»   » ಬೆತ್ತನಗೆರೆ ಚಿತ್ರದ ವಿರುದ್ಧ ಕೇಸು ದಾಖಲು

ಬೆತ್ತನಗೆರೆ ಚಿತ್ರದ ವಿರುದ್ಧ ಕೇಸು ದಾಖಲು

Posted By:
Subscribe to Filmibeat Kannada

ಭೂಗತ ಜಗತ್ತಿನ ಕಥಾಹಂದರದ 'ಬೆತ್ತನಗೆರೆ' ಚಿತ್ರಕ್ಕೆ ದುತ್ತನೆ ವಿಘ್ನವೊಂದು ಎದುರಾಗಿದೆ. ಈ ಚಿತ್ರದ ಶೂಟಿಂಗನ್ನು ತಡೆಯಬೇಕು ಎಂದು ಬೆತ್ತನಗೆರೆ ಸೀನನ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾರೆ. ತನ್ನ ಮಗನ ಜೀವನಕ್ಕೆ ಸಂಬಂಧಿಸಿದ ಕಥೆಯನ್ನು ಮೂಲವಾಗಿರಿಸಿಕೊಂಡು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇದನ್ನು ತಡೆಯಬೇಕು ಎಂದು ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ.

ಪೊಲೀಸರ ಗುಂಡಿನ ದಾಳಿಯಲ್ಲಿ ಹತನಾದ ರೌಡಿ ಶೀಟರ್ ಬೆತ್ತನಗೆರೆ ಸೀನನ ಕುರಿತಾದ ಕಥೆ ಇದು ಎನ್ನಲಾಗಿದ್ದು, ಸುಮಂತ್ ಶೈಲೇಂದ್ರ ಹಾಗೂ ಅಕ್ಷಯ್ ಮುಖ್ಯಭೂಮಿಕೆಯಲ್ಲಿದ್ದಾರೆ. ಆರಂಭದಲ್ಲಿ ಈ ಚಿತ್ರದ ಟೈಟಲ್ ಗಾಗಿ ಸಾಕಷ್ಟು ಕಿತ್ತಾಗಳೇ ನಡೆದಿದ್ದವು.

Case filed against Kannada movie Bettanagere

ಅಶ್ವಿನಿ ಆಡಿಯೋದ ಅಶ್ವಿನಿ ರಾಮ್ ಪ್ರಸಾದ್ ಸೇರಿದಂತೆ ಆರೇಳು ನಿರ್ಮಾಪಕರು ಈ ಒಂದೇ ಟೈಟಲ್ ಗೆ ಮುಗಿಬಿದ್ದಿದ್ರು. ಚಿತ್ರದಲ್ಲಿ ಪ್ರಮುಖ ಆಕರ್ಷಣೆಯಾಗಿ ಕಾಂಬ್ಳಿ ಅವರ ಪಾತ್ರ ನಿಲ್ಲಲಿದೆ ಎನ್ನುತ್ತದೆ ಚಿತ್ರತಂಡ. ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ ಎನ್ನಲಾಗಿದೆ.

ಈ ಚಿತ್ರದ ನಿರ್ದೇಶಕರು ಬೆತ್ತೆನೆಗೆರೆ ಸ್ಥಳದ ವ್ಯಕ್ತಿ ಮೋಹನ್ ಗೌಡ ಬಿ.ಜಿ. 'ಬೆತ್ತೆನೆಗೆರೆ' ಸಿನಮಾಗೆ ಕಥೆ ಬರೆದು, ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶನ ಮಾಡುತ್ತಿದ್ದಾರೆ. 'ಬೆತ್ತನಗೆರೆ' ಚಿತ್ರದ ಅಡಿಬರಹ 'ಎ ರಾ ಸ್ಟೋರಿ!' ಕ್ರೈಂ ಲೋಕದಲ್ಲಿ ತಿಳಿದ ವ್ಯಕ್ತಿ ಬೆತ್ತೆನೆಗೆರೆ ಸೀನ.

ಸೀನನ ಸಹೋದರ ಮೋಹನ್ ಅವರೇ ಸಿನೆಮಾ ನಿರ್ದೇಶನದ ಜೊತೆಗೆ ಒಳಗಿನ ಕೆಲವು ಮನಮಿಡಿಯುಯ ಅಂಶಗಳನ್ನು ಹೇಳಲು ಹೊರಟಿದ್ದಾರೆ. ಇನ್ನು ಕಾಂಬ್ಳಿ ಅವರ ವಿಚಾರಕ್ಕೆ ಬಂದರೆ ದಕ್ಷಿಣ ಭಾರತದಲ್ಲಿ ಅವರು ಅಭಿನಯಿಸುತ್ತಿರುವ ಮೊದಲ ಚಿತ್ರ ಇದಾಗಿದೆ. ಹಿಂದಿಯಲ್ಲಿ ಅನರ್ಥ್ ಹಾಗೂ ಪಲ್ ಪಲ್ ದಿಲ್ ಕೆ ಸಾಥ್ ಎಂಬ ಎರಡು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್)

English summary
A crime thriller 'Bettanagere' is in trouble now. The mother of Bettanagere Seena, the wanted gangster who was shot down by the police has approached the high court. She has sought a stay against the making of the film alleging that it is based on the life of her son.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada