For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ರು ಏನೋ ಅಂದ್ರು, ಅದನ್ನ ಸಿದ್ಧರಾಮಣ್ಣ ಕೇಳ್ಸೋಬೇಕಲ್ಲಾ?!

  By ಯೋಗರಾಜ್ ಭಟ್
  |

  ''ನಮ್ ಗದ್ದೇಲಿ ನೀರಿಲ್ಲ, ಬದುಕೋಕ್ ಆಗ್ತಾ ಇಲ್ಲ, ಹಳೇದೆಲ್ಲಾ ನಮಗ್ ಗೊತ್ತಿಲ್ಲ. ಹೊಸಾ ಕಾನೂನ್ ಮಾಡ್ಕೊಡಿ. ಹೇಳಿದ್ಹಂಗೆ ನಡ್ಕೋಬೇಕು... ನೀರ್ ಬಿಡ್ಬಾರ್ದು.. ಅದೇನು ನ್ಯಾಯಾಂಗ ನಿಂದನೆ ಆಗಲ್ಲ... ಅಬ್ಬಬ್ಬಾ ಅಂದ್ರೆ ಎಲ್ಲಾ ಮುಖಂಡ್ರ ಅರೆಸ್ಟ್ ಆಗತ್ತೆ. ಆಗ್ಲಿ...''

  - ಹೀಗಂತ, ಮುಂಗಾರು ಮಳೆ ಕೈಕೊಟ್ಟಿರುವಾಗ, ಥೇಟ್ ಸಿನಿಮಾದಲ್ಲಿ ಸಂಭಾಷಣೆ ಬರ್ದ್ಹಂಗೆ 'ಮುಂಗಾರು ಮಳೆ' ಖ್ಯಾತಿಯ ನಿರ್ದೇಶಕ ಯೋಗರಾಜ್ ಭಟ್ರು ಉದ್ದುದ್ದ ಪತ್ರ ಬರೆದವ್ರೆ. [ಕಾವೇರಿ ಗಲಭೆ : ಕನ್ನಡ ಸಿನಿ ತಾರೆಯರ 'ಶಾಂತಿ' ಸಂದೇಶ]

  ಆದ್ರೆ ಏನ್ ಬಂತು ಪ್ರಯೋಜನ. ಕಾನೂನಿಗೆ ನಾವು ಗೌರವ ಕೊಡ್ಬೇಕು. ಸಂವಿಧಾನದ ವಿರುದ್ಧ ಹೋಗೋಕ್ಕಾಗಲ್ಲ. ಹೀಗಾಗಿ ಸುಪ್ರೀಂ ಕೋರ್ಟು ಏನ್ ಹೇಳಿದ್ಯೋ, ಹಾಗೆ ನೀರು ಬಿಡ್ತೀವಿ ಅಂತ ಹೇಳ್ಬುಟ್ರು ಸಿ.ಎಂ. ಸಿದ್ಧರಾಮಯ್ಯ.

  ಜನ ಎಷ್ಟೇ ಬಾಯ್ಬಡ್ಕಂಡ್ರೂ ಅಷ್ಟೇ, ಕಾವೇರಿ ಹರಿದು ಹೋಗ್ತಿದ್ದಾಳೆ. ಕೃಷ್ಣ ರಾಜ ಸಾಗರದಲ್ಲಿ ನೀರು ಖಾಲಿ ಆಗ್ತಿದೆ. ಏನೇ ಆದ್ರೂ ನೀವ್ ಶಾಂತಿ ಕಳ್ಕೋಬೇಡಿ. ರೊಚ್ಚಿಗೆದ್ದು ಬೆಂಕಿ ಹಚ್ಚೋಕ್ ಹೋಗ್ಬೇಡಿ. ಆಮೇಲೆ ಆರ್ಸೋಕೆ ನೀರಿರಲ್ಲ! ಹೀಗಾಗಿ, ನಿಮ್ಮನ್ನೆಲ್ಲಾ ಉದ್ದೇಶಿಸಿ ಯೋಗರಾಜ್ ಭಟ್ರು ಬರೆದಿರುವ ಲೆಟರ್ ನ ಒಮ್ಮೆ ಓದ್ಕೊಂಬಿಡಿ....[ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ 'ಅಣ್ತಮ್ಮ' ಯಶ್]

