಿಮೆ ಬಜೆಟ್, ಒಳ್ಳೆ ಸಿನಿಮಾ.'' ಅಂತ 'ತಿಥಿ' ಚಿತ್ರವನ್ನ ಶ್ಲಾಘಸಿದರು.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

ಇನ್ನೂ ಇದೇ ಸಂದರ್ಭದಲ್ಲಿ ಕನ್ನಡ ಸಿನಿಮಾಗಳಿಗೆ ಹಾಗೂ ಚಿತ್ರರಂಗದ ಬೆಳವಣಿಗೆಗೆ ಎಲ್ಲ ರೀತಿಯಲ್ಲೂ ಸರ್ಕಾರ ಬೆಂಬಲ ನೀಡುತ್ತೆ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.[9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷತೆಗಳು!]

English summary
Karnataka karnataka Chief Minister Siddaramaiah Shared His Expirence About Kannada Movie 'Thithi at 9th Edition of Bengaluru International Film Festival Inauguration Function.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada