»   » ಸೆನ್ಸಾರ್ ಪ್ರಾಬ್ಲಂ ಖತಂ, ಪುನೀತ್ ಪವರ್ ಬೆಳ್ಳಿತೆರೆಗೆ

ಸೆನ್ಸಾರ್ ಪ್ರಾಬ್ಲಂ ಖತಂ, ಪುನೀತ್ ಪವರ್ ಬೆಳ್ಳಿತೆರೆಗೆ

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸೆನ್ಸಾರ್ ಮಂಡಳಿಯ ತೊಂದರೆಯಿಂದಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಪವರ್*** ಚಿತ್ರ ಬಿಡುಗಡೆ ಮುಂದೆ ಹೋಗುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದ್ದು ನಿಮಗೆಲ್ಲ ಗೋತ್ತೆ ಇದೆ. ಆದರೆ, ಈಗ ಸೆನ್ಸಾರ್ ಮಂಡಳಿ ಸಮಸ್ಯೆ ಬಗೆಹರಿದಿದ್ದು, ಹೊಸ ಸದಸ್ಯರ ನೇಮಕವಾಗಿದೆ.

ಹೀಗಾಗಿ ಹಬ್ಬದ ಸಮಯಕ್ಕೆ ಸರಿಯಾಗಿ ಪವರ್ ಸ್ಟಾರ್ ಅವರ ಪವರ್ ಚಿತ್ರ ಬೆಳ್ಳಿ ತೆರೆಯ ಮೇಲೆ ಪವರ್ ಫುಲ್ ಎಂಟ್ರಿ ಕೊಡುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ.

ಗಣೇಶ ಹಬ್ಬದ ಸುದೀರ್ಥ ವಾರಾಂತ್ಯದಲ್ಲಿ ಚಿತ್ರ ಬಿಡುಗಡೆ ಎಂಬುದು ಮೊದಲೇ ಘೋಷಣೆಯಾಗಿತ್ತು. ಪುನೀತ್ ರಾಜ್ ಕುಮಾರ್ ಹಾಘು ತ್ರಿಷಾ ಕೃಷ್ಣನ್ ಜೋಡಿ ನೋಡಲು ಅಭಿಮಾನಿಗಳು ಕಾತುರಾಗಿದ್ದರು. ಆದರೆ, ಮುಂಬೈನ ಸೆನ್ಸಾರ್ ಅಂಗಡಿ ಬಾಗಿಲು ಬಂದ್ ಆದಮೇಲೆ ಕನ್ನಡ ಚಿತ್ರರಂಗಕ್ಕೆ ಸರ್ಟಿಫಿಕೇಟ್ ನೀಡುವವರು ಇಲ್ಲವಾಗಿ ಪವರ್ ಚಿತ್ರ ರಿಲೀಸ್ ಡೇಟ್ ಪಕ್ಕಾ ಮಾಡಲು ಆಗಿರಲಿಲ್ಲ. [ಅತಂತ್ರದತ್ತ ಕನ್ನಡ ಚಿತ್ರಗಳು]

ಚಿತ್ರ ಸೆನ್ಸಾರ್ ಆಗಿ ಬಂದರೆ ಗಣೇಶ ಹಬ್ಬಕ್ಕೆ ಖಂಡಿತವಾಗಿಯೂ ಪವರ್ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ನಿರ್ದೇಶಕ ಮಾದೇಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Censor Board gets new members Puneeth Power film to release on Aug 29

ಬೆಂಗಳೂರು ಸೆನ್ಸಾರ್ ಮಂಡಳಿಯಲ್ಲಿ ಅಧಿಕಾರಿಗಳ ಕೊರತೆಯ ನಂತರ, ಮುಂಬೈ ಸೆನ್ಸಾರ್ ಮಂಡಳಿಯಿಂದ ಚಿತ್ರ ಬಿಡುಗಡೆ ಮಾಡಿಸಲು ಹೋಗಬೇಕಾಗಿತ್ತು. ಬಹುಪರಾಕ್, ಮಿಸ್ ಮಲ್ಲಿಗೆ, ಶರಣ್ ಅಧ್ಯಕ್ಷ ಮುಂತಾದ ಚಿತ್ರಗಳಿಗೆ ಮುಂಬೈ ಸೆನ್ಸಾರ್ ಬೋರ್ಡ್ ಸರ್ಟಿಫಿಕೇಟ್ ನೀಡಿತ್ತು. ಸೆನ್ಸಾರ್ ಅಧಿಕಾರಿಯಾಗಿರುವ ನಾಗೇಂದ್ರ ಸ್ವಾಮಿ ಅವರು ಕನ್ನಡ ಚಿತ್ರಗಳನ್ನು ಆದಷ್ಟು ಬೇಗ ಕ್ಲಿಯರ್ ಮಾಡಿ ಉತ್ತಮ ಸಹಕಾರ ನೀಡಿದ್ದರು.

ಪ್ರಾದೇಶಿಕ ಸೆನ್ಸಾರ್ ಮಂಡಳಿಯ ಕರ್ನಾಟಕ ವಿಭಾಗದಲ್ಲಿ ಜುಲೈ 1 ರಿಂದ ಯಾವುದೇ ಚಿತ್ರಪ್ರದರ್ಶನವಾಗಿಲ್ಲ. ಯಾವುದೇ ಚಿತ್ರಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ. ಈಗ 25ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ 20 ಜನ ಸದಸ್ಯರ ತಂಡವನ್ನು ಸೆನ್ಸಾರ್ ಮಂಡಳಿಗೆ ಬುಧವಾರ ನೇಮಕ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ. ಹೀಗಾಗಿ ನಿರ್ಮಾಪಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ, ಅಭಿಮಾನಿಗಳು ಸಂತಸದಿಂದ ಕುಣಿದಾಡಿದ್ದಾರೆ.

English summary
Censor Board gets new members Puneeth Rajkumar starrer Power film likely to release on Aug 29 during the Ganesh Chaturthi festival season.
Please Wait while comments are loading...