For Quick Alerts
  ALLOW NOTIFICATIONS  
  For Daily Alerts

  SIIMA 2013: ಶಾರ್ಜಾದಲ್ಲಿ ದಕ್ಷಿಣ ತಾರೆಗಳ ಕಲರವ

  By Rajendra
  |

  ಸೌಂತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ಸ್ (SIIMA) 2013ಕ್ಕೆ ವೇದಿಕೆ ಸಿದ್ಧವಾಗಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ(UAE) ಶಾರ್ಜಾದಲ್ಲಿನ ಎಕ್ಸ್ ಪೋ ಸೆಂಟರ್ ನಲ್ಲಿ ಹಾಕಿರುವ ಕೆಂಪು ರತ್ನಗಂಬಳಿ ಮೇಲೆ ದಕ್ಷಿಣದ ತಾರೆಗಳ ಕಲರವ ಶುಕ್ರವಾರ(ಸೆ.13) ಶುರುವಾಗಿದೆ.

  ಎರಡು ದಿನಗಳ ಈ ವರ್ಣರಂಜಿತ ಕಾರ್ಯಕ್ರಮವನ್ನು 'ಚಂದ್ರ'ಮುಖಿ ಶ್ರೀಯಾ ಸರನ್, ಸೋನು ಸೂದ್, ಆರ್ಯ ಹಾಗೂ ರಾಣಾ ದಗ್ಗುಬಾಟಿ ನಿರೂಪಿಸುತ್ತಿದ್ದಾರೆ. ಈಗಾಗಲೆ ನಾಮಿನೇಷನ್ ಪಟ್ಟಿ ಪ್ರಕಟಿಸಲಾಗಿದೆ. ಇನ್ನೇನಿದ್ದರೂ ಯಾರ ಮುಡಿಗೆ SIIMA ಪ್ರಶಸ್ತಿ ಎಂಬುದಷ್ಟೇ ಉಳಿದಿರುವ ಕುತೂಹಲ.

  ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ತಾರೆಗಳು SIIMA ಪ್ರಶಸ್ತಿ ಸಂಭ್ರಮದಲ್ಲಿ ಹಾಡಿ ಕುಣಿಯಲಿದ್ದಾರೆ. ಹಂಸಿಕಾ ಮೋಟ್ವಾನಿ, ಪ್ರಿಯಾಮಣಿ, ಅಮಲಾ ಪೌಲ್ ಸೇರಿದಂತೆ ಹಲವಾರು ತಾರೆಗಳೂ ವೇದಿಕೆ ಮೇಲೆ ತಮ್ಮ ಝಲಕ್ ತೋರಲಿದ್ದಾರೆ.

  ಮೊದಲ ದಿನದ ಕಾರ್ಯಕ್ರಮವನ್ನು ತೆಲುಗಿನ ಲಕ್ಷ್ಮಿ ಮಂಚು, ಮಾಧವನ್ ಹಾಗೂ ಪಾರ್ವತಿ ಓಮನ್ ಕುಟ್ಟನ್ ನಿರೂಪಿಸಲಿದ್ದಾರೆ. ದಕ್ಷಿಣದ ತಾರೆಗಳಾದ ಧನುಷ್, ಸಿಲಂಬರಸನ್ (ಸಿಂಬು), ಖುಷ್ಬೂ, ವಿಕ್ರಂ, ಪ್ರಕಾಶ್ ರಾಜ್, ಶರತ್ ಕುಮಾರ್ ಇತರರು ವೇದಿಕೆ ಮೇಲೆ ಮಿಂಚಿದ್ದಾರೆ.

  ಮೊದಲ ದಿನ ಉದಯೋನ್ಮುಖ ತಾರೆಗಳನ್ನು ಗೌರವಿಸಲಾಗುತ್ತದೆ. ಎರಡನೇ ದಿನ SIIMA ಪ್ರಶಸ್ತಿಗಳಿಗೆ ಮೀಸಲು. ಶಾರ್ಜಾದಲ್ಲಿ ಕಂಡುಬಂದ ತಾರೆಗಳ ಮೇಲೆ ಒಂದು ಕಣ್ಣಾಕೋಣ ಬನ್ನಿ.

  ಶ್ರುತಿ ಹಾಸನ್ ಮಿಂಚಿದ್ದು ಹೀಗೆ

  ಶ್ರುತಿ ಹಾಸನ್ ಮಿಂಚಿದ್ದು ಹೀಗೆ

  ಶ್ರುತಿ ಹಾಸನ್ ಅವರು ಈ ಬಾರಿ ಅತ್ಯುತ್ತಮ ತಾರೆ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ವೇದಿಕೆ ಮೇಲೆ ಅವರು ಮಿಂಚಿದ್ದು ಹೀಗಿದೆ.

  ಅಮಲಾ ಪೌಲ್ ಅಮಲೇರಿಸುವ ನಾಟ್ಯ

  ಅಮಲಾ ಪೌಲ್ ಅಮಲೇರಿಸುವ ನಾಟ್ಯ

  ಮೊದಲ ದಿನ ನಟಿ ಅಮಲಾ ಪೌಲ್ ಸಹ ಹೆಜ್ಜೆ ಹಾಕಿ ಸೊಂಟ ಬಳುಕಿಸಿ ರಂಜಿಸಿದರು.

  ಪ್ರಿಯಾಮಣಿ ಕುಣಿದಿದ್ದು ಹೀಗೆ

  ಪ್ರಿಯಾಮಣಿ ಕುಣಿದಿದ್ದು ಹೀಗೆ

  ನಮ್ಮ ಬೆಂಗಳೂರು ಅಮ್ಮಣ್ಣಿ ಪ್ರಿಯಾಮಣಿ ಸಹ ಯಾವುದರಲ್ಲೂ ಕಮ್ಮಿ ಇಲ್ಲ ಎಂಬಂತೆ ಕುಣಿದರು.

  ವೇದಿಕೆ ಕಂಗೊಳಿಸಿದ ಹಂಸಿಕಾ ಮೋಟ್ವಾನಿ

  ವೇದಿಕೆ ಕಂಗೊಳಿಸಿದ ಹಂಸಿಕಾ ಮೋಟ್ವಾನಿ

  ಹಂಸಿಕಾ ಮೋಟ್ವಾನಿ ಅವರಂತೂ ವೇದಿಕೆ ಮೇಲೆ ಕಂಗೊಳಿಸುತ್ತಿದ್ದರು. ಅತ್ಯುತ್ತಮ ತಾರೆ ಪ್ರಶಸ್ತಿಗೆ ಅವರು ನಾಮಿನೇಟ್ ಆಗಿದ್ದಾರೆ.

  ವೇದಿಕೆ ಮೇಲೆ ಸಮೀರಾ ರೆಡ್ಡಿ ಸರಸ

  ವೇದಿಕೆ ಮೇಲೆ ಸಮೀರಾ ರೆಡ್ಡಿ ಸರಸ

  ಸಮೀರಾ ರೆಡ್ಡಿ ಸಹ ಯಾರಿಗಿಂತ ತಾನೇನು ಕಮ್ಮಿ ಎಂದು ವೇದಿಕೆ ಮೇಲೆ ಕುಣಿದಿದ್ದು ಹೀಗೆ.

  ಕಪ್ಪು ದಿರಿಸಿನಲ್ಲಿ ಕಂಗೊಳಿಸಿದ ಚಾರ್ಮಿ ಕೌರ್

  ಕಪ್ಪು ದಿರಿಸಿನಲ್ಲಿ ಕಂಗೊಳಿಸಿದ ಚಾರ್ಮಿ ಕೌರ್

  ಕಪ್ಪು ದಿರಿಸಿನಲ್ಲಿ ಚಾರ್ಮಿ ಕೌರ್ ಕಾಣಿಸಿಕೊಂಡದ್ದು ಹೀಗೆ. ಅವರ ಡಾನ್ಸ್ ನಯನ ಮನೋಹರವಾಗಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

  ಗಮನಸೆಳೆದ ಪಾರ್ವತಿ ಮೆಲ್ಟನ್

  ಗಮನಸೆಳೆದ ಪಾರ್ವತಿ ಮೆಲ್ಟನ್

  ಪಾರ್ವತಿ ಮೆಲ್ಟನ್ ಸಹ ಅಷ್ಟೇ ಕಪ್ಪು ದಿರಿಸಿನಲ್ಲಿ ಎಲ್ಲರ ಗಮನಸೆಳೆದರು.

  ಎಲ್ಲರ ಕಣ್ಮನ ಸೆಳೆದ ತಾರೆ

  ಎಲ್ಲರ ಕಣ್ಮನ ಸೆಳೆದ ತಾರೆ

  ವೆಟ್ಟೈ ಮನ್ನನ್ ತಾರೆ ತಮ್ಮ ಚಮ್ಮಕ್ ಡಾನ್ಸ್ ಮೂಲಕ ಎಲ್ಲರ ಕಣ್ಮನ ತಣಿಸಿದರು.

  ದೇವಿಶ್ರೀ ಪ್ರಸಾದ್ ಕಾಣಿಸಿಕೊಂಡಿದ್ದು ಹೀಗೆ

  ದೇವಿಶ್ರೀ ಪ್ರಸಾದ್ ಕಾಣಿಸಿಕೊಂಡಿದ್ದು ಹೀಗೆ

  ದಕ್ಷಿಣ ಚಿತ್ರರಂಗದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ಸ್ಟೇಜ್ ಮೇಲೆ ಕಾಣಿಸಿಕೊಂಡದ್ದು ಹೀಗೆ.

  ಒಂದು ಕಲರ್ ಫುಲ್ ನೋಟ

  ಒಂದು ಕಲರ್ ಫುಲ್ ನೋಟ

  ಕ್ಯಾಮೆರಾ ವಂಡರ್ ಕಣ್ಣಲ್ಲಿ ತಾರೆಗಳು ಬಂಧಿಯಾಗಿದ್ದು ಹೀಗೆ. ವೇದಿಕೆ ಮೇಲಿಂದ ಒಂದು ಕಲರ್ ಫುಲ್ ನೋಟ.

  ವೇದಿಕೆಯ ವರ್ಣರಂಜಿತ ನೋಟ

  ವೇದಿಕೆಯ ವರ್ಣರಂಜಿತ ನೋಟ

  ಪ್ರಶಸ್ತಿ ಪ್ರಧಾನ ವೇದಿಕೆಯ ವರ್ಣರಂಜಿತ ನೋಟ. ಇದನ್ನು ನೋಡಲು ಎರಡು ಕಣ್ಣು ಸಾಲದು.

  English summary
  South Indian International Movie Awards (SIIMA) 2013 kick started yesterday, September 12, 2013 in Expo Centre, Sharjah, United Arab Emirates (UAE). Many celebrities from the South Indian film industries walked the red carpet on Thursday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X