»   » ಮುಂಬೈ ಹೀರೋಸ್ ಜತೆ ಕಿಚ್ಚ ಚಿಂತಾತ ಚಿತಾ ಚಿತಾ

ಮುಂಬೈ ಹೀರೋಸ್ ಜತೆ ಕಿಚ್ಚ ಚಿಂತಾತ ಚಿತಾ ಚಿತಾ

Posted By:
Subscribe to Filmibeat Kannada

ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್) ನಾಲ್ಕನೇ ಆವೃತ್ತಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಆಕರ್ಷಕವಾಗಿ ಆಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಸುನಾಯಾಸವಾಗಿ ಗೆದ್ದು ಒಂದರಲ್ಲಿ ಟೈ ಆಗಿದೆ.

ಈಗ ಸೆಮಿ ಫೈನಲ್ ಹಂತ ತಲುಪಿದ್ದು ಶನಿವಾರ (ಫೆಬ್ರವರಿ 22) ಹೈದರಾಬಾದಿನಲ್ಲಿ ಮುಂಬೈ ಹೀರೋಸ್ ತಂಡದ ಜೊತೆ ಮುಖಾಮುಖಿಯಾಗಲಿದೆ. ಈ ಪಂದ್ಯಾವಳಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಸ್ವಲ್ಪ ಜಾಣ್ಮೆಯಿಂದ ಆಡಿದರೆ ಮುಂಬೈ ಹೀರೋಸನ್ನು ಮಣಿಸಬಹುದು.

ಕರ್ನಾಟಕ ಮೂಲದವರೇ ಆದ ಸುನಿಲ್ ಶೆಟ್ಟಿ ನಾಯಕತ್ವದ ಮುಂಬೈ ಹೀರೋಸ್ ತಂಡ ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಸೋತು ಎರಡು ಗೆದ್ದಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. [ವೀರ್ ಮರಾಠಿಗರನ್ನು ಬಗ್ಗುಬಡಿದ ಬುಲ್ಡೋಜರ್ಸ್]

ಕರ್ನಾಟಕ ಬುಲ್ಡೋಜರ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ನಲ್ಲಿದ್ದು ಮುಂಬೈ ತಂಡದ ಜೊತೆ ಜಿಂತಾತ ಜಿತಾ ಜಿತಾ ಎಂದು ಕಬಡ್ಡಿ ಆಡುವುದು ಗ್ಯಾರಂಟಿ ಎಂಬಂತಿದೆ ಪರಿಸ್ಥಿತಿ. ಒಟ್ಟಾರೆಯಾಗಿ ಮುಂಬೈ ಹೀರೋಸ್ ತಂಡಕ್ಕೆ ನೀರು ಕುಡಿಸಲಿದೆ ಸುದೀಪ್ ತಂಡ.

ಸಂಜೆ 7ಕ್ಕೆ ಮುಂಬೈ ಹೀರೋಸ್ ಜೊತೆ ಸಮರ

ಮೊದಲ ಸೆಮಿಫೈನಲ್ ಪಂದ್ಯ ಭೋಜ್ ಪುರಿ ದಬಾಂಗ್ಸ್ ಹಾಗೂ ಕೇರಳ ಸ್ಟ್ರೈಕರ್ಸ್ ನಡುವೆ ನಡೆಯಲಿದೆ. ಅದಾದ ಬಳಿಕ ಸಂಜೆ 7ಕ್ಕೆ ಹೈದರಾಬಾದಿನ ಲಾಲ್ ಬಹದ್ದೂರ್ ಸ್ಟೇಡಿಯಂ ಬುಲ್ಡೋಜರ್ಸ್ ಹಾಗೂ ಮುಂಬೈ ಹೀರೋಸ್ ನಡುವಿನ ಸಮರಕ್ಕೆ ಸಜ್ಜಾಗಲಿದೆ.

ಬುಲ್ಡೋಜರ್ಸ್ ಮುಂದೆ ಆಟ ನಡೆಯಲ್ಲ

ಮುಂಬೈ ಹೀರೋಸ್ ತಂಡ ಈ ಸಿಸಿಎಲ್ ನಾಲ್ಕನೇ ಆವೃತ್ತಿಯಲ್ಲಿ ಆವರೇಜ್ ತಂಡ ಎನ್ನಿಸಿಕೊಂಡಿದ್ದು ಬುಲ್ಡೋಜರ್ಸ್ ಮುಂದೆ ಅವರ ಆಟ ನಡೆಯುವುದು ಕಷ್ಟ. ಒಟ್ಟಾರೆಯಾಗಿ ಬುಲ್ಡೋಜರ್ಸ್ ತಂಡ ಮುಂಬೈ ತಂಡದ ಜೊತೆ ಕಬಡ್ಡಿ ಆಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕ್ರಿಕೆಟ್ ಅಭಿಮಾನಿಗಳಿಗೆ ಪಕ್ಕಾ ಮನರಂಜನೆ

ಈ ಬಾರಿ ತೆಲುಗು ಚಿತ್ರರಸಿಕರ ನಡುವೆ ಅಂಥಹಾ ಥ್ರಿಲ್ ಇಲ್ಲ. ಏಕೆಂದರೆ ವಿಕ್ಟರಿ ವೆಂಕಟೇಶ್ ನಾಯಕತ್ವದ ತೆಲುಗು ವಾರಿಯರ್ಸ್ ತಂಡ ಸಿಸಿಎಲ್ 4ನೇ ಆವೃತ್ತಿಯಿಂದ ಎಲಿಮಿನೇಟ್ ಆಗಿದೆ. ಆದರೆ ಕ್ರಿಕೆಟ್ ಎಂಜಾಯ್ ಮಾಡುವ ಕ್ರೀಡಾಮನೋಭಾವವುಳ್ಳವರಿಗೆ ಕಂಡಿತ ಮನರಂಜನೆ ಸಿಗುತ್ತದೆ.