  ಅವ್ರಿಗೆ ನೀರ್ ಬೇಕಾಗಿಲ್ಲ

  ಅವ್ರಿಗೆ ನೀರ್ ಬೇಕಾಗಿಲ್ಲ

  ಈಗ ಇವತ್ತು ಎಲ್ಲಾ ವಿರೋಧ ಪಕ್ಷದವ್ರು, ರೂಲಿಂಗ್ ಪಾರ್ಟಿಯವ್ರು, ಮುಖ್ಯಮಂತ್ರಿಗಳು, ಪತ್ರಿಕೆ-ಟಿವಿಯವ್ರು, ಸಿನಿಮಾದವ್ರು, ಐಟಿ-ಬಿಟಿ ಬ್ಯಾಡ್ಜ್ ಹಾಕಂಡವ್ರು, ಎಲ್ಲಾ ಅಂದ್ರೆ ಎಲ್ಲಾರೂ - ಪಬ್ಲಿಕ್ ಜೊತೆ, ಜನ ಸಾಮಾನ್ಯರ ಜೊತೆ ಸೇರ್ಕೊಂಡು ಸುಪ್ರೀಂ ಕೋರ್ಟ್ ಹೇಳ್ತಾ ಇರೋದು ಏನೂ ಅರ್ಥ ಆಗ್ತಾ ಇಲ್ಲ, ತಮಿಳು ನಾಡಿಗೆ ಮೂರ್ ಮೂರ್ ಮಳೆ ಆಗಿದೆ, ಬೆಳೆ ಬೆಳ್ದಿದ್ದಾರೆ. ಮಳೆ ಜಾಸ್ತಿ ಆಗಿ ಮುಳುಗಡೆ ಕೂಡ ಮಾಡ್ಕೊಂಡ್ರು ಮೊನ್ಮೊನ್ನೆ, ಅವ್ರಿಗೆ ನೀರ್ ಬೇಕಾಗಿಲ್ಲ, ಮೂಗಿನ್ ತನ್ಕ ನೀರಿದೆ, ಅವ್ರಿಗೆ ನೀರ್ ಬಿಡಲ್ಲ ಅಂತ ಸೀದಾ ಸಾದಾ ಹೇಳಾಣ....

  ಹಳೇ ಕತೆ ಬೇಡ, ಹೊಸ ಕಾನೂನು ಮಾಡಿ

  ಹಳೇ ಕತೆ ಬೇಡ, ಹೊಸ ಕಾನೂನು ಮಾಡಿ

  ನಮ್ ಗದ್ದೇಲಿ ನೀರಿಲ್ಲ, ಬದುಕೋಕ್ ಆಗ್ತಾ ಇಲ್ಲ, ಹಳೇದೆಲ್ಲಾ ನಮಗ್ ಗೊತ್ತಿಲ್ಲ. ಹೊಸಾ ಕಾನೂನ್ ಮಾಡ್ಕೊಡಿ, ಈ ಒನ್ ಬೈ ಟು ನದಿ ವ್ಯವಾರ ಬ್ಯಾಡ, ಅದೇನು 'ಬೈ ಟು' ಮಾಡ್ಕಳ್ಳಕ್ಕೆ ಟೀ ಕಾಫಿ ಅಲ್ಲ, ನದಿ. ಅದು ನದಿ ಅನ್ನಾಣ.

  ಅಬ್ಬಬ್ಬಾ ಅಂದ್ರೆ ಅರೆಸ್ಟ್ ಆಗ್ಲಿ ಬಿಡಿ...

  ಅಬ್ಬಬ್ಬಾ ಅಂದ್ರೆ ಅರೆಸ್ಟ್ ಆಗ್ಲಿ ಬಿಡಿ...

  ಕಾವೇರಿ ಇಲ್ಲಿ ಹುಟ್ಟಿದಾಳೆ. ಆ ಕಡೆ ಹರಿತಾಳೆ, ಅಲ್ಲಿ ಹುಟ್ಟಿ ಈ ಕಡೆ ಹರಿತಾ ಇಲ್ಲ ಅನ್ನಾಣ. ಹೇಳಿದ್ಹಂಗೆ ನಡ್ಕೋಬೇಕು... ನೀರ್ ಬಿಡ್ಬಾರ್ದು.. ಅದೇನು ನ್ಯಾಯಾಂಗ ನಿಂದನೆ ಆಗಲ್ಲ... ಅಬ್ಬಬ್ಬಾ ಅಂದ್ರೆ ಎಲ್ಲಾ ಮುಖಂಡ್ರ ಅರೆಸ್ಟ್ ಆಗತ್ತೆ. ಆಗ್ಲಿ...

  ದೊಡ್ ದೊಡ್ಡೋರೆಲ್ಲಾ ರಸ್ತೆಗೆ ಇಳೀಬೇಕು

  ದೊಡ್ ದೊಡ್ಡೋರೆಲ್ಲಾ ರಸ್ತೆಗೆ ಇಳೀಬೇಕು

  ''ಜೀವನ್ದಲ್ಲಿ ಜನ್ರಿಗೋಸ್ಕರ ಮುಖಂಡ್ರೆಲ್ಲಾ ಒಮ್ಮೆ ಆದ್ರೂ ಒಗ್ಗಟ್ಟಲ್ಲಿ ಹೋರಾಡಿದ್ರು'' ಅಂತ ಇತಿಹಾಸ ಆಗತ್ತೆ. ಅದಕ್ಕಾಗಿ ಈ ದೊಡ್ ದೊಡ್ಡೋರೆಲ್ಲಾ ಒಗ್ಗಟ್ಟಲ್ಲಿ ರಸ್ತೇಗೆ ಇಳೀಬೇಕು.. ಪಬ್ಲಿಕ್ಕು, ರೈತ್ರು ರಸ್ತೇಲಿ ಅಳೋದನ್ನ ಟಿವಿಯಲ್ಲಿ ತಮಾಷೆ ನೋಡೋ ಥರಾ ನೋಡೋದು ಬಿಡ್ಬೇಕು ಲೀಡ್ರುಗಳು...ಜನ ಕೇವಲ ದೊಡ್ಡೋರೆಲ್ಲಾ ಒಗ್ಗಟ್ಟಾಗಿರೋಕೆ ಬೇಡಿಕೆ ಇಡಬೇಕೇ ಹೊರತು ಗಲಾಟೆ ಮಾಡಿ ತಪ್ಪು ಮಾಡಿದ್ದೀವಿ ಅನ್ನಿಸ್ಕೋಬಾರ್ದು.

  ಬೆಂಕಿ ಹಚ್ಚಿದ್ರೆ, ಆರ್ಸೋಕೆ ನೀರಿಲ್ಲ

  ಬೆಂಕಿ ಹಚ್ಚಿದ್ರೆ, ಆರ್ಸೋಕೆ ನೀರಿಲ್ಲ

  ಕನ್ನಡ ಜನ ಯಾವತ್ತೂ ಹಿಂಸೆ ಮಾಡವ್ರು ಅಲ್ಲ. ಬೆಂಕಿ ಹಚ್ಚವ್ರು ಅಲ್ಲ. ಕನ್ನಡಿಗರು ಹಿಂಸಾಚಾರ ಮಾಡಿದ್ರು ಅನ್ನೋ ಹೆಸ್ರು ಖಂಡಿತ ಬೇಡ ನಮ್ಗೆ. ಅಲ್ಲ ಜಾಸ್ತಿ ಬೆಂಕಿ ಹಚ್ಚಿದ್ರೆ ಆರ್ಸೋಕೆ ನೀರಿಲ್ಲ ಅಂತ ನಮ್ ಮಂದೀಗೆ ಗೊತ್ತಿಲ್ಲಾ? ಗೊತ್ತು! ಅದಲ್ಲ, ಎಲ್ಲಾ ರಾಜಕೀಯ ಪಕ್ಷಗಳ ದೊಡ್ ದೊಡ್ ಲೀಡ್ರುಗಳನ್ನ ನದಿ ದಂಡೇಲಿ ಸೇರ್ಸಿ ಒಂದು ಲೋಟ ನೀರ್ ಬೇಕಾರೆ ಆ ಕಡೆ ಕೊಡ್ತೀವಿ, ಕ್ಯೂಸೆಕ್ಸು ಪಾಸೆಕ್ಸು ಲೆಕ್ಕ ಪಕ್ಕ ಎಲ್ಲಾ ನಮ್ಗೆ ಗೊತ್ತಾಗಲ್ಲ ಅಂತ ಒಗ್ಗಟ್ಟಲ್ಲಿ ಅನ್ಬೇಕು.

  ಬೇಡ. ಬೆಂಕಿ ಬೇಡ್ವೇ ಬೇಡ, ಗಲಾಟೇನೂ ಬೇಡ

  ಬೇಡ. ಬೆಂಕಿ ಬೇಡ್ವೇ ಬೇಡ, ಗಲಾಟೇನೂ ಬೇಡ

  ಅದನ್ನು ಕೂಡ ತುಂಬಾ ಶಾಂತ ರೀತಿಲಿ ಮಾಡ್ಬೇಕು. ಗಲಾಟೆ ದಯವಿಟ್ಟು ಬೇಡ. ಬೆಂಕಿ ಬೇಡ್ವೇ ಬೇಡ. ಮುಖಂಡ್ರನ್ನ ಹಿಡ್ಕಳಾಣ, ಅವ್ರಿಗೆ ವೋಟ್ ಹಾಕಿಲ್ವೇ? ಅವ್ರೆಲ್ಲಾ ಬರ್ತಾರೆ...ಎಲ್ಲಾ ಸರೋಗತ್ತೆ...
  ಒಗ್ಗಟ್ಟಲ್ಲಿ ಆಗೋ ಕೆಲ್ಸ ಗಲಾಟೇಲಿ ಆಗಲ್ಲ...
  ಪ್ಲೀಸ್ ಶಾಂತರಾಗಿ ವರ್ತಿಸಿ...
  ಜೈ ಕನ್ನಡ...
  ಇಂತಿ,
  ಯೋಗರಾಜ್ ಭಟ್, ನಿರ್ದೇಶಕ.

  English summary
  Kannada Director Yogaraj Bhat has written letter addressing Kannadigas over Cauvery Water Dispute. He says, even if all the leaders are arrested we should not release Cauver water to Tamil Nadu. Will Siddaramaiah lend his ear to Bhat's plea?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X