ಮುಂಬೈ ಹೀರೋಸ್ ತಂಡದಲ್ಲಿ ಯಾರ್ಯಾರಿದ್ದಾರೆ?

ಮುಂಬೈ ಹೀರೋಸ್ ತಂಡದಲ್ಲಿ ಅಫ್ ತಬ್ ಶಿವದಾಸಾನಿ, ಸಮೀರ್ ಕೊಚ್ಚರ್, ಬಾಬ್ಬಿ ಡಿಯೋಲ್, ರಾಜ ಭೆರ್ವಾನಿ, ರಣದೀಪ್ ಹೂಡ, ಅಮ್ರಾನ್ ಕೊಹ್ಲಿ, ಯಶ್ ತೊಂಕ್, ಜೀತು ಶರ್ಮ ಮುಂತಾದವರಿದ್ದಾರೆ.

ಸುವರ್ಣ ವಾಹಿನಿಯಲ್ಲಿ ನೇರ ಪ್ರಸಾರ

ಈ ರೋಚಕ ಪಂದ್ಯಾವಳಿಯನ್ನು ಸುವರ್ಣ ಟಿವಿಯಲ್ಲಿ ನೇರವಾಗಿ ಫೆ.22ರ ಸಂಜೆ 7 ಗಂಟೆಗೆ ವೀಕ್ಷಿಸಬಹುದು. ರಿಸ್ತೇ, ಬಿಗ್ ಮ್ಯಾಜಿಕ್ ವಾಹಿನಿಗಳಲ್ಲೂ ನೇರ ಪ್ರಸಾರವಾಗಲಿದೆ.

ಈ ಬಾರಿಯ ಚಾಂಪಿಯನ್ ಕರ್ನಾಟಕ ಬುಲ್ಡೋಜರ್ಸ್?

ಕರ್ನಾಟಕ ಬುಲ್ಡೋಜರ್ಸ್ ತಂಡದ ವೃತ್ತಿಪರ ಆಟವನ್ನು ಗಮನಿಸಿದ್ದೇ ಆದರೆ ಈ ಬಾರಿಯ ಚಾಂಪಿಯನ್ ಕೂಡ ಅವರೇ ಆಗುತ್ತಾರೆ ಎಂಬ ವಿಶ್ವಾಸವಿದೆ. ಫೈನಲ್ ಪಂದ್ಯ ಕೇರಳ ಸ್ಟ್ರೈಕರ್ಸ್ ಜೊತೆ ಅಥವಾ ಭೋಜ್ ಪುರಿ ದಬಾಂಗ್ಸ್ ಜೊತೆ ನಡೆಯಬಹುದು. ಯಾವುದರ ಮೇಲೆ ನಡೆದರೂ ಕಿಚ್ಚ ಸುದೀಪ್ ತಂಡದ ಕಡೆಗೇ ಹೆಚ್ಚಿನ ಒಲವಿದೆ.

ಬುಲ್ಡೋಜರ್ಸ್ ತಂಡದಲ್ಲಿ ಉತ್ತಮ ಆಟಗಾರರು

ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಧ್ರುವ ಶರ್ಮಾ, ಪ್ರದೀಪ್, ರಾಹುಲ್, ಜೆಕೆ, ರಾಜೀವ್, ಭಾಸ್ಕರ್ ಅವರಂತಹ ಉತ್ತಮ ಆಟಗಾರರಿದ್ದಾರೆ. ಇವೆಲ್ಲಕ್ಕಿಂತ ಹೆಚ್ಚಾಗಿ ತಂಡದ ಕ್ಯಾಪ್ಟನ್ ಸುದೀಪ್ ತಮ್ಮಲ್ಲೆ ಪ್ರಾಜೆಕ್ಟ್ ಗಳನ್ನು ಬದಿಗಿಟ್ಟು ಸಂಪೂರ್ಣವಾಗಿ ಕ್ರಿಕೆಟ್ ನಲ್ಲೇ ತೊಡಗಿಕೊಂಡು ತಂಡಕ್ಕೆ ಆನೆಬಲ ತಂದಿದ್ದಾರೆ.

English summary
Karnataka Bulldozers, the champions of CCL 3 will be locking horns with Mumbai Heroes, which is being headed by actor Sunil Shetty. The second semi-final match of CCL 4 is scheduled to be held at Lal Bahadur Stadium, 7.00 pm after the first semi-final match between Kerala Strikers and Bhojpuri Dabanggs.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada